*ಗೋಣಿಕೊಪ್ಪ, ಅ. ೨೭: ಮಕ್ಕಳಿಗೆ ಸಂಸ್ಕಾರ ಕಲಿಸಿ, ಉತ್ತಮ ಸತ್ಪçಜೆಯಾಗಿ ರೂಪಿಸುವುದೇ ಪೋಷಕರು ಸಮಾಜಕ್ಕೆ ನೀಡುವ ದೊಡ್ಡ
ಕೊಡುಗೆ ಎಂದು ತಲಚೇರಿ ಅಮೃತಾನಂದಮಯಿ ಮಠಾಧೀಪತಿ ಸ್ವಾಮಿ ಅಬೇಧಾಮಿತ್ರನಂದಾಪುರಿ ಹೇಳಿದರು. ಗೋಣಿಕೊಪ್ಪ ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಕೊಡಗು ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆಸಿದ ಓಣಾಘೋಷಂ ಆಚರಣೆಯಲ್ಲಿ ಮಾತನಾಡಿದರು.
ರಾಮನ ಆದರ್ಶ ಬದುಕು ನಮ್ಮ ಗುರಿಯಾಗಬೇಕು. ರಾಮ ತನ್ನನ್ನು ತಾನು ಯಾರೆಂದು ತಿಳಿದು ದೇವಮಾನವನಾದ, ಮಹಾನ್ ವೇದಾಂತಿಯಾಗಿದ್ದರೂ ತನ್ನ ಮನಸ್ಸನ್ನು ನಿಯಂತ್ರಿಸಿಕೊಳ್ಳಲಾಗದ ವ್ಯಕ್ತಿತ್ವದಿಂದಾಗಿ ರಾವಣ ಪ್ರಾಣ ಕಳೆದುಕೊಂಡ. ಭಾರತಕ್ಕೆ ತನ್ನದೇ ಆದ ಪರಂಪರೆ ಸಂಸ್ಕೃತಿಯೂ ಇದೆ. ಹಿಂದೂ ಧರ್ಮ ಲೋಕಕ್ಕೆ ಉತ್ತಮ ಬದುಕು ನಡೆಸುವ ಬಗ್ಗೆ ತಿಳಿಸುವ ಗುರುವಾಗಿದೆ ಎಂದರು.
ಅನ್ಯ ಧರ್ಮಗಳಿಗೆ ಒಂದೇ ಗ್ರಂಥವಿದ್ದರೆ ಹಿಂದೂ ಧರ್ಮಕ್ಕೆ ಉಪನಿಷತ್ತು, ರಾಮಾಯಣ, ಮಹಾಭಾರತ ಭಗವದ್ಗೀತೆಗಳಂತಹ ಧರ್ಮ ಗ್ರಂಥಗಳಿವೆ. ಸಂಸ್ಕಾರದಿAದ ಹೇಗೆ ಜೀವನ ನಡೆಸಬಹುದು ಎಂಬ ವಿಚಾರಗಳನ್ನು ಈ ಗ್ರಂಥಗಳು ತಿಳಿಸುತ್ತವೆ. ಬದುಕನ್ನು ತನ್ನ ಹಾದಿಗೆ ನಿಯಂತ್ರಿಸಿಕೊAಡು, ಮೌಲ್ಯಾಧಾರಿತ ಜೀವನ ನಡೆಸಿದಾಗ ಅರ್ಥ ಮತ್ತು ಗುರಿ ಸಿಗಲಿದೆ. ರಾಮಾಯಣ ಮಹಾಭಾರತ ಗ್ರಂಥಗಳು ಆದರ್ಶ ಬದುಕು ನಡೆಸುವ ಬಗ್ಗೆ ತಿಳಿಸುತ್ತದೆ ಎಂದು ವ್ಯಾಖ್ಯಾನಿಸಿದರು.
(ಮೊದಲ ಪುಟದಿಂದ) ನಮ್ಮ ಆತ್ಮ ಶಕ್ತಿಗಾಗಿ ದೇವರನ್ನು ಆರಾಧಿಸುವುದು, ಉತ್ತಮ ಗುಣಗಳಾಗಿ ದೇವರನ್ನು ಪ್ರಾರ್ಥಿಸುವುದರಿಂದ ಸಂಕಷ್ಟಗಳಿAದ ಪಾರಾಗಿ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಿದೆ. ನಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ಸಿಗದೇ ಇರುವ ಪರಿಣಾಮ ಶಾಲಾ ಕಾಲೇಜು ಹಂತದಲ್ಲೇ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಉತ್ತಮ ಸಂಸ್ಕಾರವನ್ನು ಕಲಿಸಿದರೆ, ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಕರೆ ನೀಡಿದರು.
ಲೇಖಕಿ ಮಿಲನ ಕೆ. ಭರತ್ ಮಾತನಾಡಿ, ಕೊಡಗಿನ ಹುತ್ತರಿ ಹಾಗೂ ಓಣಂ ಆಚರಣೆಗೆ ಕೇರಳ ಮತ್ತು ಕೊಡಗಿನ ನಡುವೆ ಸಂಬAಧ ಬೆಸೆದಿದೆ. ಓಣಂ ಆಚರಣೆಯ ೯೦ ದಿನಗಳಲ್ಲಿ ಕೊಡಗಿನ ಹುತ್ತರಿ ಸುಗ್ಗಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ನಾವು ಬದುಕನ್ನ ಕಟ್ಟಿಕೊಳ್ಳುವ ರೀತಿ ಬದಲಾಗಿದೆ. ಹಣ ಮತ್ತು ಆಸ್ತಿಗಾಗಿ ಜೀವನ ನಡೆಸುವ ವ್ಯವಸ್ಥೆ ರೂಪುಗೊಂಡಿದೆ. ಮಕ್ಕಳನ್ನು ಈ ದೇಶದ ಆಸ್ತಿಯಾಗಿ ಮಾಡುವುದನ್ನು ಮರೆತಿದ್ದೇವೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ನೀಡುವುದರಿಂದ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಓಣಾ ಘೋಷಂ ಸಮಿತಿ ಅಧ್ಯಕ್ಷ ಎಂ.ಎಸ್. ಸುಬ್ರಮಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಯೋಗ ಶಿಕ್ಷಕಿ ಪೋಡಮಾಡ ಭವಾನಿ ನಾಣಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಮಾತನಾಡಿದರು.
ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಎನ್. ಆರ್. ಅಮೃತ್ ರಾಜನ್, ಪ್ರಧಾನ ಕಾರ್ಯದರ್ಶಿ ವಿ. ವಿ. ಅರುಣ್‌ಕುಮಾರ್, ಸಮಾಜದ ಪದಾಧಿಕಾರಿಗಳು ಸದಸ್ಯರು, ಇದ್ದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಜನಾಂಗದ ಮಕ್ಕಳಿಗೆ, ಕ್ರೀಡಾ ಸಾದನೆಗಳಿಗೆ ಸನ್ಮಾನ ನಡೆಯಿತು.