ವೀರಾಜಪೇಟೆ, ಅ. ೨೭: ವೀರಾಜಪೇಟೆಯಲ್ಲಿ ಫುಟ್‌ಪಾತ್ ನಿರ್ವಹಣೆ ಮತ್ತು ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ತೀವ್ರ ತೊಂದರೆ ಉಂಟಾಗಿದೆ. ಪ.ಪಂನಿAದ ಪುರಸಭೆಗೆ ಮೇಲ್ದರ್ಜೆಗೇರಿದ ವೀರಾಜಪೇಟೆ ಯಲ್ಲಿ ದಿನ ಕಳೆದಂತೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಅನೇಕ ಸಮಸ್ಯೆಗಳು ತಲೆದೋರಿದ್ದು, ಅಭಿವೃದ್ಧಿಗಳು ನೆನೆಗುದಿಗೆ ಬಿದ್ದಿವೆ.
ವೀರಾಜಪೇಟೆ ಪಟ್ಟಣದಲ್ಲಿ ಸಮಸ್ಯೆಗಳದ್ದೇ ಕಾರುಬಾರು, ಪ್ರತಿದಿನ ಟ್ರಾಫಿಕ್ ಜಾಮ್ ಸಮಸ್ಯೆ ಒಂದೆಡೆ ಯಾದರೆ ಮತ್ತೊಂದೆಡೆ ಶುಚಿತ್ವದ ಕೊರತೆ. ಇನ್ನು ಮುಖ್ಯ ರಸ್ತೆಗಳ ಬದಿಯಲ್ಲಿರುವ ಚರಂಡಿಗಳ ಮೇಲೆ ಅಳವಡಿಸಿರುವ ಸಿಮೆಂಟ್ ಹೊದಿಕೆ ಮೇಲೆ ನಡೆದುಕೊಂಡು ಹೋದರಂತೂ ಆಸ್ಪತ್ರೆಗೆ ತೆರಳಬೇಕು. ಈ ಚರಂಡಿಗೆ ಸಮೀಪ ಪಾರ್ಕಿಂಗ್ ಮಾಡುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ವಾಹನದ ಚಕ್ರ ಚರಂಡಿ ಒಳಗೆ ಬೀಳುತ್ತದೆ.
ವೀರಾಜಪೇಟೆಯಲ್ಲಿ ಎಲ್ಲೆಂದರಲ್ಲಿ ತರಕಾರಿ ಅಂಗಡಿಗಳು, ಬೀದಿ ಬದಿ ಆಹಾರ ತಯಾರಿಕೆ ಅಂಗಡಿಗಳು ತಲೆ ಎತ್ತುತ್ತಿವೆ. ಹಲವರು ಫುಟ್‌ಪಾತ್‌ಗಳಲ್ಲಿ ಗಾಡಿಗಳನ್ನು ನಿಲ್ಲಿಸಿಕೊಳ್ಳುತ್ತಿದ್ದಾರೆ.
ಸಂತೆ ದಿನಗಳಲ್ಲಿ ವಾಹನಗಳನ್ನು ನಿಲ್ಲಿಸಿ ಈರುಳ್ಳಿ, ಟೊಮೆಟೊ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರಿಂದ ಪ್ರಮುಖ ರಸ್ತೆಯಲ್ಲಿ ಸಾರ್ವಜನಿಕರು ಓಡಾಟ ನಡೆಸದಂತಾಗಿದೆ. ಮಾರುಕಟ್ಟೆ ಮಾರಾಟಗಾರರಿಲ್ಲದೆ ಬಿಕೋ ಎನ್ನುತ್ತಿದೆ. ಆದರೆ, ಫುಟ್‌ಪಾತ್‌ಗಳಲ್ಲಿ ಮಾತ್ರ ಪ್ರತಿದಿನ ಹೊಸ ಅಂಗಡಿಗಳು ತಲೆ ಎತ್ತುತ್ತಿವೆ. ಇತ್ತೀಚೆಗೆ ಜನಸಂದಣಿ ಹೆಚ್ಚಾಗಿರುವ ವೀರಾಜಪೇಟೆಯಲ್ಲಿ ಬೆಳಿಗ್ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಕಾರು ಚಾಲಕ ರಸ್ತೆ ಬದಿಯಲ್ಲಿ ತನ್ನ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಚರಂಡಿ ಮೇಲೆ ಇದ್ದ ಸಿಮೆಂಟ್ ಹೊದಿಕೆ ಜಾರಿ ಕಾರಿನ ಮುಂಭಾಗ ಚರಂಡಿ ಒಳಗೆ ಬಿದ್ದು ಸಂಕಷ್ಟಕ್ಕೀಡಾಯಿತು. ಕೂಡಲೇ ಸ್ಥಳೀಯರು ಹರಸಾಹಸ ಪಟ್ಟು ಕಾರನ್ನು ಮೇಲಕ್ಕೆತ್ತಿ ಸಹಕರಿಸಿದರು.
ಪಾದಚಾರಿಗಳು ನಡೆದಾಡುವ ಜಾಗದಲ್ಲಿ ತ್ಯಾಜ್ಯಗಳೆಲ್ಲ ತುಂಬಿ ದುರ್ನಾಥ ಬೀರಿ ಬೀದಿ ನಾಯಿಗಳು ಗುಂಪು ಗುಂಪಾಗಿ ಈ ತ್ಯಾಜ್ಯಗಳ ಸಮೀಪ ಸುತ್ತಾಡುತ್ತಾ ಸಾರ್ವಜನಿ ಕರಿಗೆ ಭಯವನ್ನು ಕೂಡ ಹುಟ್ಟಿಸುತ್ತದೆ. ಆದರೂ ನಮ್ಮ ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿಗೆ ಮನಸಾಕ್ಷಿ ಅನು ಗುಣವಾಗಿ ಚಿಂತನೆ ಮಾಡದರಿಂದ ವೀರಾಜಪೇಟೆ ಪಟ್ಟಣ ಅವ್ಯವಸ್ಥೆಗಳ ತಾಣವಾಗಿ ಮಾರ್ಪಟ್ಟಿದೆ.
ಪಾದಚಾರಿಗಳು ನಡೆದಾಡುವ ಜಾಗದಲ್ಲಿ ಗುಂಡಿ ಬಿದ್ದು ವರ್ಷವಾದರೂ ದುರಸ್ತಿ ಇಲ್ಲ, ತ್ಯಾಜ್ಯ ತುಂಬಿ ರಸ್ತೆ ಯಾವುದು, ಚರಂಡಿ ಯಾವುದು ಎಂಬುದು ಗೊತ್ತಾಗದ ಹಾಗೇ ಆಗಿದೆ.
ಗಲೀಜು ತೆರವುಗೊಳಿಸುವಲ್ಲಿ ನಿರ್ಲಕ್ಷ÷್ಯ
ಹದಗೆಟ್ಟಿರುವ ರಸ್ತೆಗಳ ಸ್ಥಿತಿ ಒಂದೆಡೆಯಾದರೆ ಇನ್ನು ಇಲ್ಲಿನ ಅನೇಕ ಪ್ರದೇಶಗಳಲ್ಲಿ ಸಂಗ್ರಹ ಗೊಂಡಿರುವ ತ್ಯಾಜ್ಯ ವಿಲೇವಾರಿಗೂ ನಿರ್ಲಕ್ಷ÷್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಜಿಟಿಜಿಟಿ ಮಳೆಯಿಂದಾಗಿ ಗಲೀಜೆಲ್ಲಾ ಅಕ್ಕಪಕ್ಕದ ರಸ್ತೆಗೆ ಹರಿದು ಪಾದಚಾರಿಗಳು ಸಹ ಕಿರಿಕಿರಿ ಅನುಭವಿಸುವಂತಾಗಿದೆ.
ಇಕ್ಕಟ್ಟಾಗಿರುವ ರಸ್ತೆಯಲ್ಲಿ ಕಿತ್ತು ಹೋಗಿರುವ ಕಾಂಕ್ರಿಟ್, ಡಾಂಬರ್ ಗಳು, ರಸ್ತೆಯಲ್ಲೇ ನೀರು ನಿಂತು ಸೃಷ್ಟಿಯಾದ ಗುಂಡಿಗಳು, ಫುಟ್ಪಾತನ್ನೇ ಆವರಿಸಿರುವ ವ್ಯಾಪಾರಿಗಳು, ಇಂಚಿAಚು ಸಾಗಲೂ ಪರದಾಡುವ ವಾಹನಗಳು, ಕಿವಿಗಡಚಿಕ್ಕುವ ಹಾರ್ನ್ ಸದ್ದು, ವೀರಾಜಪೇಟೆಯಲ್ಲಿ ಸಾಮಾನ್ಯವಾಗಿದೆ.
ಫುಟ್ಪಾತ್ ಮಾಯ
ರಸ್ತೆ ಫುಟ್ಪಾತ್ ವ್ಯಾಪಾರಿಗಳ ಪಾಲಾಗಿದೆ. ಇದರ ಜತೆಗೆ, ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುವುದರಿಂದ ಟ್ರಾಫಿಕ್ ಜಾಮ್ ಆಗುತ್ತದೆ. ಮಳೆ ಬಂದಾಗ ಲಂತೂ ರಸ್ತೆಗಳು ಸಂಪೂರ್ಣ ಜಲಾವೃತ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ.
ಪಟ್ಟಣದೊಳಗೆ ಬೆಳಿಗ್ಗೆ ಹಾಗೂ ಸಂಜೆ ವೇಳೆ ಪಾದಚಾರಿಗಳ ಓಡಾಟ ಹೆಚ್ಚಾಗಿರುತ್ತದೆ. ಫುಟ್ಪಾತ್ ಸರಿಯಿಲ್ಲದೆ ಇರುವುದರಿಂದ ಪಾದಚಾರಿಗಳು ನೂಕಾಟದ ನಡುವೆ ನಡೆಯು ವಂತಾಗಿದೆ. ಬಹುಪಾಲು ಕಡೆ ಜನ ಜಂಗುಳಿಯಾದಾಗ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಿಳಿಯುತ್ತಾರೆ. ಇದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ.
ವಾಹನಗಳ ಕಿರಿಕಿರಿ
ಇನ್ನು ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ವಾಹನಗಳು ಹಾಗೂ ಪಾದಚಾರಿಗಳ ನಡುವೆ ಪ್ರತಿದಿನ ಮಾತಿನ ಚಕಮಕಿ ಸಾಮಾನ್ಯ. ಪುರಸಭೆ, ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಇತರೆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳ ಪ್ರಯಾಣಕ್ಕೆ ಸರಿಯಾದ ಮಾರ್ಗಗಳೇ ಇಲ್ಲ.
ವಾಹನಗಳನ್ನು ಸಿಕ್ಕ ಸಿಕ್ಕಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯ ಆಗಿಬಿಟ್ಟಿದೆ. ಸುತ್ತಮುತ್ತಲ ಹಳ್ಳಿಗಳು ಸೇರಿದಂತೆ ವಸತಿ ಪ್ರದೇಶU Àಳಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಪೇಟೆಗೆ ಬರುವವರ ಪ್ರಮಾಣ ತುಸು ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಹಬ್ಬದ ದಿನಗಳು, ಬುಧವಾರ, ಭಾನುವಾರ ಮತ್ತಿತರ ರಜಾ ದಿನಗಳಲ್ಲಿ ಪೇಟೆ ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಇಂತಹ ಸಂದರ್ಭಗಳಲ್ಲಿ ವಾಹನ ದಟ್ಟಣೆ ವಿಪರೀತವಾಗಿ ರುತ್ತದೆ. ಕೆಲವರು ದ್ವಿಚಕ್ರ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಹೋಗುವುದರಿಂದ ವಾಹನ ಸಂಚಾರಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ದಿನ ದಿನ ವೀರಾಜಪೇಟೆಯಲ್ಲಿ ಒಂದಿಲ್ಲೊAದು ಸಮಸ್ಯೆಗಳ ಸರಮಾಲೆ ಬಿಗಡಾಯಿ ಸುತ್ತಿದ್ದು ಪುರಸಭೆ ವತಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.