ಶನಿವಾರಸಂತೆ, ಅ.೨೭: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀವಿಜಯ ವಿನಾಯಕ ದೇವಸ್ಥಾನದಲ್ಲಿ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ೩೪ನೇ ವರ್ಷದ ವರ್ಷದ ಶ್ರೀಗೌರಿ-ಗಣೇಶ ವಿಸರ್ಜನೋತ್ಸವ ಶನಿವಾರ ರಾತ್ರಿ ಅದ್ದೂರಿಯಾಗಿ, ಜರುಗಿತು. ಮೆರವಣಿಗೆ ಹಾಗೂ ಪೂಜೆಯಲ್ಲಿ ಪಾಲ್ಗೊಂಡಿದ್ದ ೭ ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಉತ್ಸವಕ್ಕೆ ಸಾಕ್ಷಿ ಯಾದರು. ದಸರಾ ಮಾದರಿಯಲ್ಲಿ ಪಾಲ್ಗೊಂಡಿದ್ದರು.

ಸAಜೆ ೬ ಗಂಟೆಗೆ ಮಡಿಕೇರಿ ವಿಧಾನಸಭಾ ಕೇತ್ರದ ಶಾಸಕ ಡಾ. ಮಂತರ್ ಗೌಡ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.

ರಾತ್ರಿ ೮ ಗಂಟೆಗೆ ಶ್ರೀಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಕೊಣನೂರಿನ ಅನ್ನಪೂರ್ಣೇಶ್ವರಿ ಲೈಟಿಂಗ್ಸ್ನ ವಿದ್ಯುತ್ ದೀಪಾಲಂಕೃತ ರಥದಲ್ಲಿ ಕುಳ್ಳಿರಿಸಿ, ಗುರುವಾಯನ Àಕೆರೆಯ ರಾಜ್ಯಪ್ರಶಸ್ತಿ ವಿಜೇತ ರಾಜೀವ್ ಎಲ್. ಕುಂದರ್ ಅವರ ವಂಶಿ ಆರ್ಟ್ಸ್ ತಂಡದವರ ಕೀಲು ಕುದುರೆ ಮತ್ತು ಗೊಂಬೆ ಕುಣಿತ, ಹಿಂದೂ ಫಯರ್ ಬ್ಯಾಂಡ್, ಸಕಲೇಶಪುರ ತಂಡದವರಿAದ “ನಾಸಿಕ್ ಬ್ಯಾಂಡ್’’ ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದವರಿAದ ‘‘ಲೋಕ ಕಲ್ಯಾಣಕ್ಕಾಗಿ ಗಣಪತಿಯೂ ಮಯೂರೇಷರಾಗಿ (ಮೊದಲ ಪುಟದಿಂದ) ಸಿಂಧೂ ದೈತ್ಯ ರಾಜನ ವಧೆ ಎಂಬ ಚಲನವಲನ ಹೊಂದಿರುವ ಕಥಾನಕವನ್ನು ಅತ್ಯಾಕರ್ಷಕ ಟ್ಯಾಬ್ಲೊ ಪ್ರದರ್ಶನ ದೊಂದಿಗೆ ಚಿತ್ತಾಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಶನಿವಾರ ಸಂತೆಯ ಪ್ರಸಿದ್ಧ ಎಸ್.ವಿ.ಎಲ್.ಡಿ.ಜೆ. ಸೌಂಡ್ಸ್, ಲೈಟಿಂಗ್ಸ್ ಮತ್ತು ಸ್ಟುಡಿಯೋ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ಸಂದರ್ಭ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಜನತೆ ಡಿ.ಜೆ. ಸೌಂಡ್ಸ್ಗೆ ಹೆಜ್ಜೆ ಹಾಕುತ್ತಾ ಕುಣಿದು ಸಂಭ್ರಮಿಸಿದರು. ಭಾನುವಾರ ಬೆಳಗ್ಗಿನ ಜಾವ ೭ ಗಂಟೆಯವರೆಗೂ ಮೆರವಣಿಗೆ ನಡೆದು ನಂತರ ಸಮೀಪದ ಕಾಜೂರು ಹೊಳೆಯಲ್ಲಿ ಶ್ರೀಗೌರಿ-ಗಣೇಶ ಮೂರ್ತಿಗಳನ್ನು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ವಿಸರ್ಜಿಸ ಲಾಯಿತು. ಪೂಜಾ ಕಾರ್ಯ ಹಾಗೂ ಮೆರವಣಿಗೆ ಸಂದರ್ಭ ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಶನಿವಾರಸಂತೆ ಪೊಲೀಸ್ ಠಾಣೆ ಪಿಎಸ್‌ಐಗಳಾದ ಗೋವಿಂದ್ ರಾಜ್, ಚಂದ್ರ ಹಾಗೂ ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದರು. ಆದರ್ಶ ವಿಜಯ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎಸ್.ಆರ್.ಮಧು, ಉಪಾಧ್ಯಕ್ಷ ಶೇಷಗಿರಿ. ಕಾರ್ಯದರ್ಶಿ ಕುಮಾರ್, ಉಪ ಕಾರ್ಯದರ್ಶಿ ಎಸ್.ಕೆ. ರವಿ, ಖಜಾಂಚಿ ಯಶವಂತ್ ಆಚಾರ್ಯ ಹಾಗೂ ಸದಸ್ಯರು ಪೂಜಾ ಕೈಂಕರ್ಯ ಹಾಗೂ ಮೆರವಣಿಗೆಯಲ್ಲಿ ಹಾಜರಿದ್ದರು.