ಶ್ರೀಮಂಗಲ, ಅ. ೨೮: ಕೊಡವರು ವಿವಿಧ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದರಿಂದ ಇಂದು ಜನಾಂಗವನ್ನು ವಿಶ್ವ ಗುರುತಿಸಿ ಗೌರವಿಸುತ್ತಿದೆ, ಈ ಆದರ್ಶದಿಂದ ನಾವು ಸಾಧನೆ ಮಾಡಿ ಜನಾಂಗಕ್ಕೆ ಹೆಮ್ಮೆ ತರುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಟಿ.ಶೆಟ್ಟಿಗೇರಿ ಕೊಡವ ಸಮಾಜದ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಯ ದೊಡ್ಡ ಪಾತ್ರವಿದೆ. ಆದರೆ ಜಾತಿ ಬಲವಿಲ್ಲದ ಕೊಡವ ಜನಾಂಗ ಜಾತಿಯನ್ನು ಮೀರಿ ಸಾಧಿಸಬೇಕು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಜಾತಿ ಬಲದಲ್ಲಿ ಪ್ರಾಬಲ್ಯ ಮತ್ತು ಪ್ರಾತಿನಿದ್ಯ ಸಹ ಜಾಸ್ತಿ ಇರುತ್ತದೆ. ನಾವು ಜಾತಿಯನ್ನು ಮೀರಿ ಸಾಧಿಸಲು ಬುದ್ಧಿಶಕ್ತಿ,ವಿದ್ಯಾಶಕ್ತಿ, ಪ್ರತಿಭೆಯಿಂದ ಮಾತ್ರ ಸಾಧ್ಯ. ಆದ್ದರಿಂದ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಪಡೆಯುವ ದಾರಿಯನ್ನು ಕೊಡವ ಸಮಾಜಗಳು ತೋರಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಕೊಡವ ಹಬ್ಬ, ಆಚಾರ, ವಿಚಾರ ಸಂಸ್ಕೃತಿಯನ್ನು ಕಾಪಾಡುವುದು ಕೊಡವ ಸಮಾಜದ ಆದ್ಯ ಕರ್ತವ್ಯ, ೩೨ ಕೊಡವ ಸಮಾಜಗಳು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಟಿ.ಶೆಟ್ಟಿಗೇರಿ ಕೊಡವ ಸಮಾಜ ಜನಾಂಗ ಹೆಮ್ಮೆ ಪಡುವಂತಹ ಬಹಳ ಜವಾಬ್ದಾರಿಯುತವಾದ ಸೇವೆಯನ್ನು ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಪ್ರತಿಯೊಂದು ಕೊಡವ ಸಮಾಜಗಳು ಟಿ. ಶೆಟ್ಟಿಗೇರಿ ಕೊಡವ ಸಮಾಜದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿದರೆ ಜನಾಂಗದ ಆಚಾರ- ವಿಚಾರ, ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅರಿವು ಬರುತ್ತದೆ. ಹೊರಗೆ ಇರುವವರು ಸಹ ಬಂದು ಸೇರಲು ಅವಕಾಶವಾಗುತ್ತದೆ. ಕಾವೇರಿ ಚಂಗ್ರಾAದಿ ಹಬ್ಬವನ್ನು ೧೦ ದಿನಗಳವರೆಗೆ ಜನೋತ್ಸವವಾಗಿ ಮಾಡುತ್ತಿರುವ ಸಂದರ್ಭ ಕಾವೇರಿ ನದಿಯ
(ಮೊದಲ ಪುಟದಿಂದ) ಪಾವಿತ್ರö್ಯತೆಯನ್ನು ಕಾಪಾಡಬೇಕಾಗಿದೆ. ಕೋಟ್ಯಂತರ ಜನರಿಗೆ ಜೀವ ಹಾಗೂ ಜೀವನವನ್ನು ಕಾವೇರಿ ನದಿಯಾಗಿ ಕರುಣಿಸಿದೆ. ಆದ್ದರಿಂದ ಕಾವೇರಿ ನದಿಯು ಕಲುಷಿತವಾಗದಂತೆ ಕಾಪಾಡಬೇಕೆಂದು ಕರೆ ನೀಡಿದರು.
ಸಭೆಯ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಕಳೆದ ಎಂಟು ವರ್ಷದಿಂದ ವಿವಿಧ ಆಡಳಿತ ಮಂಡಳಿ ತನು,ಮನ, ಧನ ಸಹಾಯದಿಂದ ಪತ್ತಾಲೋದಿ ಕಾರ್ಯಕ್ರಮ ೮ನೇ ವರ್ಷಕ್ಕೆ ಕಾಲಿಟ್ಟಿದ್ದು, ಕಾವೇರಿ ಮಾತೆಯ ಆಶೀರ್ವಾದದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮ:
ಈ ಸಂದರ್ಭ ರಾಜ್ಯ ಸರ್ಕಾರದ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪಡೆದ ಕೈಬುಲಿರ ಪಾರ್ವತಿ ಬೋಪಯ್ಯ, ದಾನಿಗಳಾದ ಅಜ್ಜಮಾಡ ವೇಣು ಸುಬ್ಬಯ್ಯ, ಅಜ್ಜಮಾಡ ಲವ ಕುಶಾಲಪ್ಪ, ಅಜ್ಜಮಾಡ ಪ್ರಮೀಳಾ ಕರುಂಬಯ್ಯ, ಅಜ್ಜಮಾಡ ಚಿಮ್ಮ ತಿಮ್ಮಯ್ಯ ಹಾಗೂ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಚೆಟ್ಟಂಡ ಲತಾ ಚರ್ಮಣ ಪ್ರಾರ್ಥಿಸಿ, ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ ಚಂಗುಲAಡ ಅಶ್ವಿನಿ ಸತೀಶ್ ಅವರು ನಿರೂಪಿಸಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು.
ಸಾAಸ್ಕೃತಿಕ ಕಾರ್ಯಕ್ರಮ:
ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆಯ ಮಕ್ಕಳು ಹಾಗೂ ಚೆಟ್ಟಂಗಡ ಕುಟುಂಬದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ರೂಟ್ಸ್ ಶಾಲೆಯ ಮುಖ್ಯ ಶಿಕ್ಷಕಿ ನೆಲ್ಲೀರ ಪೂರ್ಣಿಮಾ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಸಹ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್, ಖಜಾಂಚಿ ಚಂಗುಲAಡ ಸತೀಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಕ್ರೀಡಾ ಸಂಚಾಲಕ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರುಗಳಾದ ಚಂಗುಲAಡ ಅಶ್ವಿನಿ ಸತೀಶ್, ತಡಿಯಂಗಡ ಸೌಮ್ಯ ಕರುಂಬಯ್ಯ, ತೀತಿರ ಅನಿತಾ ಸುಬ್ಬಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ, ಮುಕ್ಕಾಟೀರ ಸಂದೀಪ್, ಕರ್ನಂಡ ರೂಪ ದೇವಯ್ಯ, ಬೊಳ್ಳೇರ ಅಪ್ಪುಟ ಪೊನ್ನಪ್ಪ ಹಾಜರಿದ್ದರು.
-ಅಣ್ಣೀರ ಹರೀಶ್ ಮಾದಪ್ಪ