ಮಡಿಕೇರಿ, ಅ. ೨೭: ಸಿಬ್ಬಂದಿಗಳು ಸಹ ಸಹಕಾರ ಕ್ಷೇತ್ರದಲ್ಲಿ ಆಧಾರ ಸ್ಥಂಭಗಳು. ಅವರ ಹಗಲಿರುಳು ದುಡಿಮೆ, ಶ್ರದ್ಧೆ, ವಿಷಯ ಜ್ಞಾನ, ಪ್ರಾಮಾಣಿಕತೆ ಪ್ರಯತ್ನದಿಂದಾಗಿ ಕೊಡಗಿನ ಸಹಕಾರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಟ್ಟಣ ಸಹಕಾರ ಬ್ಯಾಂಕ್, ಪಿಕಾರ್ಡ್ ಬ್ಯಾಂಕ್ಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಹಣ ದುರುಪಯೋಗ, ಚುನಾವಣೆ ಹಾಗೂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳ ಕರ್ತವ್ಯ, ಜವಾಬ್ದಾರಿ ಕುರಿತು ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷವೂ ಯೂನಿಯನ್ ನಿಂದ ಮುಖ್ಯ ಕಾರ್ಯನಿರ್ವಾಹಕರಿಗೆ ಆದ್ಯತೆ ಮೇರೆಗೆ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಪಡೆದಂತ ಮಾಹಿತಿಯನ್ನು ಮುಖ್ಯ ಕಾರ್ಯನಿರ್ವಾಹಕರು ತಮ್ಮ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಂಡು ಕೊಡಗಿನ ಸಹಕಾರ ಕ್ಷೇತ್ರವನ್ನು ಬಲಿಷ್ಠಗೊಳಿಸುವಲ್ಲಿ ತಮ್ಮ ಮಹತ್ತರ ಪಾತ್ರಕ್ಕೆ ಬದ್ಧರಾಗಿದ್ದಾರೆ. ಆದರೆ ಇತ್ತೀಚಿನ ಕಾಯ್ದೆ ಬದಲಾವಣೆ ಪ್ರಕ್ರಿಯೆಯು ರಾಜ್ಯಪಾಲರ ಅಂಗಳದಲ್ಲಿದ್ದು ಸಂಘ-ಸAಸ್ಥೆಗಳು ಗೊಂದಲದಲ್ಲಿ ಕಾರ್ಯನಿರ್ವ ಹಿಸುವಂತಾಗಿದೆ. ಸಂಸ್ಥೆಗಳಿಗೆ ತೊಂದರೆಯಾಗದAತೆ ಆರ್ಥಿಕ ಹೊರೆಯಾಗದಂತೆ ರಾಜಕೀಯ ಪ್ರಭಾವ ಬೀರದಂತೆ ಕ್ರಿಯಾಶೀಲ ವನ್ನಾಗಿಸುವ ನಿಟ್ಟಿನಲ್ಲಿ ಅನುಭವಸ್ಥರ ಹೊಣೆಗಾರಿಕೆಯಿಂದ ತಿದ್ದುಪಡಿ ಪ್ರಕ್ರಿಯೆಗಳು ನಡೆಯಬೇಕು.
ಸಾಲ ವಸೂಲಾತಿ ಎಂಬುದೇ ಅಸಾಧ್ಯವೆಂದಿರಬಹುದಾದ ಜಿಲ್ಲೆಯ ಕೆಲವು ಭಾಗಗಳಿಂದಲೂ ಸಹ ಪಿಕಾರ್ಡ್ ಬ್ಯಾಂಕ್ನವರು ಪ್ರಗತಿ ಸಾಧಿಸಿ ಜಿಲ್ಲೆಗೆ ಬಹುಮಾನ ತಂದಿದ್ದಾರೆ. ಜಿಲ್ಲೆಯಲ್ಲಿರುವ ಮೂರು ಪಿಕಾರ್ಡ್ ಬ್ಯಾಂಕ್ಗಳು ಈ ಬಾರಿ ಲಾಭ ಹೊಂದಿರುವುದು ಅಭಿನಂದನೀ ಯವಾಗಿದೆ. ಇಂತಹ ಛಲದಿಂದಾಗಿ ಮಹತ್ತರ ಪ್ರಗತಿ ಸಾಧಿಸಬಹುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರಿಗಳಿಗೆ ಪ್ರಯೋಜನ ವಾಗುವಂತಹ ಕ್ರಿಯಾತ್ಮಕ ಯೋಜನೆ ಗಳನ್ನು ಕೈಗೊಳ್ಳಬೇಕು ಎಂದರು.
ಮೂರು ದಿವಸಗಳ ಹಿಂದೆ ಕರ್ನಾಟಕ ಸರ್ಕಾರದ ಸಹಕಾರ ಸಪ್ತಾಹದ ಪೂರ್ವಭಾವಿ ಸಭೆಯಲ್ಲಿ ಮಾನ್ಯ ಸಹಕಾರ ಸಚಿವರು ದಕ್ಷಿಣ ಕನ್ನಡ ಹಾಗೂ ಕೊಡಗಿನ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿ ನವೆಂಬರ್ ೧೪ ರಿಂದ ೨೦ ರವರೆಗೆ ಏರ್ಪಡಿಸಲಾಗುವ ಸಹಕಾರ ಸಪ್ತಾಹವನ್ನು ಧ್ವಜಾರೋಹಣದಿಂದ ಆರಂಭಿಸಿ ಯಶಸ್ವಿ ಆಚರಣೆಗೆ ಸಂಘಗಳು ಕೈಜೋಡಿಸಲು ಕರೆ ನೀಡಿ ಶುಭ ಹಾರೈಸಿದರು.
ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಜಿ.ಆರ್. ವಿಜಯ್ ಕುಮಾರ್ ಅವರು ಹಣ ದುರುಪಯೋಗ, ಚುನಾವಣೆ, ಮುಖ್ಯ ಕಾರ್ಯನಿರ್ವಾಹಕರ ಕರ್ತವ್ಯ, ಜವಾಬ್ದಾರಿ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಯೂನಿಯನ್ ಉಪಾಧ್ಯಕ್ಷರಾದ ಪಿ.ಸಿ. ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಎನ್.ಎ. ರವಿ ಬಸಪ್ಪ, ಸಿ.ಎಸ್. ಕೃಷ್ಣ ಗಣಪತಿ, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ಬಿ. ಯತೀಶ್, ವಿ.ಕೆ. ಅಜಯ್ ಕುಮಾರ್, ಎನ್.ಎ. ಮಾದಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶ್ರೀಮತಿ ಶೈಲಜಾ ಉಪಸ್ಥಿತರಿದ್ದರು. ಯೂನಿಯನ್ ವ್ಯವಸ್ಥಾಪಕಿ ಆರ್. ಮಂಜುಳ ಪ್ರಾರ್ಥಿಸಿದರು. ನಿರ್ದೇಶಕರಾದ ಕೆ.ಎಂ. ತಮ್ಮಯ್ಯ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು.