ಸೋಮವಾರಪೇಟೆ,ಅ.೨೮: ಸಾರ್ವಜನಿಕ ಸ್ಮಶಾನಕ್ಕೆ ತೆರಳುವ ದಾರಿಗೆ ಸ್ಥಳೀಯರೋರ್ವರು ತಡೆಯೊಡ್ಡಿದ್ದು, ತಕ್ಷಣ ತೆರವು ಗೊಳಿಸುವಂತೆ ಆಗ್ರಹಿಸಿರುವ ಸಾರ್ವಜನಿಕರು, ತಪ್ಪಿದ್ದಲ್ಲಿ ಹೋರಾಟದ ಹಾದಿ ಹಿಡಿಯ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬAಧಿತ ಮನವಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದು, ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿರುವ ಸ್ಥಳೀಯರು, ಹಲವಾರು ದಶಕಗಳಿಂದ ಇದ್ದ ಜಾಗವನ್ನು ದಿಢೀರ್ ಬಂದ್ ಮಾಡಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲುಮಕ್ಕಿ ಗ್ರಾಮದ ಸ.ನಂ. ೮/೧೩ರ ಪೈಸಾರಿ ಜಾಗದಲ್ಲಿ ಗ್ರಾಮದ ಸ್ಮಶಾನವಿದ್ದು, ಇಲ್ಲಿಗೆ ತೆರಳಲು ರಸ್ತೆಯೂ ಇತ್ತು. ಕಳೆದ ೨೦೧೫ಕ್ಕಿಂತ ಮುಂಚೆಯಿAದಲೂ ಇದೇ ರಸ್ತೆಯಲ್ಲಿ ಸ್ಮಶಾನಕ್ಕೆ ತೆರಳಲಾಗುತ್ತಿತ್ತು. ಆದರೆ ಇದೀಗ ರಸ್ತೆಗೆ ಒತ್ತಿಕೊಂಡAತೆ ಇರುವ ಸ್ಥಳೀಯರೋರ್ವರು ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಕೊರೆದು ರಸ್ತೆಯೇ ಇಲ್ಲದಂತೆ ಮಾಡಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಗ್ರಾಮದಲ್ಲಿ ಯಾರಾದರೂ ಮೃತರಾದರೆ ಅವರ ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ತೆರಳಲು ದಾರಿ ಇಲ್ಲವಾಗಿದೆ. ಈ ಹಿಂದೆಯೂ ಈ ವಿಷಯದ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕ ಸ್ಮಶಾನಕ್ಕೆ ತೆರಳಲು ದಾರಿಯನ್ನು ಬಿಡಿಸಿಕೊಡಬೇಕೆಂದು ಒತ್ತಾಯಿಸಿ ಪ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ತಕ್ಷಣ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಈ ಹಿಂದೆ ಇದ್ದ ದಾರಿಯನ್ನು ಒತ್ತುವರಿದಾರರಿಂದ ಬಿಡಿಸಿಕೊಡಬೇಕು. ತಪ್ಪಿದ್ದಲ್ಲಿ ಗ್ರಾಮಸ್ಥರೆಲ್ಲರೂ ಸಂಬAಧಿಸಿದ ಅಧಿಕಾರಿಗಳ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಗ್ರಾಮಸ್ಥರಾದ ಪಿ. ಹರೀಶ್, ಸಂತೋಷ್, ಗಗನ್, ಹರೀಶ್, ಪಾಪಯ್ಯ, ಕಾರ್ತಿಕ್ ಸೇರಿದಂತೆ ಇತರರು ನೇರುಗಳಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ.