ಪೊನ್ನಂಪೇಟೆ, ಅ. ೨೭: ಭಾರತ ಹಾಕಿ ತಂಡವನ್ನು ಈ ಹಿಂದೆ ಕೊಡಗು ಜಿಲ್ಲೆಯಿಂದ ಹಲವು ಕ್ರೀಡಾಪಟುಗಳು ಪ್ರತಿನಿಧಿಸಿದರು. ಆದರೆ ಪ್ರಸ್ತುತ ಭಾರತ ಹಾಕಿ ತಂಡದಲ್ಲಿ ಜಿಲ್ಲೆಯ ಒಬ್ಬ ಕ್ರೀಡಾಪಟು ಕೂಡ ಇಲ್ಲದಿರುವುದು ಬೇಸರ ತರಿಸಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ವಿಷಾದ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಹಾಕಿ ಟರ್ಫ್ ಮೈದಾನದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕೊಡಗು ಉಪನಿರ್ದೇಶಕರ ಕಚೇರಿ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ರೀಡೆಗೆ ಅದರಲ್ಲೂ ಹಾಕಿಗೆ ಅಪಾರವಾದ ಕೊಡುಗೆಯನ್ನು ಕೊಡಗು ಜಿಲ್ಲೆ ನೀಡಿದೆ. ಇಲ್ಲಿನ ಜನ ಯಾವುದೇ ಕ್ರೀಡೆ ನಡೆದರೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಆ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾಟವನ್ನು ನಡೆಸಲು ಆಸಕ್ತಿ ವಹಿಸಲಾಯಿತು.
ಒರಿಸ್ಸಾದಲ್ಲಿ ೨೫ ಟರ್ಫ್ ಮೈದಾನಗಳನ್ನು ನಿರ್ಮಾಣ ಮಾಡಿ, ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಕಾರಣ ಭಾರತ ದೇಶವನ್ನು ಪ್ರತಿನಿಧಿಸುವ ಬಹುಪಾಲು ಕ್ರೀಡಾಪಟುಗಳು ಒರಿಸ್ಸಾ ರಾಜ್ಯದವರೇ ಆಗಿದ್ದಾರೆ. ನಮ್ಮ ರಾಜ್ಯದಲ್ಲಿ ಕ್ರೀಡಾ ಪಟುಗಳಿಗೆ ಮೂಲಭೂತ ಸೌಲಭ್ಯ ಗಳನ್ನು ಕೊಡಲು ವಿಫಲವಾಗಿರುವ ಕಾರಣ ರಾಷ್ಟ್ರ ಅಥವಾ ಅಂತರ ರಾಷ್ಟಿçÃಯ ಮಟ್ಟದಲ್ಲಿ ಕರ್ನಾಟಕ ಅಥವಾ ಕೊಡಗಿನಿಂದ ಕ್ರೀಡಾಪಟು ಗಳ ಕೊರತೆ ಕಾಡುತ್ತಿದೆ. ಈ ಬಗ್ಗೆ ಗಮನಹರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಶಾಸಕ ಎ. ಎಸ್. ಪೊನ್ನಣ್ಣ ಹೇಳಿದರು.
ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ
ಜಿಲ್ಲೆ ಕೊಡಗು : ಯದುವೀರ್
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಭಾರತದ ಯಾವುದೇ ಒಂದು ಜಿಲ್ಲೆಗೆ ಹೋಲಿಕೆ ಮಾಡಿದರೂ, ಕ್ರೀಡೆಗೆ ಕೊಡಗು ಜಿಲ್ಲೆಯಲ್ಲಿ ನೀಡುವಷ್ಟು ಪ್ರೋತ್ಸಾಹವನ್ನು ನಾವು ಎಲ್ಲಿಯೂ ಕಾಣಲು ಸಾಧ್ಯವಿಲ್ಲ.
ನಮ್ಮ ರಾಷ್ಟಿçÃಯ ಕ್ರೀಡೆಯಾಗಿರುವ ಹಾಕಿಗೆ, ಇನ್ನೂ ಹೆಚ್ಚಿನ ರೀತಿಯ ಪ್ರೋತ್ಸಾಹ ಅಗತ್ಯವಿದ್ದು, ಸಂಸದರ ನಿಧಿಯಿಂದ ಕ್ರೀಡೆಗೆ ದೊರೆಯುವ ಎಲ್ಲಾ ಸಹಕಾರವನ್ನು ನೀಡಲಾಗುವುದು. ಕ್ರೀಡೆಯ ಮೂಲಕ ಭಾರತದ ಏಕತೆಯನ್ನು ಎತ್ತಿಹಿಡಿಯೋಣ ಎಂದರು.
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಸ.ಪ ಪೂ. ಕಾಲೇಜು ಕಾಲೇಜು ಸಿಬಿಸಿ ಉಪಾಧ್ಯಕ್ಷ ಮೂಕಳೇರ ಕುಶಾಲಪ್ಪ, ಅಂತರರಾಷ್ಟಿçÃಯ ರಗ್ಬಿ ಆಟಗಾರ, ವೀರಾಜಪೇಟೆ ಪ್ರಗತಿ ಶಾಲೆ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್. ಸುಬ್ಬಯ್ಯ, ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಅಧ್ಯಕ್ಷ ಎಂ.ಕೆ. ರೋಹಿತ್, ಕೆಪಿಎಸ್ ಶಾಲೆ ಉಪಪ್ರಾಂಶುಪಾಲ ಎಂ.ಯು. ಚಂಗಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ್, ಪ್ರಮುಖರಾದ ಬಿ.ಟಿ. ಪೂರ್ಣೇಶ್, ಪಿ.ಎ. ಪ್ರಭುಕುಮಾರ್, ಕೆ.ಪಿ. ಮಹೇಶ್, ಇ.ಸುರೇಂದ್ರ, ಜಿ. ಗಿಡ್ಡಯ್ಯ, ಎಂ.ಎಸ್. ತಮ್ಮಯ್ಯ, ಟಿ.ಎಸ್. ಮಹೇಶ್, ಎಂ.ಎಸ್. ಬಸವರಾಜ್, ಎನ್. ಎಸ್. ವಿಜಯಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ದೈಹಿಕ ಶಿಕ್ಷಕ ಡ್ಯಾನಿ ಈರಪ್ಪ, ನಿವೃತ್ತ ಶಿಕ್ಷಕ ಮಂಜುನಾಥ್, ನಾಗರಿಕ ವೇದಿಕೆಯ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಆಲಿರ ಎರ್ಮು ಹಾಜಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ದೈಹಿಕ ಶಿಕ್ಷಕರು, ಇನ್ನಿತರರು ಇದ್ದರು.
ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಿಂದ ಕೊಡವ ಸಾಂಪ್ರದಾಯಿಕ ನೃತ್ಯ ಉಮ್ಮತ್ತಾಟ್ ಮೂಡಿಬಂತು. ಕೆಪಿಎಸ್ ಶಾಲೆ ಚಿತ್ರಕಲಾ ಶಿಕ್ಷಕ ಬಸವರಾಜ ಬಡಿಗೇರ್ ಪ್ರಾರ್ಥಿಸಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ರಂಗಧಾಮಪ್ಪ ಸ್ವಾಗತಿಸಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ. ಆರ್. ಗಾಯತ್ರಿ ವಂದಿಸಿ, ಚೋಕಿರ ಅನಿತಾ ನಿರೂಪಿಸಿದರು.
ಸಭಾಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಸಂಸದ ಯದುವೀರ್ ಒಡೆಯರ್ ಅವರು ಧ್ವಜಾರೋಹಣ ನೆರವೇರಿಸಿ, ಪಥಸಂಚಲನ, ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಫಲಿತಾಂಶ
೧೭ ವರ್ಷ ವಯೋಮಾನದೊಳಗಿನ ಬಾಲಕರ ವಿಭಾಗದಲ್ಲಿ ಕಲ್ಬುರ್ಗಿ ತಂಡ ಬೆಂಗಳೂರು ತಂಡದ ವಿರುದ್ಧ ೫ - ೪ ಗೋಲುಗಳ ಅಂತರದ ಜಯ ಸಾಧಿಸಿತು. ಕಲ್ಬುರ್ಗಿ ಪರ ಪ್ರೇಮ್ ೨, ಹರ್ಷ, ಸವಿ, ರಿಶೀಕ್ ತಲಾ ೧ ಗೋಲು ಹೊಡೆದರೆ, ಬೆಂಗಳೂರು ಪರ ವಿವಿನ್ ಮತ್ತು ಸುಪ್ರೀತ್ ತಲಾ ೨ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಳಗಾವಿ ತಂಡವನ್ನು ೯-೦ ಗೋಲುಗಳ ಅಂತರದ ಸುಲಭ ಜಯ ಸಾಧಿಸಿತು. ಮೈಸೂರು ಪರ ಶಶಿತ್ ಗೌಡ, ಲೆನಿನ್ ಮಾದಪ್ಪ, ಬೋಪಣ್ಣ, ಮೋಹನ್ ತಲಾ ೨, ದೀಪಕ್ ದೇವಯ್ಯ ೧ ಗೋಲು ಹೊಡೆದರು.
೧೭ ವರ್ಷ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಬೆಂಗಳೂರು ವಿರುದ್ಧ ೧೩-೦ ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿತು. ಮೈಸೂರು ತಂಡದ ಪರ ಶಾಲಿನಿ ಅಕ್ಷರ ತಲಾ ೩, ಲಕ್ಷಿö್ಮ, ವೈಷ್ಣವಿ ತಲಾ ೨, ಜೇವಿತ, ಪೂರ್ವಿ, ಶೈಲೂ ತಲಾ ೧ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಕೂಡಿಗೆ ತಂಡ ಕಲ್ಬುರ್ಗಿ ತಂಡದ ವಿರುದ್ಧ ೬-೧ ಗೋಲುಗಳ ಜಯ ಸಾಧಿಸಿತು. ಕೂಡಿಗೆ ತಂಡದ ಪರ ಪ್ರೀತಿ ೪, ಯಶಿಕ, ಪಂಚಮಿ ತಲಾ ೧ ಗೋಲು ಗಳಿಸಿದರೆ, ಕಲ್ಬುರ್ಗಿ ಪರ ನೀತಮ್ಮ ಏಕೈಕ ಗೋಲು ಹೊಡೆದರು.
೧೪ ವರ್ಷ ವಯೋಮಾನದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ವಿರುದ್ಧ ಕಲ್ಬುರ್ಗಿ ೬- ೧ ಗೋಲುಗಳ ವಿಜಯಮಾಲೆ ಧರಿಸಿತು. ಕಲ್ಬುರ್ಗಿ ಪರ ಸಿದ್ದಾರ್ಥ್ ೩, ಮನೋಜ್ ಕುಮಾರ್ ೨, ಅಭಿಷೇಕ್ ೨ ಗೋಲು ಗಳಿಸಿದರೆ, ಬೆಳಗಾವಿ ಪರ ಜಾವಿದ್ ಖಾನ್ ೧ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮೈಸೂರು ತಂಡ ೧೧-೦ ಗೋಲುಗಳ ಅಂತರದಿAದ ಮಣಿಸಿತು. ಮೈಸೂರು ಪರ ಯುವ ೫, ಶ್ರುಶಾಲ್, ಧವನ್ ತಲಾ ೨, ಆತ್ಮಿಕ್, ಶ್ರೀನಿವಾಸ್ ತಲಾ ೧ ಗೋಲು ಗಳಿಸಿದರು
೧೪ ವರ್ಷ ವಯೋಮಾನದೊಳಗಿನ ಬಾಲಕಿಯರ ಪಂದ್ಯದಲ್ಲಿ ಬೆಳಗಾವಿ ತಂಡ ಕಲ್ಬುರ್ಗಿ ತಂಡವನ್ನು ೧೭- ೦ ಗೋಲುಗಳ ಭಾರಿ ಅಂತರದಿAದ ಬಗ್ಗು ಬಡಿಯಿತು. ಬೆಳಗಾವಿ ಪರ ಶಿಲ್ಪಾ ಬರೋಬ್ಬರಿ ೯ ಗೋಲು ಗಳಿಸಿ ಮಿಂಚಿದರೆ, ಪ್ರೀತಿ ೫, ಸುಕನ್ಯಾ ೨, ಸೌಮ್ಯ ೧ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಂಗಳೂರು ತಂಡವನ್ನು ೮ - ೦ ಗೋಲುಗಳ ಅಂತರದಿAದ ಸೋಲಿಸಿತು. ಮೈಸೂರು ಪರ ತಾನ್ಯ ೪, ಪ್ರತೀಕ್ಷ ೩, ರಿಶಿಕ ೧ಗೋಲು ಗಳಿಸಿದರು. -ವರದಿ : ಚನ್ನನಾಯಕ