ಚೆಯ್ಯಂಡಾಣೆ, ಅ. ೨೭: ವೀರಾಜಪೇಟೆ ಸಮೀಪದ ಕಲ್ಲುಬಾಣೆ ಯಲ್ಲಿ ಕೆ.ಎಂ.ಜೆ., ಎಸ್.ವೈ.ಎಸ್., ಎಸ್.ಎಸ್.ಎಫ್. ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ತಿದ್ಕಾರೆ ಜೀಲಾನಿ ಹಾಗೂ ಜಲ್ಸೇ ಬುರ್ದಾ ಮಜ್ಲಿಸ್ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು.

ಕಲ್ಲುಬಾಣೆ ಸುನ್ನಿ ಸಂಘಟನೆಯ ನೇತಾರ ಅಬ್ದುಲ್ ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉದ್ಘಾಟಿಸಿ ಮಾತನಾಡಿದರು.

ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಕೆ.ಎಂ.ಜೆ. ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ ಮಾತನಾಡಿದರು.

ಮುಖ್ಯ ಭಾಷಣಗಾರರಾಗಿ ನೌಫಲ್ ಸಖಾಫಿ ಕಳಸ ಮಾತನಾಡಿ, ಶೈಖ್ ಜೀಲಾನಿರವರ ಜೀವನ ಚರಿತ್ರೆಯನ್ನು ವಿವರಿಸಿ ಅವರ ಆದರ್ಶಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.

ಜಲ್ಸೇ ಬುರ್ದಾ ಮಜ್ಲಿಸ್‌ಗೆ ಮದ್ಹ್ ಹಾಡುಗಾರ ಕಮರುದ್ದೀನ್ ಅನ್ವಾರಿ ಸಖಾಫಿ, ಅಂಶಾದ್ ಅನ್ವಾರಿ ಸಅದಿ, ಬಾದುಶಾ ಸಅದಿ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ದಾರುಲ್ ಫತಹ್ ಕೀಚೇರಿ ಮುದರಿಸ್ ಆದ ಸಯ್ಯದ್ ಸಮೀಹ್ ಅನ್ವಾರಿ ಅಹ್ಸನಿ ತಂಙಳ್ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.

ಈ ಸಂದರ್ಭ ಸುನ್ನೀ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಯ್ದೀನ್ ಕುಟ್ಟಿ ಹಾಜಿ, ಪ್ರಮುಖರಾದ ಎರ್ಮು ಹಾಜಿ, ಅಬೂಬಕ್ಕರ್ ಹಾಜಿ, ಕೆ.ಎಂ.ಜೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಕೋಶಾಧಿಕಾರಿ ಖಾಲಿದ್ ಫೈಝಿ, ಎಸ್.ವೈ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಎಸ್.ಎಸ್. ಎಫ್. ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಹಾಗೂ ಸಾಂಘಿಕ ದಾರ್ಮಿಕ ರಾಜಕೀಯ ನೇತಾರರು ಉಪಸ್ಥಿತರಿದ್ದರು. ಶಮೀರ್ ನಈಮಿ ಸ್ವಾಗತಿಸಿ ಜಾಫರ್ ಮಿಸ್ಬಾಹಿ ವಂದಿಸಿದರು.