ಮಡಿಕೇರಿ, ಅ. ೨೭: ಆರೋಗ್ಯ ಸಮಸ್ಯೆಯಿಂದ ನೊಂದು ವೃದ್ಧರೋರ್ವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಾಪೋಕ್ಲು ಸಮೀಪದ ಕಡಿಯತ್ತೂರು ಗ್ರಾಮದಲ್ಲಿ ನಡೆದಿದೆ.

ಕಡಿಯತ್ತೂರು ಗ್ರಾಮದ ಬಾಡನ ಆನಂದ (ಡಾಲಿ-೭೫) ಮೃತಪಟ್ಟ ವ್ಯಕ್ತಿ. ಆನಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಸ್ಟೊçÃಕ್ ಉಂಟಾಗಿ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಕಳೆದ ೧೦ ದಿನಗಳ ಹಿಂದಷ್ಟೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಇದರಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಾ. ೨೭ ರಂದು ಬೆಳಿಗ್ಗೆ ೧೦.೩೦ರ

(ಮೊದಲ ಪುಟದಿಂದ) ವೇಳೆಯಲ್ಲಿ ಮನೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಸ್ಥಳದಲ್ಲಿದ್ದ ಪತ್ನಿ ತಾರಾಮಣಿ ದೌಡಾಯಿಸಿ ನೋಡಿದಾಗ ಆನಂದ ಅವರು ತಲೆಗೆ ಗುಂಡು ಹೊಡೆದುಕೊಂಡು ಸಾವಿಗೀಡಾಗಿರುವುದು ಗೊತ್ತಾಗಿದೆ. ನಂತರ ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡರು. ಆನಂದ ಅವರಿಗೆ ಸೇರಿದ ಜಮ್ಮಾ ವಿನಾಯಿತಿಯ ಸಿಂಗಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ಆನಂದ ಅವರ ಪುತ್ರ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಪುತ್ರಿಯರು ಮದುವೆಯಾಗಿ ಬೇರೆಡೆ ನೆಲೆಸಿದ್ದಾರೆ. ಪತ್ನಿ ತಾರಾಮಣಿ ಅವರ ದೂರಿನನ್ವಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ ೧೯೪ ಅಡಿಯಲಿ ಪ್ರಕರಣ ದಾಖಲಾಗಿದೆ.