ಕೂಡಿಗೆ, ಅ. ೨೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೩-೨೪ನೇ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಿದ್ದಲಿಂಗ ಪುರದ ಸಮುದಾಯ ಭವನ ಸಭಾಂಗಣದಲ್ಲಿ ನಡೆಯಿತು.

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಜಲಜೀವನ್ ಕುಡಿಯುವ ನೀರಿನ ಸರಬರಾಜು ಯೋಜನೆಯ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಅಲ್ಲದೇ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಇದರ ಬಗ್ಗೆ ಸವಿಸ್ತಾರ ವಾದ ವರದಿಯನ್ನು ನೀಡುವಂತೆ ಗ್ರಾಮಸ್ಥರಾದ ಟಿ.ಕೆ ಪಾಂಡುರAಗ, ಪಿ.ಡಿ. ರವಿಮೂರ್ತಿ ಒತ್ತಾಯ ಮಾಡಿದರು. ಸಭೆಗೆ ಇಲಾಖೆಯ ವತಿಯಿಂದ ಆಗಮಿಸಿದ ಸಿಬ್ಬಂದಿ ಯಿಂದ ಸಮರ್ಪಕ ಉತ್ತರ ಬಾರದ ಕಾರಣ ಸಭೆಯಲ್ಲಿ ಸ್ವಲ್ಪ ಸಮಯದ ವರೆಗೆ ಚರ್ಚೆಗೆ ಗ್ರಾಸವಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುದ್ರಭೂಮಿಗೆ ಸಂಬAಧಿಸಿದAತೆ ಮತ್ತು ಆನೆ ಕಂದಕಗಳು ಸಮರ್ಪಕವಾಗಿ ಇಲ್ಲದ ಕಾರಣದಿಂದಾಗಿ ಕಾಡಾನೆಗಳು ಊರಿನತ್ತ ಬರುತ್ತಿರುವ ಬಗ್ಗೆ ಕಳೆದ ಅನೇಕ ಗ್ರಾಮ ಸಭೆಗಳಲ್ಲಿ ವಸತಿ ರಹಿತರಿಗೆ ಕಾಯ್ದಿರಿಸಿದ ಜಾಗದಲ್ಲಿ ವಸತಿ ಸೌಕರ್ಯ ವ್ಯವಸ್ಥೆಗೆ ಅನುಕೂಲ ಕಲ್ಪಿಸುವಂತೆ ಮನವಿ ಮತ್ತು ಅದಕ್ಕೆ ಸಂಬAಧಿಸಿದ ಚರ್ಚೆಗಳನ್ನು ನಡೆಸಿದರೂ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂಬ ದೂರುಗಳು ಗ್ರಾಮಸ್ಥರಿಂದ ಕೇಳಿಬಂದವು. ತೊರೆನೂರು ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪದಲ್ಲಿ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ ಇದ್ದರೂ ಸಿಬ್ಬಂದಿಗಳ ನೇಮಕಾತಿ ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮವಹಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಅಲ್ಲದೇ ನೀರಾವರಿ ಸೌಲಭ್ಯದ ಕಾಲುವೆಗಳ ದುರಸ್ತಿ ಆಗದಿರುವ ಬಗ್ಗೆ ಆಕ್ಷೇಪಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲುಕೊರೆ ನಡೆಯುತ್ತಿದ್ದರೂ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿದೆ ಇರುವುದರಿಂದಾಗಿ ಸಾರ್ವಜನಿಕರು ತಿರುಗಾಡಲು ಇರುವ ರೈತರ ಜಮೀನಿನ ರಸ್ತೆಯು ಹಾಳಾಗುತ್ತಿರುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರಾದ ಪಿ.ಡಿ.ರವಿ, ಜಗದೀಶ್, ಕೃಷ್ಣಗೌಡ, ರಾಮಕೃಷ್ಣ, ಮಹದೇವ, ಸುದೇಶ್, ಮೂರ್ತಿ ಗಮನ ಸೆಳೆದರು.

ಸಭೆಗೆ ಹಾಜರಿದ್ದ ಹಲವು ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ, ಸದುಪಯೋಗಪಡಿಸಿಕೊಳ್ಳಲು ಅನುಸರಿಸಬೇಕಾದ ಮಾಹಿತಿಯನ್ನು ಒದಗಿಸಿದರು.

ಸಭೆಯ ನೋಡೆಲ್ ಅಧಿಕಾರಿಯಾಗಿ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಕಾಳನಾಯಕ್ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರೂಪ ಮಹೇಶ್ ಸದಸ್ಯರಾದ ಬೇಬಿಯಣ್ಣ, ಶಿವಕುಮಾರ್, ದೇವರಾಜ್, ಪ್ರಕಾಶ್, ಯಶೋದ್ ಸಾವಿತ್ರಿ, ನಿಂಗಜಮ್ಮ, ಮಹದೇವ್, ಕೆ.ಡಿ.ಪಿ. ಸದಸ್ಯ ಜಗದೀಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ, ಅಭಿವೃದ್ಧಿ ಅಧಿಕಾರಿ ಶ್ಯಾಮ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.

ಮಧ್ಯಾಹ್ನದ ನಂತರ ಗ್ರಾಮಸಭೆಯಲ್ಲಿ ಇತರೆ ವಿಷಯಗಳ ಸಮಯದಲ್ಲಿ ಚರ್ಚೆಗಳಿಗೆ ಅವಕಾಶ ಕಲ್ಪಿಸಿಲ್ಲ ಅಲ್ಲದೇ ಸಭೆಗೆ ಅನೇಕ ಇಲಾಖೆಯ ಅಧಿಕಾರಿಗಳು ಗೈರಾದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಲಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಟಿ.ಕೆ. ಪಾಂಡುರAಗ, ಪಿ.ಡಿ.ರವಿ, ಮೂರ್ತಿ, ಕೃಷ್ಣ ಗೌಡ ಸೇರಿದಂತೆ ಹಲವು ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.