ಮಡಿಕೇರಿ, ಅ. ೨೮: ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ತಾಲೂಕು ಮತ್ತು ಹೋಬಳಿಗಳ ಮಟ್ಟದಲ್ಲಿ ಸರಕಾರಿ ಇಲಾಖೆಗಳ, ಸಂಘ ಸಂಸ್ಥೆಗಳ, ಸ್ತಿçÃಶಕ್ತಿ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳ ಸಹಕಾರದೊಂದಿಗೆ ಜಿಲ್ಲೆಯಾದ್ಯಂತ ಆಚರಿಸುವಂತೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮನವಿ ಮಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯಲ್ಲಿ ಇದೇ ಡಿಸೆಂಬರ್ ೨೦, ೨೧, ೨೨ ರಂದು ನಡೆಯಲಿದ್ದು, ಅದರ ಪ್ರಚಾರದ ಉದ್ದೇಶದಿಂದ ಅಕ್ಟೋಬರ್ ೨೯ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನೇಶ್ವರಿ ದೇವಾಲಯದಿಂದ ಕನ್ನಡ ಜ್ಯೋತಿ ರಥ ಯಾತ್ರೆ ಹೊರಟಿದ್ದು ಅದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಮ್ಮೇಳನ ಸಮಯದಲ್ಲಿ ಮಂಡ್ಯ ತಲುಪಲಿದೆ. ನೀಡಿ ಕಾರ್ಯಕ್ರಮ ನಡೆಸಿ ಬೀಳ್ಕೊಡ ಬೇಕು ಎಂದು ಆದೇಶಿಸಿರುವುದು ಸ್ವಾಗತಾರ್ಹ ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿ ಗೌರಮ್ಮ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಿದ್ದು ೧೫ ಕೃತಿಗಳು ಜಿಲ್ಲೆಯ ಲೇಖಕರು ನೀಡಿರುತ್ತಾರೆ. ಅದನ್ನು ಮೂರು ಜನ ತೀರ್ಪುಗಾರರಿಗೆ ಕಳುಹಿಸಿ ಉತ್ತಮವಾದ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡುವಂತೆ ತೀರ್ಮಾನಿಸಲಾಯಿತು.
ಈ ಬಾರಿ ನೂತನವಾಗಿ ಎರಡು ದತ್ತಿ ಪ್ರಶಸ್ತಿಗಳು ಲಭ್ಯವಾಗಿದ್ದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದ ವಿಜಯ ವಿಷ್ಣು ಭಟ್ ಅವರು ತಮ್ಮ ಹೆಸರಿನಲ್ಲಿ ಕೊಡಗಿನ ಮಹಿಳಾ ಲೇಖಕಿಯರ ಸಮಾಜ ಸಮಾಜಮುಖಿ ಕಥೆ ಕಾದಂಬರಿ ಲೇಖನಗಳಿಗೆ ಪ್ರಶಸ್ತಿ ಕೊಡುವಂತೆ ಆಶಯವಿಟ್ಟು ದತ್ತಿ ಸ್ಥಾಪನೆ ಮಾಡಿರುತ್ತಾರೆ. ಅಲ್ಲದೇ ಕೊಡಗಿನ ದಿನಪತ್ರಿಕೆ ಶಕ್ತಿ ಪತ್ರಿಕೆಯ ಸಂಸ್ಥಾಪಕರಾದ ದಿ. ಬಿ ಎಸ್ ಗೋಪಾಲಕೃಷ್ಣ ಅವರ ಹೆಸರಿನ ದತ್ತಿಯನ್ನು ಅವರ ಪುತ್ರ ಬಿ.ಜಿ ಅನಂತಶಯನ ಅವರು ಸ್ಥಾಪಿಸಿದ್ದು ಕೊಡಗು ಜಿಲ್ಲೆಯ ಪುರುಷ ಲೇಖಕರು ರಚಿಸಿರುವ ಉತ್ತಮ ಕೃತಿಗೆ ಪ್ರಶಸ್ತಿ ನೀಡಲು ಸೂಚಿಸಿರುತ್ತಾರೆ ಅದನ್ನು ಕೂಡ ಈ ವರ್ಷ ಪ್ರಾರಂಭಿಸಲಾಗುವುದು ಎಂದು ಕೇಶವ ಕಾಮತ್ ಮಾಹಿತಿ ನೀಡಿದರು. ಅಲ್ಲದೆ ಈ ಬಾರಿ ಒಟ್ಟಾಗಿ ೩೨ ದತ್ತಿ ಕಾರ್ಯಕ್ರಮಗಳಿದ್ದು, ಅವನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಮತ್ತು ಹೋಬಳಿ ಅಧ್ಯಕ್ಷರುಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೊಡಗು ಜಿಲ್ಲಾ ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್, ಸಹ ಕಾರ್ಯದರ್ಶಿಗಳಾದ ಜಲಜಾ ಶೇಖರ್, ಎ.ವಿ. ಮಂಜುನಾಥ್, ನಿರ್ದೇಶಕರುಗಳಾದ ಫ್ಯಾನ್ಸಿ ಮುತ್ತಣ್ಣ, ಸಹನಾ ಕಾಂತಬೈಲು, ಎಚ್.ಎಸ್ ಪ್ರೇಮ್ ಕುಮಾರ್, ತಾಲೂಕು ಅಧ್ಯಕ್ಷರುಗಳಾದ ರಾಜೇಶ್ ಪದ್ಮನಾಭ, ಕಡ್ಲೇರ ತುಳಸಿ ಮೋಹನ್, ಎಸ್.ಡಿ ವಿಜೇತ್, ಹೋಬಳಿ ಅಧ್ಯಕ್ಷರುಗಳಾದ ಎಂ.ಎನ್ ಮೂರ್ತಿ, ನೆರವಂಡ ಉಮೇಶ್, ಈರಮಂಡ ಹರಿಣಿ ವಿಜಯ್, ಬಿ.ಪಿ ಶಾಂತಮಲ್ಲಪ್ಪ, ನಂಗಾರು ಕೀರ್ತಿ ಪ್ರಸಾದ್, ವೀರರಾಜು, ಕ.ಸಾ.ಪ ಸಿಬ್ಬಂದಿ ರೇಣುಕಾ ಉಪಸ್ಥಿತರಿದ್ದರು.