ಕುಶಾಲನಗರ, ಅ. ೨೮: ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದ ಗೌಡ ಸಮಾಜ ಬಳಿ ನಡೆದಿದೆ.

ಏಳನೇ ಹೊಸಕೋಟೆಯ ಮುತ್ತು ಹಾಗೂ ಓಮನ ದಂಪತಿ ಪುತ್ರ ವಿನೋದ್ (೩೮) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಶಾಲನಗರದ ಗೌಡ ಸಮಾಜದ ಬಳಿ ಮೊಬೈಲ್ ಮಳಿಗೆಯನ್ನು ನಡೆಸುತ್ತಿದ್ದ ವಿನೋದ್‌ಗೆ ವಿವಾಹವಾಗಿದ್ದು, ಆರು ವರ್ಷದ ಪುತ್ರಿಯಿದ್ದು, ಪತ್ನಿ ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಮೊಬೈಲ್ ಮಳಿಗೆ ನಡೆಸುತ್ತಿದ್ದ ಇವರು, ಅದೇ ಕಟ್ಟಡದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸಿಸುತ್ತಿದ್ದರು. ಸಾಲಬಾಧೆಯಿಂದ ಆತ್ಯಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತ ಶರೀರವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.