ಸೋಮವಾರಪೇಟೆ, ಅ. ೨೮: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಭಾರತೀಯ ಭೂ ಸೇನೆಗೆ ಆಯ್ಕೆಯಾದ ಹಿನ್ನೆಲೆ, ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜು ವಿದ್ಯಾರ್ಥಿಗಳಾದ ಆಲೂರು ಸಿದ್ದಾಪುರ ಗ್ರಾಮದ ಕೆ.ವಿ. ಶಮಿತ್, ಕೆ.ವಿ. ಕಾರ್ತಿಕ್, ಚೌಡ್ಲು ಗ್ರಾಮದ ಸಿ.ಪಿ. ಸುಪ್ರಿನ್, ತಾಕೇರಿ ಗ್ರಾಮದ ನಿರಂಜನ್ ನಾಚಪ್ಪ ಅವರುಗಳು ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದು, ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಧರ್ಮ ಗುರುಗಳಾದ ವಿಜಯ್ ಕುಮಾರ್, ಅವಿನಾಶ್, ಪದವಿ ಕಾಲೇಜು ಪ್ರಾಂಶುಪಾಲ ಬಿ.ಆರ್. ಹರೀಶ್, ಪದವಿಪೂರ್ವ ಕಾಲೇಜಿನ ಪ್ರಾಂಶು ಪಾಲ ಥೋಮಸ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಹ್ಯಾರಿ ಮೋರಸ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕಾವ್ಯ ಇದ್ದರು.