ಬೆಂಗಳೂರು, ಅ. ೨೭: ದಕ್ಷಿಣ ಏಷ್ಯಾ ಮತ್ತು ಲ್ಯಾಟಿನ್ ಅಮೇರಿಕಾದಾದ್ಯಂತ ರಾಷ್ಟçಗಳಲ್ಲಿ ಅಕಾಲಿಕ ಮಳೆ, ಹೆಚ್ಚಿದ ತಾಪಮಾನ ಮತ್ತು ಅನಾವೃಷ್ಟಿಗೆ ಕಾರಣವಾಗುವ ಹವಾಮಾನ ವೈಪರೀತ್ಯಗಳು ಈಗಾಗಲೇ ಏರುತ್ತಿರುವ ಕಾಫಿ ಬೆಲೆ ಮತ್ತಷ್ಟು ಹೆಚ್ಚಲು ಕಾರಣ ಆಗಲಿದೆ. ಇದರಿಂದ ಪಾನೀಯವಾಗಿ ಕಾಫಿಯನ್ನು ಸೇವಿಸುವ ಗ್ರಾಹಕರ ಹೆಚ್ಚುತ್ತಿರುವ ಆದ್ಯತೆಯ ಜೊತೆಗೆ ಭಾರತೀಯ ಕಾಫಿ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
‘‘ಸ್ಥಳೀಯ ಮಾರುಕಟ್ಟೆಗಳು ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಅಭಿವೃದ್ಧಿ ಹೊಂದುತ್ತಿವೆ ಮತ್ತು ಹೆಚ್ಚಿನ ಕಾಫಿ ಬೆಳೆಗಾರರು ಉತ್ತಮ ಬೆಲೆ ಪಡೆಯಲಿದ್ದಾರೆ, ಬೆಳೆಗಾರರು ಪ್ರತಿ ವರ್ಷ ಮಾರಾಟ ಮಾಡಬಹುದಾಗಿದೆ ಮತ್ತು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ. ಅವರು ಬೆಲೆ ಕಡಿಮೆ ಎಂಬ ಕಾರಣಕ್ಕೆ ಸ್ಟಾಕ್ ಇರಿಸಿಕೊಂಡು ಕುಳಿತುಕೊಳ್ಳಬೇಕಾಗಿಲ್ಲ, ವ್ಯಾಪಾರಿಗಳೂ ಖರೀದಿಸಲು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ” ಎಂದು ಕಾಫಿ ಉದ್ಯಮದ ಸಲಹೆಗಾರ ವಿ. ವಿಘ್ನೇಶ್ ಹೇಳುತ್ತಾರೆ.
ನಿರೀಕ್ಷಿತ ಭವಿಷ್ಯದಲ್ಲಿ ಬೆಲೆಗಳು ಹೆಚ್ಚಾಗುತ್ತಲೇ ಇರುತ್ತವೆ ಎಂದು ವ್ಯಾಪಾರೋದ್ಯಮಿಗಳು ಮತ್ತು ಉದ್ಯಮ ತಜ್ಞರು ಅಭಿಪ್ರಾಯಿಸಿದ್ದಾರೆ.
‘‘ಇದು ಎರಡು ವರ್ಷಗಳ ನಂತರ ಗರಿಷ್ಠ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ. ಏಕೆಂದರೆ ಅದು ಆ ಮಟ್ಟವನ್ನು ದಾಟಿದಾಗ, ಕಾಫಿ ಸರಪಳಿಯಲ್ಲಿರುವ ವ್ಯಾಪಾರಿ, ಸಾಗಾಟದಾರ, ಉದ್ಯಮಿ ಮತ್ತು ಗ್ರಾಹಕ ಇವರಲ್ಲಿ ಯಾರಿಗಾದರೂ ಇದು ಸಂಪೂರ್ಣವಾಗಿ ಕೈಗೆಟುಕಲಾರದ ಪರಿಸ್ಥಿತಿ ಉಂಟಾಗಬಹುದು ಎಂದು ವಿಘ್ನೇಶ್ ಹೇಳಿದರು.
ಹೆಚ್ಚಿದ ಬೇಡಿಕೆ ಮತ್ತು ನಿರಂತರ ಪೂರೈಕೆ ಅಡೆತಡೆಗಳಿಂದಾಗಿ ಕಾಫಿ ಬೆಲೆಗಳು, ಮುಖ್ಯವಾಗಿ ಅರೇಬಿಕಾ ದರ ಕಳೆದ ೧೩ ವರ್ಷಗಳಲ್ಲಿ ಅತ್ಯಧಿಕ ಬೆಲೆಗಳನ್ನು ಮುಟ್ಟಿವೆ. ರೋಬಸ್ಟಾ ಕಾಫಿಯ ಉತ್ಪಾದನೆ ಕೊರತೆಯು ಬೇಡಿಕೆಯನ್ನು ಹುಟ್ಟುಹಾಕಿರುವುದರಿಂದ ಬೆಲೆಗಳು ೨೦೨೪ ದಲ್ಲಿಯೇ ಸರಿಸುಮಾರು ೪೦ ಪ್ರತಿಶತದಷ್ಟು ಹೆಚ್ಚಾಗಿದೆ.
ವಿಶ್ವದ ಅತ್ಯಂತ ದೊಡ್ಡ ಉತ್ಪಾದಕ ಬ್ರೆಜಿಲ್ನಲ್ಲಿನ ಅನಿಯಮಿತ ಹವಾಮಾನದಿಂದಾಗಿ ಕಾಫಿ ಬೆಲೆಯಲ್ಲಿನ ಏರಿಕೆ ರ್ಯಾಲಿಯು ವೇಗವನ್ನು ಪಡೆಯುತ್ತಿದೆ. ಕಡಿಮೆ ಮಳೆ ಮತ್ತು ಬೆಚ್ಚಗಿನ ತಾಪಮಾನವು ದಕ್ಷಿಣ ಅಮೇರಿಕಾದ ರಾಷ್ಟç ಬ್ರೆಜಿಲ್ ಉತ್ಪಾದನೆಯನ್ನು ಘಾಸಿಗೊಳಿಸಿದೆ. ಬ್ರೆಜಿಲ್ ಉತ್ಪಾದಿಸುವ ಅಗ್ಗದ ರೋಬಸ್ಟಾ ವಿಧದ ಬೆಲೆಗಳು ಕೂಡ ಜಿಗಿದಿವೆ. ಇದು ಪ್ರತಿಯಾಗಿ, ಕಂಪೆನಿಗಳು ಮತ್ತು ಗ್ರಾಹಕರು ಹೆಚ್ಚಿನ ಬೆಲೆಯ ಕಾಫಿ ಖರೀದಿ ಕಡಿಮೆ ಮಾಡಿದ್ದು ಮತ್ತು ಚಿಲ್ಲರೆ ವ್ಯಾಪಾರಿಗಳು ಕಾಫಿ ದಾಸ್ತಾನುಗಳನ್ನು ಸುರಕ್ಷಿತವಾಗಿರಿಸಲು ಪರದಾಡುತ್ತಿದ್ದಾರೆ.
ವಿಶ್ವದ ಎರಡನೇ ಅತೀ ದೊಡ್ಡ ಕಾಫಿಯ ಉತ್ಪಾದಕ ವಿಯೆಟ್ನಾಂ ಕೂಡ ಅಧಿಕ ಮಳೆಯನ್ನು ಎದುರಿಸುತ್ತಿದೆ ಮತ್ತು ರೈತರು ಕಾಫಿ ಕೃಷಿಯನ್ನು ಬಿಟ್ಟು ದಕ್ಷಿಣ ಏಷ್ಯಾದಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿರುವ ಡುರಿಯನ್ ಹಣ್ಣನ್ನು ಉತ್ಪಾದಿಸಲು ಗಿಡಗಳನ್ನು ತೆಗೆಯುತಿದ್ದಾರೆ, ಇದು ಕಾಫಿಗಿಂತ ಹೆಚ್ಚು ಲಾಭದಾಯಕವಾಗಿದೆ.
ಭಾರತದಲ್ಲಿ ತಯಾರಾಗುವ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಸ್ಟಾಗಳಲ್ಲಿ ಅರೇಬಿಕಾ ಅದರ ಸೌಮ್ಯವಾದ ಆರೊಮ್ಯಾಟಿಕ್ ಪರಿಮಳದಿಂದಾಗಿ ರೋಬಸ್ಟಾ ಕಾಫಿಗಿಂತ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಭಾರತದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಕಾಫಿಯ ಶೇ. ೭೦ ರಷ್ಟನ್ನು ರಫ್ತು ಮಾಡಲಾಗುತ್ತದೆ. ವಿಶ್ವದ ಒಟ್ಟು ಕಾಫಿ ರಫ್ತಿನಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
ಭಾರತದಲ್ಲಿನ ಒಟ್ಟು ಕಾಫಿಯ ಶೇ. ೭೧ ರಷ್ಟನ್ನು ಕರ್ನಾಟಕವು ಉತ್ಪಾದಿಸುತ್ತದೆ, ಅದರಲ್ಲಿ ಬಹುಪಾಲು ರೋಬಸ್ಟಾ ಆಗಿದೆ. ಉಳಿದ ಉತ್ಪಾದನೆಯು ಕೇರಳ, ತಮಿಳುನಾಡು ಮತ್ತು ಈಶಾನ್ಯ ಪ್ರದೇಶದಿಂದ ಬರುತ್ತದೆ. ಭಾರತವು ೨೦೨೩-೨೪ರಲ್ಲಿ ೩,೭೪,೨೦೦ ಮೆಟ್ರಿಕ್ ಟನ್ಗಳನ್ನು (ಒಖಿ) ಉತ್ಪಾದಿಸಿತು, ಅದರಲ್ಲಿ ಕರ್ನಾಟಕವು ೨,೬೬,೮೮೫ ಒಖಿ ಕೊಡುಗೆ ನೀಡಿದೆ.
ಭಾರತದ ಕಾಫಿ ಮಾರುಕಟ್ಟೆಯು ೨೦೨೨ ರಲ್ಲಿ $೪೭೮ ಮಿಲಿಯನ್ ಮೌಲ್ಯದ್ದಾಗಿದೆ ಮತ್ತು ೨೦೨೪-೨೦೩೩ ರ ಮುನ್ಸೂಚನೆಯ ಅವಧಿಯಲ್ಲಿ ೯.೮೭ ಪ್ರತಿಶತದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಅಂಉಖ) ೨೦೩೨ ರ ವೇಳೆಗೆ ಮೌಲ್ಯವು $೧.೨ ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಹಲವಾರು ಸವಾಲುಗಳು ಕಾಫಿ ಉತ್ಪಾದಕರ ಆಶಾವಾದಿ ಭವಿಷ್ಯಕ್ಕೆ ತೊಡಕಾಗಿವೆ, ಕಾರ್ಮಿಕರ ಕೊರತೆ ಅವುಗಳಲ್ಲಿ ಒಂದಾಗಿದೆ. “ಎಸ್ಟೇಟ್ನಲ್ಲಿನ ನಮ್ಮ ಒಟ್ಟು ವೆಚ್ಚದ ಸುಮಾರು ೬೫ ಪ್ರತಿಶತವು ಕಾರ್ಮಿಕ ವೆಚ್ಚವಾಗಿದೆ, ಇದು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿ ಹೆಚ್ಚಾಗಿದೆ. ೭೦ ರಷ್ಟು ಬ್ರೆಜಿಲಿಯನ್ ಕಾಫಿ ಬೆಳೆಯನ್ನು ಯಾಂತ್ರಿಕವಾಗಿ ಮಾಡಲಾಗುತ್ತದೆ ಏಕೆಂದರೆ ಅವರ ಕಾಫಿ ಬೆಳೆಯುವ ಪ್ರದೇಶಗಳು ಸಮತಟ್ಟಾಗಿವೆ, ಆದರೆ ನಮ್ಮದು ಕಾಫಿ ಬೆಟ್ಟ ಗುಡ್ಡ ಮರಗಳ ಇಳಿಜಾರಿನಲ್ಲಿದೆ, ಇಲ್ಲಿ ಯಂತ್ರಗಳ ಬಳಕೆ ಕಷ್ಟಕರವಾಗಿದ್ದು ಇದು ಕಾರ್ಮಿಕರ ಮೇಲೆ ಹೆಚ್ಚು ಅವಲಂಬಿತವಾಗಿದೆ” ಎಂದು ಚಿಕ್ಕಮಗಳೂರಿನ ಬದ್ರಾ ಎಸ್ಟೇಟ್ನ ವ್ಯವಸ್ಥಾಪಕ ನಿರ್ದೇಶಕ ಜಾಕೋಬ್ ಮಾಮ್ಮನ್ ಹೇಳುತ್ತಾರೆ.
ಹವಾಮಾನ ಬದಲಾವಣೆಯು ಕಾಫಿ ಉತ್ಪಾದಕರಿಗೆ ಮತ್ತೊಂದು ತಲೆಬಿಸಿಯಾಗಿದೆ. ಹಠಾತ್ ಮಳೆಯು ವಾಸ್ತವವಾಗಿ ಕಾಫಿ ಬೆಳೆಗಳನ್ನು ಹಾನಿಗೊಳಿಸಿದೆ ಅಥವಾ ಕಡಿಮೆ ಗುಣಮಟ್ಟಕ್ಕೆ ಕಾರಣವಾಗಿದೆ.
ಕೆಲವು ಉದ್ಯಮದ ಒಳಗಿನವರು ಈಗ ಹವಾಮಾನ ವೈಪರೀತ್ಯದ ಪರಿಣಾಮವು ಕಡಿಮೆ ಎಂದು ಹೇಳುತ್ತಾರೆ. ಬೆಂಕಿ ಕಾಫಿಯ ಸುಹಾಸ್ ದ್ವಾರಕಾನಾಥ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೀರು, ತಾಪಮಾನದ ವಿಷಯದಲ್ಲಿ ತೊಂದರೆಗಳಿವೆ, ಆದರೆ ಇದು ಹೊಸದಲ್ಲದ ಕಾರಣ ಉತ್ಪಾದನೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ" ಎಂದು ಹೇಳಿದರು.
ಆದಾಗ್ಯೂ, ಕಾಫಿ ಬೋರ್ಡ್ ಆಫ್ ಇಂಡಿಯಾದ ಮಾಹಿತಿಯು ಭಾರತದಲ್ಲಿ ಕಾಫಿ ಉತ್ಪಾದನೆಯಲ್ಲಿ ಅಲ್ಪ ಪ್ರಮಾಣದ ಕುಸಿತವನ್ನು ತೋರಿಸುತ್ತದೆ. ಭಾರತವು ೨೦೨೨-೨೩ರಲ್ಲಿ ೩,೫೨,೦೦೦ ಮೆಟ್ರಿಕ್ ಟನ್ ಉತ್ಪಾದಿಸಿದ್ದು ೨೦೨೩-೨೪ರಲ್ಲಿ ೩,೭೪,೨೦೦ ಮೆಟ್ರಿಕ್ ಟನ್ಗಳನ್ನು ಉತ್ಪಾದಿಸಿತು.
"ಈಗ ದೇಶದಲ್ಲಿ ಮಧ್ಯಮ ವರ್ಗವು ಬೆಳೆಯುತ್ತಿದೆ ಮತ್ತು ಉಳಿತಾಯ ಮಾಡಬಹುದಾದ ಆದಾಯವು ಹೆಚ್ಚುತ್ತಿದೆ, ದೇಶದಲ್ಲಿ ಪ್ರಮುಖ ಕಂಪೆನಿಗಳ ಐಷಾರಾಮಿ ಸ್ಟಾಲ್, ರೆಸ್ಟೋರೆಂಟ್ಗಳು ತಲೆಎತ್ತುತ್ತಿವೆ. ಇದರಿಂದ ಮುಂದಿನ ೩-೫ ವರ್ಷಗಳಲ್ಲಿ ಭಾರತದ ಆಂತರಿಕ ಬಳಕೆ ಗಣನೀಯ ಏರಿಕೆ ದಾಖಲಿಸಲಿದ್ದು, ಭಾರತ ಕಾಫಿಯ ಅತಿದೊಡ್ಡ ಬಳಕೆದಾರನಾಗಲಿದೆ ಮತ್ತು ಪರಿವರ್ತನೆಯನ್ನು ಈಗಾಗಲೇ ಕಾಣಬಹುದಾಗಿದೆ.
- ಕೋವರ್ಕೊಲ್ಲಿ ಇಂದ್ರೇಶ್