ಪೊನ್ನಂಪೇಟೆ, ಅ. ೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಹಾಕಿ ಟರ್ಫ್ ಮೈದಾನದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕೊಡಗು ಉಪನಿರ್ದೇಶಕರ ಕಚೇರಿ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾಟದ ೨ನೇ ದಿನ ಕೊಡಗು ಆಟಗಾರರನ್ನು ಹೊಂದಿರುವ ಮೈಸೂರು, ಕೂಡಿಗೆ ತಂಡಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಆಡಿದ ಎಲ್ಲಾ ಪಂದ್ಯಗಳಲ್ಲೂ ಅಭೂತಪೂರ್ವ ಜಯ ಸಾಧಿಸಿದವು.

ಫಲಿತಾಂಶ : ೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ವಸತಿ ನಿಲಯ ತಂಡ ಬೆಳಗಾವಿ ತಂಡವನ್ನು ೪ - ೦ ಗೋಲುಗಳ ಅಂತರ ದಿಂದ ಮಣಿಸಿತು. ಕೂಡಿಗೆ ಪರ ವಿಕಾಸ್, ಮಲ್ಲು, ರೋಹಿತ್ ಮತ್ತು ಭಗತ್ ಗೌಡ ತಲಾ ೧ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಕೂಡಿಗೆ ತಂಡ ಕಲ್ಬುರ್ಗಿ ತಂಡದ ವಿರುದ್ಧ ೩-೦ ಗೋಲುಗಳ ಅಂತರದಿAದ ಜಯಭೇರಿ ಬಾರಿಸಿತು.

ಕೂಡಿಗೆ ಪರ ವಿಕಾಸ್, ರೋಹಿತ್ ೨, ಧನುಷ್ ೧ ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಂಗಳೂರು ತಂಡವನ್ನು ೪-೦ ಗೋಲುಗಳಿಂದ ಮಣಿಸಿತು. ಮೋಹನ್ ೨, ಅನೂಪ್ ಅಚ್ಚಯ್ಯ ೧, ಹರೀಶ್ ಗೌಡ -೧ ಗೋಲು ಗಳಿಸಿದರು.

೧೭ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ವಸತಿ ನಿಲಯ ತಂಡ, ಬೆಳಗಾವಿ ತಂಡದ ವಿರುದ್ಧ ೬-೧ ಗೊಲುಗಳ ವಿಜಯ ಸಾಧಿಸಿತು. ನಯನ ೨, ಯಶಿಕ, ಪ್ರತೀಕ, ಸಿಂಚನ, ಪ್ರೀತಿ ತಲಾ ೧ ಗೋಲು ಹೊಡೆದರು. ಬೆಳಗಾವಿ ಪರ ಆಯುಷ ಏಕೈಕ ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಕಲ್ಬುರ್ಗಿ ವಿರುದ್ಧ ೯-೦ ಗೋಲುಗಳ ಅಂತರದ ಸುಲಭ ಜಯ ಸಾಧಿಸಿತು. ಮೈಸೂರು ಪರ ಜೀವಿತ, ಪೂರ್ವಿ, ಲಕ್ಷಿö್ಮ, ಅಕ್ಷರ ತಲಾ ೨, ಶಾಲಿನಿ ೧ ಗೋಲು ಬಾರಿಸಿದರು.

ಮತ್ತೊಂದು ಪಂದ್ಯದಲ್ಲಿ ಬೆಳಗಾವಿ ತಂಡ ಬೆಂಗಳೂರು ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿತು. ಬೆಳಗಾವಿ ಪರ ಸಾಕ್ಷಿ ಚೌಗ್ಲೆ ೪, ಆಯೇಷಾ ೧ ಗೋಲು ಹೊಡೆದರು.

೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕಲ್ಬುರ್ಗಿ ತಂಡ ಬೆಂಗಳೂರು ತಂಡದ ವಿರುದ್ಧ ೬-೦ ಗೋಲುಗಳ ವಿಜಯಸಾಧಿಸಿತು. ಕಲ್ಬುರ್ಗಿ ಪರ ಶಿವಕುಮಾರ್, ಕುನಾಲ್ ತಲಾ ೨, ನಯಾಜ್, ಸಿದ್ದಾರ್ಥ್ ತಲಾ ೧ ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಬೆಳಗಾವಿ ತಂಡವನ್ನು ೩-೨ ಗೋಲುಗಳಿಂದ ಮಣಿಸಿತು. ಮೈಸೂರು ಪರ ಶ್ರೀನಿವಾಸ್, ದವನ್ ದೇವಯ್ಯ, ಯುವ ಮುತ್ತಪ್ಪ ತಲಾ ೧ ಗೋಲು ಗಳಿಸಿದರು. ಬೆಳಗಾವಿ ಪರ ಮಹಮದ್ ನಹೀಮ್, ಆಕಾಶ್ ತಲಾ ೧ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು.

೧೪ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ತಂಡದ ವಿರುದ್ಧ ಬೆಳಗಾವಿ ೯-೦ ಗೋಲುಗಳ ಅಂತರದಿAದ ಜಯಭೇರಿ ಬಾರಿಸಿತು. ಬೆಳಗಾವಿ ಪರ ಶಿಲ್ಪಾ, ಪ್ರೀತಿ ತಲಾ ೩ ಗೋಲು ಬಾರಿಸಿ ಮಿಂಚಿದರು. ಸೌಮ್ಯ ೨, ಶ್ರಾವಣಿ ೧ ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಕಲ್ಬುರ್ಗಿ ತಂಡವನ್ನು ೧೫-೦ ಗೋಲುಗಳ ಅಂತರದಿAದ ಬಗ್ಗುಬಡಿದು ಭರ್ಜರಿ ಜಯಸಾಧಿಸಿತು.

ಸರಸ್ವತಿ, ತಾನ್ಯ ತಲಾ ೫ ಗೋಲು ಬಾರಿಸಿ ಮಿಂಚಿದರು. ಆಂಚಲ್ ೩, ಪ್ರತೀಕ್ಷಾ ೨ ಗೋಲು ಗಳಿಸಿದರು. -ಚನ್ನನಾಯಕ