ಪೊನ್ನಂಪೇಟೆ, ಅ. ೨೮: ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿರುವ ಕಳ್ಳರು ೩ ಗ್ಯಾಸ್ ಸಿಲಿಂಡರ್ ಮತ್ತು ೨ ಗ್ಯಾಸ್ ಸ್ಟೌಗಳನ್ನು ಕಳವು ಮಾಡಿದ್ದಾರೆ.
ತಾ. ೨೭ರ ರಾತ್ರಿ ಕಿಟಕಿ ಹಾಗೂ ಬಾಗಿಲು ಚಿಲಕ ಮುರಿದು ಕಳ್ಳತನ ಮಾಡಲಾಗಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಂದು ಸಿಲಿಂಡರ್ ಮತ್ತು ಗ್ಯಾಸ್ ಸ್ಟೌ, ಅಂಗನವಾಡಿ ಕೇಂದ್ರದಲ್ಲಿ ೨ ಗ್ಯಾಸ್ ಸಿಲಿಂಡರ್ ಮತ್ತು ಒಂದು ಗ್ಯಾಸ್ ಸ್ಟೌ ಕಳವು ಮಾಡಿದ್ದಾರೆ.
(ಮೊದಲ ಪುಟದಿಂದ) ತಾ. ೨೮ ರಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಮುಖ್ಯ ಶಿಕ್ಷಕರು ಹರೀಶ್ ಮತ್ತು ಸಿ ಅರ್ ಪಿ ತಿರುನೆಲ್ಲಿಮಾಡ ಜೀವನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.