ಸಿದ್ದಾಪುರ, ಅ. ೨೯: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಕಸವಿಲೇವಾರಿ ಘಟಕದ ಉದ್ಘಾಟನೆಗೆ ಆಗಮಿಸಿದ ಶಾಸಕ ಮಂತರ್ ಗೌಡ ಅವರು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಸದಸ್ಯೆ ಹಾಗೂ ಮಹಿಳಾ ಆಟೋ ಚಾಲಕಿ ಸುಜಾತ ಅವರ ಆಟೋರಿಕ್ಷಾವನ್ನು ಚಾಲನೆ ಮಾಡಿ ಗಮನ ಸೆಳೆದರು. ಚಾಲಕಿ ಸುಜಾತ ಮನವಿಗೆ ಸ್ಪಂದಿಸಿದ ಶಾಸಕ ಮಂತರ್ ಗೌಡ ಅವರು ಆಟೋರಿಕ್ಷಾ ಚಲಾಯಿಸಿದರು.