ಮಡಿಕೇರಿ, ಅ. ೨೯: ವೀರಾಜಪೇಟೆ ವಿಭಾಗದ, ವಿರಾಜಪೇಟೆ ಅರಣ್ಯ ವಲಯದ ಚೆಂಬೆಬೆಳ್ಳೂರು ಪಂಚಾಯ್ತಿ ವ್ಯಾಪ್ತಿಗೆ ಬರುವ ಗ್ರಾಮಗಳಾದ ಚೆಂಬೆಬೆಳ್ಳೂರು, ಪುದುಕೋಟೆ, ಐಮಂಗಲ, ಮಗ್ಗುಲ, ಕುತ್ತೂರು, ಬೆಳ್ಳರಿಮಾಡು, ದೇವಣಗೇರಿ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ತಾ.೩೦ ರಂದು (ಇಂದು) ಹಮ್ಮಿಕೊಂಡಿದ್ದು, ತೋಟದ ಕಾರ್ಮಿಕರು ಆ ದಿವಸ ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಲಯ ಅರಣ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.