ಮಡಿಕೇರಿ, ಅ. ೨೯: ಜೀವ ವಿಮೆಗೆ ಸಂಬAಧಿಸಿದAತೆ ತರಲಾಗಿರುವ ಹೊಸ ಆದೇಶ ವಿರೋಧಿಸಿ ನಗರದ ಎಲ್‌ಐಸಿ ಕಚೇರಿ ಎದುರು ನಿಗಮದ ಪ್ರತಿನಿಧಿಗಳು ಪ್ರತಿಭಟಿಸಿ ಅಸಹಕಾರ ವ್ಯಕ್ತಪಡಿಸಿದರು.
ಸಂಘಟನೆ ಅಧ್ಯಕ್ಷ ಎ.ವಿ. ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ‘ಕ್ಲಾ ಬ್ಯಾಕ್ ನೀತಿ ಮೂಲಕ ಏಜೆಂಟರ್ ಕಮೀಷನ್, ಸೌಲಭ್ಯ ಕಡಿತಗೊಳಿಸಲಾಗುತ್ತದೆ. ಈ ಆದೇಶ ಹಿಂಪಡೆಯಬೇಕೆAದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಈ ಸಂದರ್ಭ ಸಂಘಟನೆ ಪ್ರಧಾನ ಕಾರ್ಯದರ್ಶಿ ಟಿ.ಎಲ್. ಅನಿತಾ, ಖಜಾಂಚಿ ಚಾಮಿ, ಉಪಾಧ್ಯಕ್ಷ ಕೆ.ಪಿ. ಗಣೇಶ, ಹಿರಿಯ ಪ್ರತಿನಿಧಿಗಳಾದ ಬೆಳ್ಯಪ್ಪ, ಮಾದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.