ಮಡಿಕೇರಿ, ಅ. ೨೯: ದಕ್ಷಿಣ ಕೊಡಗಿನ ಕಾನೂರುವಿನ ಡೈಮಂಡ್ ತಂಡದಿAದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರುಗಳ ಜನ್ಮ ದಿನದ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾನೂರು-ಕೋತೂರು ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಬಿಂದು ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಸಂತ ಜೋಸೆಫರ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಮಚ್ಚಾಮಾಡ ಮಿತ್ರ ಮಾದಪ್ಪ, ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿಯ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಚೆಪ್ಪುಡಿರ ಪ್ರಮುಖ್ ಗಣಪತಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ಮಂಡಳಿಯ ಕಾರ್ಯದರ್ಶಿ ಕುಂಞಮಾಡ ನವೀನಾ ಮುತ್ತಪ್ಪ ಉಪಸ್ಥಿತರಿದ್ದರು. ಚಿರಿಯಪಂಡ ರುಕ್ಮಿಣಿ ನಾಣಯ್ಯ ಜನ್ಮದಿನದ ಬಗ್ಗೆ ಮಾತನಾಡಿದರು. ಕುಂಞÂಮಾಡ ರೀನಾ ಸದಾಶಿವ ಡೈಮಂಡ್ ತಂಡದ ವಿಶೇಷತೆ ಬಗ್ಗೆ ಮಾಹಿತಿ ನೀಡಿದರು. ಮಾಚಿಮಾಡ ರೂಪಾ ಸತೀಶ್, ಗಾಂಡAಗಡ ಉಷಾ ಗಣಪತಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.

ಹೆಮ್ಮಚ್ಚಿಮನೆ ಲತಾ ಗಣೇಶ್ ತಂಡದವರು ಪ್ರಾರ್ಥಿಸಿ, ಡೈಮಂಡ್ ತಂಡದ ನಾಯಕಿ ಚೆಪ್ಪುಡಿರ ಸುಜನ ನಂಜಪ್ಪ ಸ್ವಾಗತಿಸಿದರೆ, ಮಚ್ಚಾಮಾಡ ಆಶಾ ಸಂಜು ತಂಡದವರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು. ಅಳಮೇಂಗಡ ಅನಿತಾ ಜೀವನ್ ವಂದಿಸಿದರು.