ಮಡಿಕೇರಿ, ಅ. ೨೯: ವಿಶಿಷ್ಟ ಸಂಸ್ಕೃತಿ, ಆಚಾರ- ವಿಚಾರಗಳನ್ನು ಹೊಂದಿರುವ ಗೌಡ ಜನಾಂಗದ ಒಗ್ಗಟ್ಟಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ತೂಟೇರ ವೆಂಕಟರಮಣ ಹೇಳಿದರು.
ಮಕ್ಕಂದೂರು ಗೌಡ ಸಮಾಜದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಜನಾಂಗ ಬಾಂಧವರ ಒಗ್ಗಟ್ಟು, ಪರಸ್ಪರ ಸಮಾಲೋಚನೆಯೊಂದಿಗೆ ಮುನ್ನಡೆಯುವ ಸಲುವಾಗಿ ಗೌಡ ಸಮಾಜ ರಚನೆ ಮಾಡಲಾಗಿದೆ. ಗ್ರಾಮ ವ್ಯಾಪ್ತಿಯ ಎಲ್ಲ ಸಮಾಜ ಬಾಂಧವರು ಸಭೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವದರೊಂದಿಗೆ ಸಹಕಾರ ನೀಡಬೇಕು. ಮಡಿಕೇರಿ ಸೇರಿದಂತೆ ಇತರ ಕಡೆಗಳಲ್ಲಿ ನಡೆಯುವ ಸಮಾಜದ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು. ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಆರ್ಥಿಕವಾಗಿಯೂ ನೆರವು ನೀಡಬೇಕೆಂದು ಮನವಿ ಮಾಡಿದರು.
ಸಮಾಜದ ಖಜಾಂಚಿ ಚೌಕಿಮನೆ ರಘು ತಿಮ್ಮöಯ್ಯ ಮಾತನಾಡಿ, ಸಮಾಜವನ್ನು ಮುನ್ನಡೆಸಿಕೊಂಡು ಹೋಗುವದು ಸುಲಭದ ಕೆಲಸವಲ್ಲ, ಸಮಾಜದ ವತಿಯಿಂದ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲೂ ಎಲ್ಲರೂ ಭಾಗಿಯಾಗಿ ಸಹಕಾರ ನೀಡಬೇಕೆಂದು ಕೋರಿದರು.
ಸಭೆಯಲ್ಲಿ ಸದಸ್ಯರುಗಳಾದ ಕೊಟ್ಟಕೇರಿಯನ ಪ್ರದೀಪ್, ತೂಟೇರ ಗಿರೀಶ್, ತೂಟೇರ ರೀಟಾ ಅವರುಗಳು ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತೂಟೇರ ದುರ್ಗಾಶ್ರೀ, ಕೊಂಬನ ದೀಕ್ಷಾ, ಪಿಯುಸಿಯಲ್ಲಿ ಸಬ್ಬಂಡ್ರ ತನ್ವಿಕ, ಕುಂಬಗೌಡನ ಇಂಚರ, ಕ್ರೀಡಾ ಕ್ಷೇತ್ರದಲ್ಲಿ ಹಾಕಿ ಪಂದ್ಯಾವಳಿಯಲ್ಲಿ ರಾಷ್ಟಿçÃಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತರಾದ ಕುಂಬಗೌಡನ ವಿಶ್ವಜಿತ್, ರಾಷ್ಟಿçÃಯ ಹಾಕಿಯಲ್ಲಿ ಚಿನ್ನದ ಪದಕ, ಮ್ಯಾರಥಾನ್, ಎನ್‌ಸಿಸಿ, ಹಾಗೂ ನೃತ್ಯ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ ಪಡೆದುಕೊಂಡಿರುವ ಕುಡೆಕಲ್ ನಿಹಾಲ್, ಜಿಲ್ಲಾಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಬಹುಮಾನ ಪಡೆದ ಮಾನಡ್ಕö ಚರಿಷ್ಮ, ಜಿಲ್ಲಾ ಮಟ್ಟದ ಕೊಕೊ ಪಂದ್ಯಾವಳಿಯಲ್ಲಿ ಬಹುಮಾನ ಪಡೆದ ತೇಲಬೈಲು ಲವಿನ್ ಅವರುಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅತಿಥಿಗಳಾಗಿ ಸಮಾಜದ ಹಿರಿಯರಾದ ಹುದೇರಿ ಕಾಳಪ್ಪ, ಲಕ್ಕಪ್ಪನ ಹರೀಶ್, ಕೊಟ್ಟಕೇರಿಯನ ಮುತ್ತಮ್ಮ, ಮಾನಡ್ಕನ ಬೇಬಿ, ತೇಲಬೈಲು ನೀಲಮ್ಮ, ಸ್ಥಳದಾನಿ ಕುಂಬಗೌಡನ ಹೇಮಂತ್, ಗ್ರಾಮ ಪಂಚಾಯಿತಿ ಸದಸ್ಯ ಕಟ್ಟೆಮನೆ ಗಣೇಶ್ ಇದ್ದರು. ಕುಂಬಗೌಡನ ಕವಿತಾ ಸುನಿಲ್ ಪ್ರಾರ್ಥಿಸಿದರೆ, ಸಮಾಜದ ಉಪಾಧ್ಯಕ್ಷೆ ದೇರಣ್ಣನ ಸರೋಜ ಸ್ವಾಗತಿಸಿದರು. ಕಾರ್ಯದರ್ಶಿ ಮಳ್ಳನ ವಿಜಯಕುಮಾರ್ ಆಡಳಿತ ಮಂಡಳಿ ವರದಿ ವಾಚಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರ್ವಹಣೆಯೊಂದಿಗೆ ವಂದನಾರ್ಪಣೆ ಮಾಡಿದರು.