ವಾಸು ದೇಶಪಾಂಡೆ

ವೀರಾಜಪೇಟೆ, ಅ. ೨೯: ಗ್ರಂಥಾಲಯಗಳ ಡಿಜಿಟಲೀಕರಣ ದಿಂದ ಜ್ಞಾನದ ಪ್ರಸಾರ ವಿಸ್ತರಣೆಯಾಗುತ್ತ ಹೋಗುತ್ತದೆ ಎಂದು ಬೆಂಗಳೂರಿನ ಈಸಿಲಿಬ್ ಸಾಫ್ಟ್ವೇರ್ ಹಾಗೂ ಫೈನ್ ವೆನ್ ಸಿಸ್ಟಮ್ ಟೆಕ್ನಾಲಜಿಯ ಸಿಇಓ ವಾಸು ಎ. ದೇಶಪಾಂಡೆ ಅಭಿಪ್ರಾಯಪಟ್ಟರು. ವೀರಾಜಪೇಟೆ ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಆಯೋಜಿಸಲಾಗಿದ್ದ ಈಸಿಲಿಬ್ ಸಾಫ್ಟ್ ವೇರ್ ಕುರಿತ ಗ್ರಂಥಪಾಲಕರ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಕ್ಲಾವುಡ್ ವರ್ಷನ್‌ನ ಪರಿಣಾಮಕಾರಿ ಬಳಕೆ ಪ್ರಮುಖವಾಗಿದ್ದು, ಇದು ಆಧುನಿಕ ತಂತ್ರಾAಶವನ್ನು ಪರಿಚಯಿಸುತ್ತದೆ. ಓದುಗರಿಗೆ ಇದು ಉಪಯುಕ್ತವಾಗಿದ್ದು, ತನ್ನತ್ತ ಸೆಳೆಯುತ್ತಿದೆ ಎಂದರು. ಡಿಜಿಟಲೀಕರಣದ ಬಳಕೆ ಹೆಚ್ಚಿದಂತೆ ಅಧ್ಯಯನ ವ್ಯಾಪ್ತಿ ವಿಸ್ತಾರವಾಗುತ್ತಿದ್ದು ಸಿಬ್ಬಂದಿಗಳಿಗೂ ಸರಳ ವಿಧಾನವಾಗಿದೆ ಎಂದರು. ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಮಾತನಾಡಿ, ಪುಸ್ತಕವನ್ನು ಓದುವುದರಿಂದ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಪುಸ್ತಕ ಓದುವುದು ಅತೀ ಮುಖ್ಯವಾಗಿದ್ದು, ಸಂದರ್ಭಕ್ಕೆ ಅನುಸಾರವಾಗಿ ಬದಲಾಗುತ್ತಿರುವ ವಿಚಾರಗಳ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು. ಗ್ರಂಥಪಾಲಕರಾದ ಹಿಲ್ಡೆçಡ್ ಮೆನೇಜೆಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಸಹಾಯಕ ಗ್ರಂಥಪಾಲಕರಾದ ಲವೀನಾ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಕಾಲೇಜುಗಳ ಗ್ರಂಥಪಾಲಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.