ನಾಪೋಕ್ಲು, ಅ. ೨೯: ವೈಭವಯುತವಾಗಿ ನಡೆದು ಕಾರಣಾಂತರಗಳಿAದ ಸ್ಥಗಿತಗೊಂಡಿದ್ದ ನಾಲ್‌ನಾಡ್ ಹಾಕಿ ಕಪ್‌ಗೆ ೧೨ ವರ್ಷಗಳ ಬಳಿಕ ಮರುಚಾಲನೆ ದೊರೆತ್ತಿದ್ದು, ಗಣ್ಯರು ಪಂದ್ಯಾಟವನ್ನು ಉದ್ಘಾಟಿಸುವ ಮೂಲಕ ಗತವೈಭವ ಮರಳಿಸಿದರು.
ನಾಲ್‌ನಾಡ್ ಹಾಕಿ ಕ್ಲಬ್ ವತಿಯಿಂದ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ೫ ದಿನಗಳ ಕಾಲ ನಡೆಯಲಿರುವ ಅಂತರ ಗ್ರಾಮ ಹಾಕಿ ಹಾಗೂ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಅಪ್ಪಚೆಟ್ಟೋಳಂಡ ಕುಟುಂಬದ ಉಪಾಧ್ಯಕ್ಷ ಅಪ್ಪಚೆಟ್ಟೋಳಂಡ ಭೀಮಯ್ಯ ಉದ್ಘಾಟಿಸಿದರು.
ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಾಲ್‌ನಾಡ್ ಕಪ್ ಕ್ರೀಡಾಕೂಟ ಜಿಲ್ಲೆಯಲ್ಲಿ ಹೆಸರುವಾಸಿಯಾಗಿತ್ತು. ಕಾರಣಾಂತರಗಳಿAದ ೧೨ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕ್ರೀಡಾಕೂಟಕ್ಕೆ ಅಪ್ಪಚೆಟ್ಟೋಳಂಡ ಕುಟುಂಬ ಸಹಾಯಧನ ನೀಡುವುದರ ಮೂಲಕ ಕ್ರೀಡೆಗೆ ಮರುಜೀವ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡೆಯಲ್ಲಿ ತೊಡಗಿಸಿಕೊಂಡ ಹಲವು ಯುವಕರು ಉತ್ತಮ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಊರುಗಳ ನಡುವೆ ಉತ್ತಮ ಸಂಬAಧ ಕ್ರೀಡೆಯಿಂದ ಬೆಳೆಯುತ್ತದೆ ಎಂದು ಅಭಿಪ್ರಾಯಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೊಕಿರ ಬಾಬಿ ಭೀಮಯ್ಯ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಮುಖ್ಯ. ಶಿಸ್ತು ಮೈಗೂಡಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂವೇರ ನಾಣಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಜಿಲ್ಲೆ ಮಹತ್ವದ ಕೊಡುಗೆ ನೀಡಿದ್ದು, ನಾಲ್‌ನಾಡು ಹಾಕಿ ಪಂದ್ಯಾ ವಳಿಯು ಗ್ರಾಮೀಣ ಮಟ್ಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.
(ಮೊದಲ ಪುಟದಿಂದ) ಗ್ರಾಮೀಣ ಮಟ್ಟದಲ್ಲಿ ಹಲವು ಕ್ರೀಡಾಪಟುಗಳು ಕ್ರೀಡೆಯ ಮೂಲಕ ಪ್ರಸಿದ್ಧಿ ಗಳಿಸಿಕೊಂಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಹಾಕಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದರು.
ನೇತಾಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಮುಕ್ಕಾಟಿರ ವಿನಯ್ ಮಾತನಾಡಿ, ಕಾಫಿಗೆ ಉತ್ತಮ ಧಾರಣೆ ದೊರೆಯುತ್ತಿದ್ದು ಕೃಷಿಕರು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ದಾನಿಗಳ ನೆರವಿನಿಂದ ನಾಲ್‌ನಾಡ್ ಕಪ್ ಹಾಕಿ ಸಮಿತಿ ಕ್ರೀಡಾಕೂಟ ಆಯೋಜಿಸಿದೆ. ಸಂಘಟನೆಗಳು ಕೇವಲ ಕ್ರೀಡೆಗೆ ಸೀಮಿತವಾಗದೆ ಗ್ರಾಮೀಣ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ನಾಡು ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಟಿ. ಸುರೇಶ್ ವಹಿಸಿದ್ದರು. ಕ್ರೀಡಾಕೂಟದ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಾಫಿ ಬೆಳೆಗಾರ ಅಪ್ಪುಮಣಿಯಂಡ ರಘು ಸುಬ್ಬಯ್ಯ, ಹಾಕಿ ಕ್ಲಬ್ ಖಜಾಂಚಿ ಚಿಯಂಡೀರ ದಿನೇಶ್, ನೇತಾಜಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್. ಟ್ರೋಫಿ ದಾನಿಗಳು, ಕ್ಲಬ್ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವೀಕ್ಷಕ ವಿವರಣೆಯನ್ನು ಮಾಳೆೆÃಟಿರ ಶ್ರೀನಿವಾಸ್À ಮತ್ತು ಕರವÀಂಡ ಸೀಮಾ ನಿರ್ವಹಿಸಿದರು.
ಫಲಿತಾಂಶ : ದಿನದ ಮೊದಲ ಪಂದ್ಯಾಟಕ್ಕೂ ಮುನ್ನ ಬಲ್ಲಮಾವಟಿ (ವೈಟ್) ಮತ್ತು ನಾಪೋಕ್ಲು (ಗ್ರೀನ್)ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಬಲ್ಲಮಾವಟಿ ತಂಡ ೩ -೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿತು.
ಎರಡನೇ ಪಂದ್ಯ ನಾಲಡಿ, ಪುಲಿಕೋಟು ವಿರುದ್ಧ ೬-೦ ಅಂತರದ ಭರ್ಜರಿ ಜಯ ಸಾಧಿಸಿತು. ಪೇರೂರು ತಂಡ ೪-೧ ಗೋಲುಗಳ ಅಂತರದಲ್ಲಿ ಬಲ್ಲಮಾವಟಿ (ಗ್ರೀನ್ಸ್) ತಂಡವನ್ನು ಮಣಿಸಿತು. ಕುಂಜಿಲ ತಂಡವು ನೆಲಜಿ ತಂಡದ ವಿರುದ್ಧ ಭರ್ಜರಿ ಜಯಗಳಿಸಿತು. ಕುಂಜಿಲ ತಂಡವು ೬-೦ ಅಂತರದಿAದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. - ದುಗ್ಗಳ ಸದಾನಂದ