(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಅ. ೨೯ : ಕೊಡವ ಕೌಟುಂಬಿಕ ಹಾಕಿ ಉತ್ಸವ ಯಶಸ್ವಿ ೨೪ ವರ್ಷಗಳು ಪೂರೈಸಿದ್ದು, ೨೦೨೫ರಲ್ಲಿ ೨೫ನೇ ವರ್ಷದ ಹಾಕಿನಮ್ಮೆ ಜರುಗಲಿದೆ. ೧೯೯೭ರಲ್ಲಿ ಕರಡದಲ್ಲಿ ಪಾಂಡAಡ ಕಪ್‌ನಿಂದ ಆರಂಭಗೊAಡ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಖ್ಯಾತಿಯೊಂದಿಗೆ ಮುಂದುವರಿದುಕೊAಡು ಬಂದಿತ್ತು. ೨೦೨೪ ರ ಕುಂಡ್ಯೋಳAಡ ಕಪ್ ಹಾಕಿ ಉತ್ಸವದ ಮೂಲಕ ಇದು ಪ್ರಸ್ತುತ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದೆ. ಹಾಕಿ ಉತ್ಸವ ಪ್ರಾರಂಭಗೊAಡ ಬಳಿಕ ಇದು ಪ್ರತಿ ವರ್ಷವೂ ನಿರಂತರವಾಗಿ ಹೊಸತನಗಳು, ವಿವಿಧ ಆಕರ್ಷಣೆಗಳ ನಡುವೆ ಕೆಲವಾರು ವಿಶೇಷತೆಗಳ ಹಿರಿಮೆಯೊಂದಿಗೆ ನಡೆದುಕೊಂಡು ಬಂದಿತ್ತು. ಆದರೆ, ೨೦೧೮ರ ಪ್ರಾಕೃತಿಕ ದುರಂತ, ನಂತರದಲ್ಲಿ ಜಗತ್ತು ಕಂಡ ಮಹಾಮಾರಿ ಕೋವಿಡ್ ಕಾರಣದಿಂದಾಗಿ ೨೦೧೯ ರಿಂದ ೨೦೨೨ರ ತನಕ ನಾಲ್ಕು ವರ್ಷ ಈ ಉತ್ಸವ ನಡೆದಿರಲಿಲ್ಲ. ೨೦೨೩ಕ್ಕೆ ಅಪ್ಪಚೆಟ್ಟೋಳಂಡ ಕುಟುಂಬದವರು ಅದ್ದೂರಿಯಾಗಿ ಈ ಉತ್ಸವಕ್ಕೆ ಮರು ಚಾಲನೆ ನೀಡಿದ್ದರು. ಈ ಸಂಭ್ರಮ ಮುಂದುವರಿದAತೆ ೨೦೨೪ರಲ್ಲಿ ನಾಪೋಕ್ಲುವಿನಲ್ಲೇ ಮತ್ತೆ ಜರುಗಿದ ಕುಂಡ್ಯೋಳAಡ ಕಪ್ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಗಿನ್ನಿಸ್ ದಾಖಲೆಯ ಗರಿಯನ್ನು ಈ ಉತ್ಸವ ಆಯೋಜಿಸಿದ್ದ ಕುಟುಂಬ ಕೌಟುಂಬಿಕ ಹಾಕಿಗೆ ತಂದುಕೊಟ್ಟಿದೆ.

ಇದೀಗ ೨೫ನೇಯ ವರ್ಷದ ಹಾಕಿ ಉತ್ಸವ ೨೦೨೫ರಲ್ಲೇ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಯೋಜಿಸಲ್ಪಡುತ್ತಿದೆ. ೨೫ನೇಯ ಹಬ್ಬಕ್ಕೆ ೨೦೨೫ರ ಇಸವಿಯ ದಾಖಲೆ ಸಿಗತ್ತಿರುವದೂ ರಜತ ಮಹೋತ್ಸವ ಹಾಕಿ ಉತ್ಸವಕ್ಕೆ ಮತ್ತೊಂದು ಮೆರುಗು ತಂದುಕೊಡುತ್ತಿದೆ ಎಂಬದೊAದು ವಿಶೇಷ.

ಮುದ್ದಂಡ ಕಪ್... ಮಡಿಕೇರಿಯಲ್ಲಿ

೨೫ನೇಯ ವರ್ಷದ ಹಾಕಿ ಉತ್ಸವ ಆಯೋಜನೆಯ ಜವಾಬ್ದಾರಿ ಆತಿಥ್ಯವನ್ನು ಮುದ್ದಂಡ ಕುಟುಂಬಸ್ಥರು ಪಡೆದುಕೊಂಡಿದ್ದಾರೆ. ಕುಂಡ್ಯೋಳAಡ ಕಪ್‌ನ ಫೈನಲ್‌ನಲ್ಲಿ ಅಧಿಕೃತವಾಗಿ ಧ್ವಜ ಸ್ವೀಕರಿಸುವುದರೊಂದಿಗೆ ಮುದ್ದಂಡ ಕುಟುಂಬ ಆ ಸಂದರ್ಭದಿAದಲೇ ೨೦೨೫ರ ವರ್ಷದ ಹಾಕಿ ಆಯೋಜನೆಗೆ ಪೂರ್ವಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ಹಲವು ಕಾರ್ಯಚಟುವಟಿಕೆಗಳು ನಡೆದಿವೆ. ಉತ್ಸವದ ಲೋಗೋ ಅಂತಿಮಗೊAಡಿದ್ದು, ಸದ್ಯದಲ್ಲಿ ಬಿಡುಗಡೆಯಾಗಲಿದೆ. ಜತೆಗೆ ವೆಬ್‌ಸೈಟ್ ಅನಾವರಣ, ಇನ್ಸ್ಟಾಗ್ರಾಂ ಪೇಜ್‌ನ ಅನಾವರಣಕ್ಕೂ ಸಿದ್ಧತೆ ನಡೆದಿದೆ. ಮತ್ತೊಂದು ಹೆಜ್ಜೆಯಾಗಿ ಉತ್ಸವದ ಆರಂಭದ ದಿನಾಂಕ ಹಾಗೂ ಫೈನಲ್ ದಿನವೂ ನಿಗದಿಯಾಗಿದೆ.

ಮಡಿಕೇರಿಯಲ್ಲಿ ಮೂರನೇ ಉತ್ಸವ

ಕೌಟುಂಬಿಕ ಹಾಕಿ ಇತಿಹಾಸದಲ್ಲಿ ಇದೀಗ ಮೂರನೇ ಬಾರಿಗೆ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಉತ್ಸವ ಜರುಗಲಿದೆ. ೨೦೦೫ರಲ್ಲಿ ಬಿದ್ದಂಡ ಕಪ್.. ೨೦೧೬ರಲ್ಲಿ ಶಾಂತೆಯAಡ ಕಪ್‌ನ ಬಳಿಕ ಇದೀಗ ೨೦೨೫ ರಲ್ಲಿ ಮುದ್ದಂಡ ಕಪ್ ಆಯೋಜನೆಗೊಳ್ಳುತ್ತಿದೆ.

(ಮೊದಲ ಪುಟದಿಂದ)

ಫೀ.ಮಾ. ಕಾರ್ಯಪ್ಪ ಕಾಲೇಜು ಮೈದಾನ

ಈ ಹಿಂದಿನ ಎರಡು ಉತ್ಸವಗಳು ನಡೆದಿದ್ದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲೇ ಈ ಉತ್ಸವವೂ ನಡೆಯಲಿದೆ. ಇದಕ್ಕೆ ಬೇಕಾದ ಅನುಮತಿ, ಮತ್ತಿತರ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಈ ಮೈದಾನವೇ ಅಂತಿಮವಾಗಿದೆ. ಆರಂಭದಲ್ಲಿ ಕಾರ್ಯಪ್ಪ ಮೈದಾನ ಅಥವಾ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಎಂಬ ಚರ್ಚೆ ನಡೆದಿದ್ದು, ಇದೀಗ ಅಂತಿಮ ನಿರ್ಧಾರವಾಗಿದೆ.

ಮಾರ್ಚ್ ೨೮ಕ್ಕೆ ಆರಂಭ

ಮಾರ್ಚ್ ೨೮ರ ಶುಕ್ರವಾರದಂದು ಹಾಕಿ ಉತ್ಸವ ಶುಭಾರಂಭಗೊಳ್ಳಲಿದೆ. ಏಪ್ರಿಲ್ ೨೭ರ ಭಾನುವಾರದಂದು ಫೈನಲ್ ಪಂದ್ಯಾವಳಿ ಎಂದು ಈಗಾಗಲೇ ನಿರ್ಧರಿಸಲಾಗಿದೆ.

ಪೂರ್ವ ಸಿದ್ಧತೆಗಳು

ಮುದ್ದಂಡ ಕುಟುಂಬ ಹಾಕಿ ಉತ್ಸವದ ಯಶಸ್ಸಿಗೆ ಉತ್ಸವ ಸಮಿತಿಯೊಂದನ್ನು ರಚಿಸಿಕೊಂಡಿದ್ದು, ಇದರ ಮುಂದಾಳತ್ವದಲ್ಲಿ ಪೂರ್ವ ತಯಾರಿ ನಡೆಯುತ್ತಿದೆ. ಈಗಾಗಲೇ ಸಂಸದ ಯದುವೀರ್, ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್‌ಗೌಡ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ ಅವರುಗಳೊಂದಿಗೆ ಚರ್ಚೆ ನಡೆಸಿದ್ದು, ಇವರುಗಳು ಸಹಕಾರ ಘೋಷಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ, ಹಾಲಿ ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರುಗಳನ್ನು ಸದ್ಯದಲ್ಲಿ ಭೇಟಿ ಮಾಡಲಾಗುವುದು ಎಂದು ಪ್ರಮುಖರು ‘ಶಕ್ತಿ’ಗೆ ತಿಳಿಸಿದ್ದಾರೆ.

ಪ್ರಾಯೋಜಕತ್ವ ಪಡೆಯುವುದು, ಸರಕಾರದ ಅನುದಾನಕ್ಕೆ ಪ್ರಯತ್ನ, ಸಂಘ - ಸಂಸ್ಥೆ, ಕಂಪೆನಿಗಳನ್ನು ಸಂಪರ್ಕಿಸುವ ಕೆಲಸ ನಡೆಯುತ್ತಿರುವುದಾಗಿ ಹಾಕಿ ಉತ್ಸವ ಸಮಿತಿ ಅಧ್ಯಕ್ಷರಾಗಿರುವ ಯುವಕ ಮುದ್ದಂಡ ರಶಿನ್ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.

ಬೆಳ್ಳಿ ಹಬ್ಬ ವಿಶೇಷತೆ

ಪ್ರಸಕ್ತ ನಡೆಯಲಿರುವ ಉತ್ಸವಕ್ಕೆ ಬೆಳ್ಳಿ ಹಬ್ಬದ ಮೆರುಗು ಇದ್ದು, ಹಲವು ವಿಶೇಷತೆಗಳ ಮೂಲಕ ಆಯೋಜನೆ ಮಾಡಲಾಗುವುದು, ಕುಟುಂಬದಲ್ಲಿ ಹಲವು ಸುತ್ತಿನ ಸಭೆಗಳು ನಡೆದಿವೆ. ವಿವಿಧ ಉಪ ಸಮಿತಿಗಳು ಇದಕ್ಕೆ ಶ್ರಮಿಸಲಿವೆ. ಕೆಲವಾರು ಹೊಸ ಚಿಂತನೆಗಳಿದ್ದು, ಇದರ ನಿಟ್ಟಿನಲ್ಲಿ ವ್ಯವಹರಿಸಲಾಗುತ್ತಿದೆ. ಎಲ್ಲವೂ ಅಂತಿಮಗೊAಡ ಬಳಿಕ ಪೂರ್ಣ ವಿವರವನ್ನು ನೀಡಲಿರುವುದಾಗಿ ರಶಿನ್ ಸುಬ್ಬಯ್ಯ ಅವರು ತಿಳಿಸಿದ್ದಾರೆ.

ಉತ್ಸವ ಸಮಿತಿಯಲ್ಲಿ

ಮುದ್ದಂಡ ಕುಟುಂಬ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಅನ್ನು ಉತ್ಸವದ ಯಶಸ್ಸಿಗಾಗಿ ರಚಿಸಲಾಗಿದ್ದು, ಗೌರವ ಅಧ್ಯಕ್ಷರಾಗಿ ಎಂ.ಬಿ. ದೇವಯ್ಯ ಅಧ್ಯಕ್ಷರಾಗಿ ರಶಿನ್ ಸುಬ್ಬಯ್ಯ, ಉಪಾಧ್ಯಕ್ಷರಾಗಿ ಡೀನ್ ಬೋಪಣ್ಣ, ಎಂ.ಎನ್. ಅಶೋಕ್, ಕಾರ್ಯದರ್ಶಿಯಾಗಿ ಆದ್ಯ ಪೂವಣ್ಣ, ಜಂಟಿ ಕಾರ್ಯದರ್ಶಿಯಾಗಿ ಎಂ.ಪಿ. ರಂಜಿತ್ ಹಾಗೂ ಎಂ.ಎಲ್. ಚಂಗಪ್ಪ, ಖಜಾಂಚಿಯಾಗಿ ಎಂ. ಕಿರಣ್ ಪೂಣಚ್ಚ ಹಾಗೂ ಜಂಟಿ ಖಜಾಂಚಿಯಾಗಿ ಎಂ.ವಿ. ದಿವ್ಯಾ ಕಾರ್ಯನಿರ್ವಹಿಸುತ್ತಿದ್ದಾರೆ.