ಭಾಗಮಂಡಲ, ಅ. ೨೯: ಭಾಗಮಂಡಲ-ತಲಕಾವೇರಿ ಕ್ಷೇತ್ರಗಳ ಹುಂಡಿ ಎಣಿಕೆ ಕಾರ್ಯವು ಮಂಗಳವಾರ ನಡೆಯಿತು.

ಭಾಗಮಂಡಲ ದೇವಾಲಯದಲ್ಲಿ ಬೆಳಿಗ್ಗೆ ೯ ಗಂಟೆಯಿAದ ೩ ಗಂಟೆವರೆಗೆ ನಿರಂತರವಾಗಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ದೇವಾಲಯದ ಸಿಬ್ಬಂದಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡರು.

ಜಾತ್ರೆಯ ಬಳಿಕ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, ತಲಕಾವೇರಿಯಲ್ಲಿ ರೂ. ೫,೯೫,೧೮೭ ರೂ. ಸಂಗ್ರಹವಾಗಿದ್ದರೆ ಭಾಗಮಂಡಲದಲ್ಲಿ ೪,೦೫,೮೯೦ ರೂ. ಸಂಗ್ರಹವಾಗಿದೆ. ಅನ್ನದಾನದಲ್ಲಿ ರೂ. ೨,೦೫,೭೮೮ ಸಂಗ್ರಹವಾಗಿದ್ದು, ಒಟ್ಟಾರೆ ಸಂಗ್ರಹ ೧೨,೦೬,೮೫೫ ರೂ. ಆಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು. ಭಾಗಮಂಡಲ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ ಪಾಲ್ಗೊಂಡಿದ್ದರು. -ಸುನಿಲ್