ಮಡಿಕೇರಿ, ಅ. ೨೯: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ೨೦೨೩ನೇ ಸಾಲಿನ ಲೆಕ್ಕಪತ್ರ ಮಂಡನೆ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಲೆಕ್ಕಪತ್ರ ಮಂಡನೆ ಮಾಡಿದರು.
ಸಭೆಯಲ್ಲಿ ಗೌರವ ಸಲಹೆಗಾರರಾದ ಸವಿತಾ ರೈ ಮಾತನಾಡಿ, ಲೆಕ್ಕಪರಿಶೋಧನಾ ವರದಿ ಕ್ರಮಬದ್ಧವಾಗಿ ಆದಂತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಲೆಕ್ಕಪರಿಶೋಧಕರಿಂದ ಸಮಪರ್ಕವಾಗಿ ಲೆಕ್ಕÀಪರಿಶೋಧನಾ ಮಾಡಿಸಲಾಗಿದೆ ಎಂದರು. ದಸರಾ ಸಂಬAಧ ಸಂಗ್ರಹಿಸಲಾದ ದೇಣಿಗೆಯ ವಿವರ ನೀಡುವಂತೆ ಸವಿತಾ ರೈ, ಪತ್ರಕರ್ತ ಆನಂದ್ ಕೊಡಗು ಹೇಳಿದರು. ಲೆಕ್ಕಪರಿಶೋಧನೆ, ದಸರಾ ಖರ್ಚು ವೆಚ್ಚ ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಏನಾದರೂ ಸಂಶಯಗಳಿದ್ದರೆ ಬರವಣಿಗೆ ಮೂಲಕ ನೀಡಿದರೆ ಅದಕ್ಕೆ ಉತ್ತರ ನೀಡುತ್ತೇವೆ ಎಂದು ರಾಜೇಶ್ ಯಲ್ಲಪ್ಪ ಪ್ರತಿಕ್ರಿಯಿಸಿದರು.
ಸಣ್ಣ ಪುಟ್ಟ ತಪ್ಪುಗಳಾಗಿರಬಹುದು, ಆದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಯಾರನ್ನೂ ನಿರ್ಲಕ್ಷö್ಯ ಮಾಡಿಲ್ಲ ಎಂದು ಅರುಣ್ ಶೇಟ್ಟಿ ಹೇಳಿದರು.
ವೇದಿಕೆಯಲ್ಲಿ ನಗರಸಭಾ ಆಯುಕ್ತ ರಮೇಶ್, ಸದಸ್ಯರಾದ ಸಬಿತಾ, ಶ್ವೇತಾ, ಮುದ್ದುರಾಜ್, ಎಸ್.ಸಿ. ಸತೀಶ್, ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್ ಉಪಸ್ಥಿತರಿದ್ದರು.