ಪೊನ್ನAಪೇಟೆ, ಅ. ೨೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಹಾಕಿ ಟರ್ಫ್ ಮೈದಾನದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕೊಡಗು ಉಪನಿರ್ದೇಶಕರ ಕಚೇರಿ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾಟದ ೧೪ ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗದಲ್ಲಿ ಕೊಡಗು ಆಟಗಾರರನ್ನೊಳಗೊಂಡ ಮೈಸೂರು ವಿಭಾಗ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೈಸೂರು ವಿಭಾಗದ ಬಾಲಕರ ತಂಡ ೬ ಅಂಕಗಳೊAದಿಗೆ ಆಗ್ರ ಸ್ಥಾನ ಅಲಕರಿಸಿದರೆ, ಕಲ್ಬುರ್ಗಿ ವಿಭಾಗ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.
ಮೈಸೂರು ವಿಭಾಗ ಬಾಲಕಿಯರ ತಂಡ ಒಟ್ಟು ೪ ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದುಕೊಂಡರೆ ಕಲ್ಬುರ್ಗಿ ವಿಭಾಗ ೨ ಅಂಕಗಳೊAದಿಗೆ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಫಲಿತಾAಶ
ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ಮತ್ತು ಕಲ್ಬುರ್ಗಿ ತಂಡಗಳು ೨ - ೨ ಗೋಲುಗಳ ಸಮಬಲ ಸಾಧಿಸಿದವು. ಬೆಳಗಾವಿ ಪರ ಭರತ್ ಕುಮಾರ್, ಆನಂದ್ ತಲಾ ೧ ಗೋಲು ಗಳಿಸಿದರೆ, ಕಲ್ಬುರ್ಗಿ ಪರ ಹರ್ಷ ೨ ಗೋಲು ಹೊಡೆದರು.
ಮತ್ತೊಂದು ಪಂದ್ಯದಲ್ಲಿ ಕೂಡಿಗೆ ಕ್ರೀಡಾ ವಸತಿ ನಿಲಯ ತಂಡ ಬೆಂಗಳೂರು ತಂಡದ ವಿರುದ್ದ ೫ -೧ ಗೋಲುಗಳ ಅಂತರದಿAದ ಜಯಭೇರಿ ಬಾರಿಸಿತು. ಕೂಡಿಗೆ ಪರ ಭರತ್ ಗೌಡ ೩ ಗೋಲು ಬಾರಿಸಿ ಮಿಂಚಿದರು. ಮಲ್ಲು, ಧನೀಶ್ ತಲಾ ೧ ಗೋಲು ಹೊಡೆದರು. ಬೆಂಗಳೂರು ಪರ ಸಮರ್ಥ್ ಏಕೈಕ ಗೋಲು ದಾಖಲಿಸಿದರು.
ಮೈಸೂರು ತಂಡ ಕಲ್ಬುರ್ಗಿ ತಂಡದ ವಿರುದ್ಧ ೭-೦ ಗೋಲುಗಳ ಅಂತರದಿAದ ಸುಲಭ ಜಯ ಸಾಧಿಸಿತು. ಮೈಸೂರು ಪರ ಶರತ್ ಗೌಡ, ಬೋಪಣ್ಣ ತಲಾ ೨, ಜೋಯಪ್ಪ, ಮೋಹನ್, ಲೆನಿನ್ ಮಾದಪ್ಪ ತಲಾ ೧ ಗೋಲು ಹೊಡೆದರು.
೧೭ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕೂಡಿಗೆ ವಸತಿ ನಿಲಯ ತಂಡ, ಬೆಂಗಳೂರು ತಂಡವನ್ನು ೯ - ೧ ಗೊಲುಗಳ ಅಂತರದಿAದ ಸುಲಭವಾಗಿ ಮಣಿಸಿತು. ಕೂಡಿಗೆ ಪರ ಯಶಿಕ, ಪ್ರೀತಿ, ಪ್ರತಿಕ್ಷ, ಧನ್ಯ ತಲಾ ೨ ಗೋಲು ಬಾರಿಸಿದೆ, ಸಹನ ೧ ಗೋಲು ಗಳಿಸಿದರು. ಬೆಂಗಳೂರು ತಂಡದ ಪರ ವಿದ್ಯಾಶ್ರೀ ೧ ಗೋಲು ಹೊಡೆದರು.
ಕಲ್ಬುರ್ಗಿ ತಂಡ ಬೆಂಗಳೂರು ತಂಡವನ್ನು ೨ -೧ ಗೋಲುಗಳ ಅಂತರದಿAದ ಸೋಲಿಸಿತು. ಕಲ್ಬುರ್ಗಿ ಪರ ಗ್ರಿಷ್ಮ, ಜಸಿದ ತಲಾ ೧ ಗೋಲು ಬಾರಿಸಿದರೆ, ಬೆಂಗಳೂರು ಪರ ಮಾನಸ ೧ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು. ಮೈಸೂರು ತಂಡ ಬೆಳಗಾವಿ ತಂಡದ ವಿರುದ್ಧ ೭-೦ ಗೋಲುಗಳ ಅಂತರ ಭರ್ಜರಿ ಜಯ ಸಾಧಿಸಿತು. ಮೈಸೂರು ಪರ ಜೀವಿತ ೩, ಲಕ್ಷಿö್ಮ ೨ ಗೋಲು ಸಿಡಿಸಿದರೆ, ಶಾಲಿನಿ, ಹೇಮಾ ತಲಾ ೧ ಗೋಲು ಹೊಡೆದರು.
೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡ, ಬೆಂಗಳೂರು ತಂಡದ ವಿರುದ್ಧ ೫ - ೦ ಗೋಲುಗಳ ಅಂತರದಿAದ ಜಯಭೇರಿ ಬಾರಿಸಿತು.
ಮಹಮದ್ ನಹೀಮ್, ಶ್ರಯನ್ ತಲಾ ೨ ಗೋಲು, ಕೃಷ್ಣರಾಜ್ ೧ ಗೋಲು ಗಳಿಸಿದರು. ಮೈಸೂರು ತಂಡ ಕಲ್ಬುರ್ಗಿ ತಂಡವನ್ನು ೩- ೨ ಗೋಲುಗಳಿಂದ ಸೋಲಿಸಿತು.
ಮೈಸೂರು ಪರ ಆತ್ಮಿಕ್ ೨, ಶ್ರುಶಾಲ್ ಗೌಡ ೧ ಗೋಲು ಗಳಿಸಿದರು. ಕಲ್ಬುರ್ಗಿ ಪರ ನಯಾಜ್, ಅಭಿಷೇಕ್ ತಲಾ ಒಂದು ಗೋಲು ಬಾರಿಸಿದರು.
೧೪ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕಲ್ಬುರ್ಗಿ ತಂಡ ಬೆಂಗಳೂರು ತಂಡವನ್ನು ೪ - ೩ ಗೋಲುಗಳ ಅಂತರದಿAದ ಸೋಲಿಸಿತು. ಕಲ್ಬುರ್ಗಿ ಪರ ಪಲ್ಲವಿ ೨, ಭವಾನಿ, ಸಾಯಿ ನಿಕಿತಾ ತಲಾ ಒಂದು ಗೋಲು ಗಳಿಸಿದರು. ಬೆಂಗಳೂರು ತಂಡದ ಪರ ದೀಪ ಮಾದವ್, ಅಮೂಲ್ಯ, ಅಶ್ವಿನಿ ತಲಾ ೧ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು. -ಚನ್ನನಾಯಕ