ಕೂಡಿಗೆ, ಅ. ೨೯: ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯ ಎಲ್ಲಾ ಗ್ರಾಮಗಳ ನೂರಾರು ಸದಸ್ಯರು ಶಿವಮೊಗ್ಗ ಜಿಲ್ಲೆಯ ಹೊಸ ನಗರ ತಾಲೂಕಿನ ಜಕ್ಕಗೀರಿ ಗ್ರಾಮದ ರಾಷ್ಟಿçÃಯ ಕೃಷಿ ಪ್ರಶಸ್ತಿ ಪಡೆದ ಪ್ರಗತಿಪರ ರೈತ ವಿಜಯೇಂದ್ರ ಭಟ್ ಅವರ ತೋಟಕ್ಕೆ ಭೇಟಿ ನೀಡಿದರು.
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ನೂರಾರು ರೈತರು ವಿಜಯೇಂದ್ರ ಭಟ್ ಅವರ ತೋಟಕ್ಕೆ ತೆರಳಿ ನೈಸರ್ಗಿಕ ಸಾವಯವ ಗೊಬ್ಬರ, ರಾಸಾಯನಿಕ ಮುಕ್ತ ಕೃಷಿ, ಅಡಿಕೆ, ಕಾಫಿ, ಏಲಕ್ಕಿ, ಲವಂಗ, ಮಾವು, ಕಿತ್ತಳೆ, ಸೀಬೆ, ನಿಂಬೆ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳ ಬಗ್ಗೆ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಕೆ.ವಿ. ಬಸಪ್ಪ, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಅರುಣ್ ರಾವ್, ಸಂಘದ ನಿರ್ದೇಶಕರಾದ ಕೆ.ಪಿ. ರಾಜು, ರಾಮಚಂದ್ರ, ಎಸ್.ಎಸ್. ಕೃಷ್ಣ, ನಾಗರಾಜು ಕೃಷ್ಣಗೌಡ, ಜಯಶ್ರೀ, ರಮೇಶ್, ಕುಮಾರ್ ಸೇರಿದಂತೆ ಪ್ರಗತಿಪರ ರೈತರಾದ ಕೆ.ವಿ. ಸಣ್ಣಪ್ಪ, ನಾಗರಾಜು ಶಶಿಕುಮಾರ್, ಸೋಮಣ್ಣ, ಮಂಜುನಾಥ ಸೋಮಶೇಖರ್, ಭೀಮಣ್ಣ, ರಾಜಣ್ಣ, ಸುರೇಶ್, ವಿಶ್ವೇಶ್ವರಯ್ಯ, ದಿನೇಶ್, ಪುಟ್ಟ, ರಾಜ ಹಾಗೂ ಇತರರು ಇದ್ದರು.