ಸೋಮವಾರಪೇಟೆ, ಅ. ೨೯: ಸೋಮವಾರಪೇಟೆ ತಾಲೂಕು ಗ್ರೇಡ್-೧ ತಹಶೀಲ್ದಾರ್ ಆಗಿ ಕೆ.ಕೆ. ಕೃಷ್ಣಮೂರ್ತಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗ್ರೇಡ್-೧ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಅವರನ್ನು ಸೋಮವಾರಪೇಟೆ ತಾಲೂಕು ಗ್ರೇಡ್-೧ ತಹಶೀಲ್ದಾರ್ ಆಗಿ ನೇಮಿಸಿ ಅಲ್ಲಿಂದ ವರ್ಗಾಯಿಸಲಾಗಿದೆ.

ಪ್ರಸ್ತುತ ಸೋಮವಾರಪೇಟೆಯ ಗ್ರೇಡ್-೨ ತಹಶೀಲ್ದಾರ್ ಆಗಿರುವ ಶ್ರೀಧರ್ ಕಂಕನವಾಡಿ ಅವರು ಪ್ರಭಾರವಾಗಿ ಗ್ರೇಡ್-೧ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.