ಮಡಿಕೇರಿ, ಅ. ೨೯: ಕರ್ನಾಟಕ ಮತ್ತು ಗೋವಾ ರಾಜ್ಯದ ಮಂಗಳೂರು ಗ್ರೂಪ್ನಡಿಯಲ್ಲಿ ಬರುವ ೧೯ನೇ ಕರ್ನಾಟಕ ಬೆಟಾಲಿಯನ್ ಮಡಿಕೇರಿ ವತಿಯಿಂದ ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ ಎನ್ಸಿಸಿ ವಾರ್ಷಿಕ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ೩೫ ಶಾಲಾ - ಕಾಲೇಜಿನ ೬೦೦ ಕೆಡೆಟ್ಗಳು ಭಾಗವಹಿಸಿದ್ದರು. ಶಿಬಿರದ ಮೇಲುಸ್ತುವಾರಿಯನ್ನು ಬೆಟಾಲಿಯನ್ನ ಕ್ಯಾಂಪ್ ಕಮಾಂಡೆAಟ್ ಲೆ.ಕ. ಮುಕುಂದನ್ ಮತ್ತು ಡೆಪ್ಯುಟಿ ಕ್ಯಾಂಪ್ ಕಮಾಂಡೆAಟ್ ಲೆ.ಕ. ಶ್ರೀನಿವಾಸನ್ ಅವರು ವಹಿಸಿದ್ದರು.
ಶಿಬಿರದಲ್ಲಿ ಹತ್ತು ಹಲವು ಹಂತಗಳಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಶಿಸ್ತಿನಿಂದ ರೂಪಿಸಲು ಹಲವು ಕಾರ್ಯಕ್ರಮಗಳನ್ನು, ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೈಫಲ್ಗಳನ್ನು ಹಿಡಿಯುವ ಬಗೆ ಹಾಗೂ ಫೈರಿಂಗ್ ಅನುಭವ, ಸೈನಿಕರು ಯುದ್ಧದ ಸಮಯದಲ್ಲಿ ಬಳಸುವ ಅತಿಮುಖ್ಯವಾಗಿರುವ ಸೆಕ್ಷನ್ ಫಾರ್ಮೇಷನ್ ಒಂದು ಪ್ರಾತ್ಯಕ್ಷತೆ, ಕರ್ನಾಟಕ ರಾಜ್ಯ ಅಗ್ನಿ ಶಾಮಕದಳದ ವತಿಯಿಂದ ಅಗ್ನಿ ನಂದಿಸುವುದು ಹಾಗೂ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ಗಳಿAದ ಆಗುವ ಅನಾಹುತಗಳನ್ನು ಪತ್ತೆಹಚ್ಚಿ ಅದನ್ನು ಸರಿಪಡಿಸುವ ಬಗೆಯ ಪ್ರಾತ್ಯಕ್ಷಿತೆ ಮಕ್ಕಳ ಆರೋಗ್ಯ ವೃದ್ಧಿಗಾಗಿ ಯೋಗ ತರಬೇತಿ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದಲ್ಲದೆ ವಾಲಿಬಾಲ್, ತ್ರೋಬಾಲ್, ಫುಟ್ಬಾಲ್ ಸ್ಪರ್ಧೆಗಳನ್ನು ಆಯೋಜಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.