ಕಡಂಗ, ಅ. ೨೯: ವಿಖ್ಯಾತ ಸಮನ್ವಯ ಶಿಕ್ಷಣ ಸಂಸ್ಥೆ, ಕಾಸರಗೋಡು ಜಾಮಿಅ ಸಅದಿಯಾ ಸಂಸ್ಥೆಯ ೫೫ನೇ ವಾರ್ಷಿಕ ಸಮ್ಮೇಳನ ಮತ್ತು ಘಟಿಕೋತ್ಸವ ಪ್ರಯುಕ್ತ ಕೊಡಗು ಜಿಲ್ಲೆಯ ಪ್ರಚಾರ ಸಮಾವೇಶಕ್ಕೆ ನೆಲ್ಲಿಹುದಿಕೇರಿಯ ದಾರುನ್ನಜಾತ್ ಸಂಸ್ಥೆಯಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು
ಕೂರ್ಗ್ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಂ.ಯು.ಎಸ್. ಜಿಲ್ಲಾಧ್ಯಕ್ಷರಾದ ಹಂಝ ಸಅದಿ ಹುಂಡಿ ಅವರು ವಹಿಸಿದ್ದರು.
ಮುಖ್ಯ ಪ್ರವಚನವನ್ನು ಹಾಗೂ ಅಗಲಿದ ಸಂಸ್ಥೆಯ ಪ್ರಮುಖರಾದ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣೆಯನ್ನು ಖ್ಯಾತ ವಾಗ್ಮಿ ರಫೀಕ್ ಸಅದಿ ದೇಲಂಪಾಡಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಎಸ್.ಎಸ್.ಎಫ್.ಎಸ್.ವೈ.ಎಸ್, ಮುಸ್ಲಿಂ ಜಮಾಅತ್, ಎಸ್.ಜೆ.ಎಂ. ಕೂರ್ಗ್ ಜಂಇಯ್ಯತುಲ್ ಉಲಮಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಸಮ್ಮೇಳನಕ್ಕೆ ಶುಭ ಕೋರಿದರು.
ಬಳಿಕ ನವೆಂಬರ್ ತಿಂಗಳ ೨೨, ೨೩, ೨೪ ರಂದು ನಡೆಯಲಿರುವ ಸಮ್ಮೇಳನ ಪ್ರಚಾರಕ್ಕೆ ಕೊಡಗು ಜಿಲ್ಲೆಯಲ್ಲಿ ಪ್ರಚಾರ ಸಮಿತಿಯನ್ನು ರಚಿಸಲಾಯಿತು.
ಛೇರ್ಮನ್ ಆಗಿ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಕಿಲ್ಲೂರ್ ತಂಙಳ್, ವೈಸ್ ಛೇರ್ಮನ್ ಗಳಾಗಿ ಅಶ್ರಫ್ ಅಹ್ಸನಿ, ಸಯ್ಯಿದ್ ಇಲ್ಯಾಸ್ ತಂಘಳ್ ಎಮ್ಮೆಮಾಡು, ಹಫೀಳ್ ಸಅದಿ ಕೊಳಕೇರಿ, ಹಮೀದ್ ಉಸ್ತಾದ್ ಕೊಳಕೇರಿ, ಖಾಲಿದ್ ಫೈಝಿ ಅಂಬಟ್ಟಿ, ಝುಭೈರ್ ಸಅದಿ ಮಾಲ್ದಾರೆ ಆಯ್ಕೆಯಾದರು.
ಜನರಲ್ ಕನ್ವೀನರ್ ಆಗಿ ಮುಹಮ್ಮದ್ ನಿಝಾರ್ ಸಖಾಫಿ ಅಫ್ಳಲ್ ಸಅದಿ ಕಡಂಗ, ಕನ್ವೀನರ್‌ಗಳಾಗಿ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಇಸ್ಮಾಯಿಲ್ ಸಖಾಫಿ ಕೊಂಡAಗೇರಿ, ಮುಹಮ್ಮದ್ ಹಾಜಿ ಕುಂಜಿಲ, ಅಹ್ಮದ್ ಮದನಿ ಗುಂಡಿಕೆರೆ, ಅಬ್ದುಲ್ಲಾ ಸಖಾಫಿ ಕೊಳಕೇರಿ, ಮುನೀರ್ ಸಅದಿ ಎಮ್ಮೆಮಾಡು, ರಫೀಕ್ ಸಅದಿ ೭ ನೇ ಹೊಸಕೋಟೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಕಾರ್ಯದರ್ಶಿ ರಫೀಕ್ ಸಅದಿ ಪಾಲಿಬೆಟ್ಟ, ವಂದನೆಯನ್ನು ಮುಹಮ್ಮದ್ ನಿಝಾರ್ ಸಖಾಫಿ ಅಫ್ಳಲ್ ಸಅದಿ ಕಡಂಗ ಮಾಡಿದರು.
ಕೂರ್ಗ್ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾದ ಸಯ್ಯಿದ್ ಕಿಲ್ಲೂರ್ ತಂಙಳ್ ಅವರು ಸಮಾರೋಪ ಪ್ರಾರ್ಥನೆಯ ಮುಂದಾಳತ್ವ ವಹಿಸಿದ್ದರು.