ಮಡಿಕೇರಿ, ಅ ೨೯: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ರೋಟರಿ ವುಡ್ಸ್ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಜಾಗತಿಕ ಪೊಲೀಯೋ ನಿರ್ಮೂಲನ ದಿನದ ಅಂಗವಾಗಿ ಬೈಕ್ ಜಾಥಾ ಆಯೋಜಿತವಾಗಿತ್ತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೈಕ್ ಜಾಥಾಕ್ಕೆ ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಲೋಕೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಪೋಲಿಯೋ ಲಸಿಕೆ ಹಾಕಿಸಿ ಕೊಳ್ಳುವ ಮೂಲಕ ಪೊಲಿಯೋ ನಿರ್ಮೂಲನೆಗೆ ಸಹಕರಿಸುವಂತೆ ಮಡಿಕೇರಿಯ ಮುಖ್ಯರಸ್ತೆ ಮೂಲಕ ೩೨ ಬೈಕ್ ಸವಾರರು ಸಂದೇಶವನ್ನು ಸಾರಿದರು.
ಈ ಜಾಥಾವು ಪೋಲಿಯೋ ವಿರೋಧದ ಹೋರಾಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ತಿಳಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ಖಜಾಂಜಿ ಲಿಂಗರಾಜುಸ, ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದೂರು, ರೋಟರಿ ಪ್ರಮುಖರಾದ ಕೆ.ಕೆ. ವಿಶ್ವನಾಥ್, ಎ.ಕೆ. ಜೀವನ್, ಪ್ರಮೋದ್ ಕುಮಾರ್ ರೈ, ಎಸ್.ಎಸ್. ಸಂಪತ್ ಕುಮಾರ್, ವಸಂತ್ ಕುಮಾರ್, ಅಜ್ಜೇಟಿರ ಲೋಕೇಶ್, ಎ.ಕೆ.ವಿನೋದ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.