ವೀರಾಜಪೇಟೆ, ಅ. ೨೯: ೮೫ನೇ ಮಿಲಿಟರಿ ಪೊಲೀಸ್ ಕಾರ್ಪ್ಸ್ ಕೊಡಗು ವತಿಯಿಂದ ಐದನೇ ವರ್ಷದ ಮಾಜಿ ಯೋಧರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಈ ಸಂಸ್ಥೆಯನ್ನು ಹುಟ್ಟು ಹಾಕಿದ ದಿನವನ್ನು ವೀರಾಜಪೇಟೆಯ ರೆಸಾರ್ಟ್ ವೊಂದರಲ್ಲಿ ಆಚರಣೆ ಮಾಡಲಾಯಿತು. ಸಂಸ್ಥಾಪನಾ ದಿನದ ಅಂಗವಾಗಿ ಶೂಟಿಂಗ್ ಮತ್ತು ಭಾರದ ಗುಂಡು ಎಸೆತದ ಕ್ರೀಡೆಗಳನ್ನು ನಡೆಸಲಾಯಿತು. ಶೂಟಿಂಗ್ ಸ್ಪರ್ಧೆಯನ್ನು ರೆಸಾರ್ಟ್ ಮಾಲೀಕ ಶಾಜಿಲ್ ಗುಂಡು ಹಾರಿಸುವ ಮೂಲಕ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಕ್ಯಾಪ್ಟನ್ ಸಿ.ಜಿ. ತಿಮ್ಮಯ್ಯ ಮಾತನಾಡಿ, ೧೯೪೩ ರ ಅಕ್ಟೋಬರ್ ೧೮ರಲ್ಲಿ ಬ್ರಿಟಿಷ್ ಕಾಲದಲ್ಲಿ ಸ್ಥಾಪನೆಯಾದ ೮೫ನೇ ಸೇನಾ ಪೊಲೀಸ್ ಕಾರ್ಪ್ಸ್ ಆ ಸಮಯದಲ್ಲಿ ರಾಯಲ್ ಮಿಲ್ಟಿç ಪೊಲೀಸ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು.
ಆ ಸಮಯದಲ್ಲಿ ಶೇ. ೫೦ ಭಾರತೀಯರು ಮತ್ತು ಬ್ರಿಟಿಷರಿದ್ದರು. ಸ್ವಾತಂತ್ರ ನಂತರ ಬ್ರಿಟಿಷರನ್ನು ಹೊರತುಪಡಿಸಿ ಕೇವಲ ಭಾರತೀಯರು ಮಾತ್ರ ಇದ ಹಿನ್ನೆಲೆ ಕಾಪ್ಸ್ ಆಫ್ ಮಿಲ್ಟಿç ಪೊಲೀಸ್ ಎಂದು ನಾಮಕರಣ ಮಾಡಲಾಯಿತು. ಇದರ ತರಬೇತಿ ಕೇಂದ್ರವು ಉತ್ತರ ಪ್ರದೇಶದ ಫಾಸಿಯಾಬಾದ್‌ನಲ್ಲಿ ಆರಂಭಗೊAಡ ನಂತರ ಕೇಂದ್ರವನ್ನು ೧೯೭೫ ರಲ್ಲಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು ಎಂದರು. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಿಂದ ಸೇನೆಗೆ ಸೇರುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಕೊಡಗಿನ ಹೆಚ್ಚು ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿಕೊಳ್ಳುವಂತೆ ಮನವಿ ಮಾಡಿದರು. ಶೂಟಿಂಗ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಿ.ಎಂ ಸುರೇಶ್, ದ್ವಿತೀಯ ಬಹುಮಾನ ಬಿ.ಎ ಬೋಪಯ್ಯ, ತೃತೀಯ ಬಹುಮಾನ ಟಿ.ಎಂ ರಮೇಶ್ ಪಡೆದುಕೊಂಡರು.
ಭಾರದ ಗುಂಡು ಎಸೆತದಲ್ಲಿ ಮೊದಲ ಬಹುಮಾನ ಮುತ್ತಪ್ಪ, ಎರಡನೇ ಬಹುಮಾನ ಯತೀಶ್, ಮೂರನೇ ಬಹುಮಾನ ನಂಜುAಡ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸುಬೇದಾರ್‌ಗಳಾದ ಎ. ಅಚ್ಚಪ್ಪ, ಜಿ.ಪಿ ಕುಶಾಲಪ್ಪ, ಟಿ.ಎಂ ರಮೇಶ್, ಪಿ.ಎಂ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.