ಮಡಿಕೇರಿ, ಅ. ೨೯: ಕೊಡಗು ಜಿಲ್ಲೆಯ ಮೂಲಕ ವಿದೇಶದಿಂದ ಹೈಡ್ರೋ ಗಾಂಜಾ ಸಾಗಾಟ ಮಾಡಿ ದೇಶದ ವಿವಿಧೆಡೆ ಹಾಗೂ ದುಬೈಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಅಂರ‍್ರಾಷ್ಟಿçÃಯ ಜಾಲವೊಂದನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತರಾಗಿದ್ದ ಏಳು ಆರೋಪಿಗಳಲ್ಲಿ ಆರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ ತಾ. ೨೫ ರಂದು ಜಾಮೀನು ದೊರೆತು ಬಿಡುಗಡೆಗೊಂಡಿದ್ದಾರೆ. ಹೆಗ್ಗಳ ಗ್ರಾಮದ ಎಂ.ಯು. ನಾಸಿರುದ್ದೀನ್ (೨೬), ಮಡಿಕೇರಿ ತಾಲೂಕಿನ ಎಡಪಾಲ ಗ್ರಾಮದ ಸಿ.ಹೆಚ್. ಯಹಾ ್ಯ(೨೮), ಕುಂಜಿಲ ಗ್ರಾಮದ ಅಕಿನಾಸ್ (೨೬), ಬೆಟೋಳಿ ಗ್ರಾಮದ ವಾಜಿದ್(೨೬), ಕೇರಳದ ಕಣ್ಣೂರಿನ ರಿಯಾಝ್ (೪೪), ಹಾಗೂ ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ರವೂಫ್ ಎಂ.ಎ. (೨೮) ಸೇರಿ ಆರು ಆರೋಪಿಗಳು ಇದೀಗ ಬಿಡುಗಡೆಗೊಂಡಿದ್ದಾರೆ.
ಆರೋಪಿಗಳ ಪರ ಜಿಲ್ಲೆಯ ವಕೀಲರುಗಳಾದ ಸುಫಿಯಾನ್ ಎಂ.ಎA. ಹಾಗೂ ಪ್ರೀತಮ್ ಪಿ.ಯು. ವಾದ ಮಂಡಿಸಿದ್ದರು.