ಚೆಟ್ಟಳ್ಳಿ, ಅ. ೩೦: ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದ ಕ್ಷೇತ್ರಪಾಲ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ವಿಘ್ನೇಶ್ವರ, ನಾಗ, ಶ್ರೀ ಭಗವತಿಗೆ ಪೂಜೆ ಸಲ್ಲಿಸಲಾಯಿತು. ಕ್ಷೇತ್ರಪಾಲಕನ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ಅರ್ಚಕರಾದ ರಾಧಾಕೃಷ್ಣ ಭಟ್ ಮಹಾ ಪೂಜೆ ನೆರವೇರಿಸಿದರು. ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.