ಪೊನ್ನಂಪೇಟೆ, ಅ. ೩೦: ಗೋಣಿ ಕೊಪ್ಪಲಿನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಕೃಷಿ ತಂತ್ರಜಾನ ಅಳವಡಿಕೆ ಸಂಶೋಧನಾಸAಸ್ಥೆ ಮತ್ತು ನವದೆಹಲಿಯ ಭಾರತೀಯ ಕೃಷಿ ಕೌಶ ಲ್ಯಾಭಿವೃದ್ಧಿ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೇನು ಸಾಕಾಣಿಕೆಯ ಬಗ್ಗೆ ಜೇನು ಕೃಷಿಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ರೈತ ರಾಣಾ ನಂಜಪ್ಪ ಅವರು, ಕೊಡಗಿನಲ್ಲಿ ಹುಟ್ಟಿರುವವರಿಗೆ ಅಲ್ಪ ಸ್ವಲ್ಪ ಜೇನು ಕೃಷಿ ಬಗ್ಗೆ ತಿಳಿದಿರುತ್ತದೆ. ಕೊಡಗಿನಲ್ಲಿ ಜೇನು ಕೃಷಿ ಮಾಡಲು ಉತ್ತಮವಾದ ಹವಾಮಾನವಿರುತ್ತದೆ. ಕೊಡಗಿನ ಜನರು ಇತರ ಕೃಷಿಯ ಜೊತೆ, ಜೇನು ಕೃಷಿಯನ್ನು ಮಾಡಿಕೊಂಡಿರುತ್ತಾರೆ. ಕಡಿಮೆ ಪ್ರಮಾಣದ ಜಾಗವನ್ನು ಹೊಂದಿರುವವರು ಜೇನು ಕೃಷಿಯೊಂದಿಗೆ ಅಣಬೆ ಕೃಷಿ ಹಾಗೂ ಹೂದೋಟವನ್ನು ಕೂಡ ಮಾಡಿಕೊಳ್ಳಬಹುದು. ಮನೆಯಲ್ಲಿ ಇದ್ದುಕೊಂಡೇ ಹಲವಾರು ಉದ್ಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶವಿದೆ. ತರಬೇತಿ ಕೇಂದ್ರಗಳ ಪ್ರಯೋಜನವನ್ನು ಪಡೆದುಕೊಂಡು ಕೃಷಿಯನ್ನು ಉದ್ಯಮವಾಗಿ ಬೆಳೆಸಿಕೊಳ್ಳಬೇಕು. ತೋಟಗಾರಿಕೆಯೊಂದಿಗೆ ಜೇನು ಕೃಷಿಯನ್ನು ಬೆಳವಣಿಗೆ ಮಾಡುವುದರಿಂದ ಅತ್ಯುತ್ತಮ ಗುಣಮಟ್ಟದ ಜೇನು ಸಂಗ್ರಹಣೆ ಸಾಧ್ಯವಾಗುತ್ತದೆ ಎಂದರು.

ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಆರ್.ಎನ್. ಕೆಂಚರೆಡ್ಡಿ ಅವರು ಮಾತನಾಡಿ ಜೇನು ನೊಣಗಳ ಜೀವನವು ಯಾವಾಗಲೂ ಅವಸರದಿಂದ ಕೂಡಿರುತ್ತದೆ. ಅವುಗಳು ಯಾವಾಗಲೂ ತಮ್ಮ ಕೆಲಸದಲ್ಲಿ ತೊಡಗಿರುತ್ತವೆ. ಕೃಷಿ ಮಾಡುವವರು ಪ್ರತಿಫಲದ ಅಪೇಕ್ಷೆ ಇಲ್ಲದೆ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗಬೇಕು. ಜೇನುನೊಣಗಳಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲವೆಂದಾದರೆ ಅವುಗಳು ಸತ್ತು ಹೋಗುತ್ತವೆ. ಈ ಜೇನುನೊಣಗಳನ್ನು ಪ್ರದರ್ಶನದ ಸಮಯದಲ್ಲಿ ಗಾಜಿನ ಪೆಟ್ಟಿಗೆಯಲ್ಲಿ ಇಟ್ಟಾಗ ಅವು ಕೆಲಸವಿಲ್ಲದೆ ಹಾರಾಡಿ ಹಾರಾಡಿ ಆಯಾಸಗೊಂಡು ಸತ್ತು ಹೋಗುತ್ತವೆ ಎಂದು ಉದಾಹರಣೆಯನ್ನು ನೀಡಿದರು. ಅಲ್ಲದೆ ಇವರು ಜೇನು ಕೃಷಿಯನ್ನು ಮಾಡಲು ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.

ಗೋಣಿಕೊಪ್ಪ ಐಸಿಎಆರ್ ಕೆವಿಕೆ ಮುಖ್ಯಸ್ಥ ಡಾ. ಬಿ ಪ್ರಭಾಕರ್ ಅವರು ಮಾತನಾಡಿ ಇದೇ ಮೊದಲ ಬಾರಿಗೆ ಎರಡು ದಿನಗಳ ಜೇನು ಕೃಷಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದು ಜಿಲ್ಲಾಮಟ್ಟದ ಕಾರ್ಯಾಗಾರವಾಗಿದ್ದು, ಎಲ್ಲಾ ತಾಲೂಕಿನ ರೈತರಿಗೆ ಮಾಹಿತಿಯನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ. ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡ ಕೆಲವರು ತಮ್ಮ ಮನೆಗಳ ಉಪಯೋಗಕ್ಕೆ ಜೇನು ಕೃಷಿಯನ್ನು ಮಾಡಿಕೊಂಡರೆ ಕೆಲವರು ಮಾರಾಟ ಮಾಡುವ ಉದ್ದೇಶದಿಂದ ಜೇನು ಕೃಷಿಯನ್ನು ಮಾಡುತ್ತಿದ್ದಾರೆ. ಒಂದು ಕೃಷಿಯ ಜೊತೆ ಜೊತೆಗೆ ಮತ್ತೊಂದು ಕೃಷಿಯಾಗಿ ಜೇನು ಕೃಷಿಯನ್ನು ಅಳವಡಿಸಿಕೊಂಡಾಗ ಜೀವನ ಸುಧಾರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಜೇನುನೊಣಗಳಿಗೆ ಕೃತಕ ಆಹಾರವನ್ನು ನೀಡಬೇಕಾಗುತ್ತದೆ. ಜೇನುಕೃಷಿಯಲ್ಲಿ ತೊಡಗಿಸಿಕೊಂಡವರು ಸದಾ ಅದರೊಂದಿಗೆ ಜೀವನ ನಡೆಸಬೇಕಾಗುತ್ತದೆ. ಕಡಿಮೆ ಸಮಯದಲ್ಲಿ ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಪೊನ್ನಂಪೇಟೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಜೇನು ಕೃಷಿ ಕೇಂದ್ರ ತೆರೆಯುವ ಉದ್ದೇಶವನ್ನು ಹೊಂದಿದ್ದು ಕೃಷಿಕರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜೇನು ಕೃಷಿಯಿಂದ ಕೇವಲ ಉತ್ಪನ್ನವಲ್ಲದೆ ಉಪ ಉತ್ಪನ್ನವು ದೊರೆಯುತ್ತದೆ. ತೋಟಗಾರಿಕಾ ಇಲಾಖೆಯವರು ಕೂಡ ಅನೇಕ ಕಾರ್ಯಾಗಾರಗಳನ್ನು ಏರ್ಪಡಿಸುತ್ತಾರೆ. ರೈತಾಪಿ ಜನರು ಜೇನು ಕೃಷಿಯ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು ಜೇನು ಕೃಷಿಯ ಏಳಿಗೆಗೆ ಕಾರಣರಾಗಬೇಕೆಂದು ಕೇಳಿಕೊಂಡರು.

ಕಾರ್ಯಾಗಾರದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ೪೦ಕ್ಕೂ ಹೆಚ್ಚು ಜೇನು ಕೃಷಿಕರು ತಮ್ಮ ಅನುಭವ ಹಂಚಿಕೊAಡರು. ಕಾರ್ಯಕ್ರಮದಲ್ಲಿ ಸಸ್ಯ ಸಂರಕ್ಷಣಾ ತಜ್ಞ ಡಾಕ್ಟರ್ ವೀರೇಂದ್ರ ಕುಮಾರ್, ಡಾ. ಮೋಹನ್, ಲಕ್ಷಿö್ಮ, ಮೃಣಾಲ್, ಮತ್ತಿತರರು ಉಪಸ್ಥಿತರಿದ್ದರು.