ಮಡಿಕೇರಿ, ಅ. ೩೦: ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ರಾಷ್ಟçವ್ಯಾಪಿ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಅಭಿಯಾನವನ್ನು ನವೆಂಬರ್ ೧ ರಿಂದ ೩೦ ರವರೆಗೆ ಹಮ್ಮಿಕೊಂಡಿದ್ದು, ಪಿಂಚಣಿದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಎಸ್.ಪಿ. ರವಿ ಕೋರಿದ್ದಾರೆ.

ಮುಖ ಚಹರೆ ಮತ್ತು ಬೆರಳಚ್ಚು ದೃಢೀಕರಣದ ಡಿಜಿಟಲ್ ಪ್ರಕ್ರಿಯೆ ಮೂಲಕ ಈ ಅಭಿಯಾನ ನಡೆಯಲಿದೆ. ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ ಪರಿಶೀಲಿಸಿ ಸಲ್ಲಿಸಬಹುದು.