ಮಡಿಕೇರಿ, ಅ. ೩೦: ಕರ್ನಾಟಕ ಸಂಭ್ರಮ - ೫೦ರ ಅಭಿಯಾನದ ಸುವರ್ಣ ಮಹೋತ್ಸವಅಂಗವಾಗಿ ಕರ್ನಾಟಕ ಸರಕಾರದಿಂದ ಈ ವರ್ಷ ಕೊಡಮಾq Àಲಾಗುತ್ತಿರುವ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಗೊಂಡಿದ್ದಾರೆ.

ಕ್ರೀಡೆ ಕ್ಷೇತ್ರದಲ್ಲಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಹಾಗೂ ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ನಂದಿನಿ ಬಸಪ್ಪ ಪ್ರಶಸ್ತಿಗೆ ಆಯ್ಕೆಗೊಂಡವರು.

ಪೊನ್ನಂಪೇಟೆ ನಿವಾಸಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ೧೯೫೭ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಕಿ ತಂಡ ಪ್ರತಿನಿಧಿಸಿದ್ದರು. ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಸ್ಥಾಪಕಾಧ್ಯಕ್ಷರಾಗಿರುವ ಇವರು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿ ಇಂದಿಗೂ ಕೆಲಸ ಮಾಡುತ್ತಿದ್ದಾರೆ.

ಸುಂಟಿಕೊಪ್ಪದ ಪನ್ಯ ಎಸ್ಟೇಟ್‌ನ ನಿವಾಸಿ, ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ನಂದಿನಿ ಬಸಪ್ಪ ಅವರು ಕೂಡ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಇವರು ಹಲವು ರಾಷ್ಟç, ಅಂತರರಾಷ್ಟಿçÃಯ ಮಟ್ಟದ ಪಂದ್ಯಾಟಗಳನ್ನು ಆಡಿದ್ದಾರೆ. ಜೊತೆಗೆ ನಾಯಕಿಯಾಗಿಯೂ ತಂಡವನ್ನು ಮುನ್ನಡೆಸಿ ಸಾಧನೆ ತೋರಿದ್ದಾರೆ. ಬಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷೆಯಾಗಿ, ಭಾರತ ಜೂನಿಯರ್ ಮಹಿಳಾ ಬಾಸ್ಕೆಟ್ ತಂಡದ ವ್ಯವಸ್ಥಾಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ೨೦೦೧ರಲ್ಲಿ ಕೆಂಪೇಗೌಡ ಪ್ರಶಸ್ತಿ, ರಾಜ್ಯ ಕ್ರೀಡಾ ಪ್ರಶಸ್ತಿಯೂ ಲಭಿಸಿದೆ. ಇವರುಗಳು ಸೇರಿದಂತೆ ರಾಜ್ಯದ ಒಟ್ಟು ೧೦೦ ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.