ಮಡಿಕೇರಿ, ಅ. ೩೦: ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗೆ ಮೂಲತಃ ಕೊಡಗಿನ ತೊರೆನೂರು ನಿವಾಸಿ, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಪ್ರೊ. ಪದ್ಮ ಶೇಖರ್‌ಗೆ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ ೨೦೧೯ರಲ್ಲಿ ನಿವೃತ್ತರಾದ ಪದ್ಮ ಶೇಖರ್ ಅವರು, ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತç ಮತ್ತು ಪ್ರಾಕೃತ ವಿಭಾಗದ ಪ್ರಾಧ್ಯಾಪಕಿಯಾಗಿ, ಮಹಿಳಾ ಅಧ್ಯಯನ ಕೇಂದ್ರ ನಿರ್ದೇಶಕಿಯಾಗಿ, ಕ್ರೆöÊಸ್ತಶಾಸ್ತç ವಿಭಾಗದ ಅಧ್ಯಕ್ಷರಾಗಿ, ಮೈಸೂರು ವಿ.ವಿ. ಮಹಿಳಾ ವಸತಿ ನಿಲಯ ಮುಖ್ಯ ಮೇಲ್ವಿಚಾರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಶಿಕ್ಷಣ ಕ್ಷೇತ್ರದೊಂದಿಗೆ ಸಾಹಿತ್ಯ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಪದ್ಮ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಸಾಧನೆಗೆ ಹತ್ತುಹಲವು ಪ್ರಶಸ್ತಿಗಳು ಲಭಿಸಿವೆ. ಇದರೊಂದಿಗೆ ಹಲವರಿಗೆ ಪಿಹೆಚ್‌ಡಿ ಮಾರ್ಗದರ್ಶನ ನೀಡಿದ ಹೆಗ್ಗಳಿಕೆಯೂ ಇವರಿಗಿದೆ. ಪದ್ಮಶೇಖರ್ ಸೇರಿದಂತೆ ೬೯ ಸಾಧಕರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.