ಪೊನ್ನAಪೇಟೆ, ಅ. ೩೦ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಹಾಕಿ ಟರ್ಫ್ ಮೈದಾನದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕೊಡಗು ಉಪನಿರ್ದೇಶಕರ ಕಚೇರಿ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾಟದ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರು ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ವಿಭಾಗದಲ್ಲಿ ಬಹುತೇಕ ಕೊಡಗು ಆಟಗಾರರನ್ನೊಳಗೊಂಡ ಮೈಸೂರು ವಿಭಾಗ ತಂಡ ಸರ್ವ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪ್ರೌಢಶಾಲಾ ಬಾಲಕ ಬಾಲಕಿಯರ ವಿಭಾಗದಲ್ಲಿ ಕೂಡಿಗೆ ಕ್ರೀಡಾ ವಸತಿ ನಿಲಯ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೈಸೂರು ವಿಭಾಗದ ಬಾಲಕರ, ಬಾಲಕಿಯರ ತಂಡ ಚಾಂಪಿಯನ್ ಆದರೆ, ಕಲ್ಬುರ್ಗಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ಪ್ರೌಢಶಾಲಾ ಬಾಲಕರ ವಿಭಾಗದ ನಿರ್ಣಾಯಕ ಪಂದ್ಯದಲ್ಲಿ ಮೈಸೂರು ವಿಭಾಗ ತಂಡ ಕೂಡಿಗೆ ಕ್ರೀಡಾ ವಸತಿ ನಿಲಯ ತಂಡದ ವಿರುದ್ಧ ೩ - ೧ ಗೋಲುಗಳ ಅಂತರದ ಜಯಭೇರಿ ಬಾರಿಸಿ, ಒಟ್ಟು ೧೮ ಅಂಕಗಳೊAದಿದೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೂಡಿಗೆ ಕ್ರೀಡಾ ವಸತಿ ನಿಲಯ ತಂಡ ೧೬ ಅಂಕಗಳೊAದಿಗೆ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮೈಸೂರು ಪರ ಮೋಹನ್, ಬೋಪಣ್ಣ, ಶಶಿತ್ ಗೌಡ ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೂಡಿಗೆ ಪರ ಸೋಹನ್ ಏಕೈಕ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.

ಪ್ರೌಢಶಾಲಾ ಬಾಲಕಿಯರ ಚಾಂಪಿಯನ್ ಪಟ್ಟಕ್ಕಾಗಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಮೈಸೂರು ವಿಭಾಗ ತಂಡ, ಕೂಡಿಗೆ ಕ್ರೀಡಾ ವಸತಿ ನಿಲಯ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ, ಒಟ್ಟು ೧೨ ಅಂಕಗಳನ್ನು ಪಡೆದುಕೊಂಡು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಮೈಸೂರು ಪರ ಕೊಡಗಿನ ಆಟಗಾರ್ತಿಯರಾದ ಅಕ್ಷರ ಮತ್ತು ಪೂರ್ವಿ ತಲಾ ೧ ಗೋಲು ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೂಡಿಗೆ ತಂಡ ಒಟ್ಟು ೯ ಅಂಕಗಳೊAದಿಗೆ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೊಡಗು ಆಟಗಾರರನ್ನೊಳಗೊಂಡ ಮೈಸೂರು ವಿಭಾಗದ ಬಾಲಕರ ತಂಡ ೬ ಅಂಕಗಳೊAದಿಗೆ ಆಗ್ರ ಸ್ಥಾನ ಅಲಕರಿಸಿದರೆ, ಕಲ್ಬುರ್ಗಿ ವಿಭಾಗ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.

ಮೈಸೂರು ವಿಭಾಗ ಬಾಲಕಿಯರ ತಂಡ ಒಟ್ಟು ೪ ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದು ಕೊಂಡರೆ ಕಲ್ಬುರ್ಗಿ ವಿಭಾಗ ೨ ಅಂಕಗಳೊAದಿಗೆ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿತು.

೮ ಹೋಬಳಿಗಳ ಮೈದಾನ ಪುನಶ್ಚೇತನಕ್ಕೆ ಒತ್ತು

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಹಾಕಿ ಎಂದರೆ ಕೊಡಗು. ಕೊಡಗು ಎಂದರೆ ಹಾಕಿ ಎನ್ನುವಂತೆ ಕೊಡಗಿನ ಜನತೆ ಎಲ್ಲ ರೀತಿಯಲ್ಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಂದಿನ ಕ್ರೀಡೆಯ ಯಶಸ್ಸು ನಮ್ಮ ಜಿಲ್ಲೆಯಲ್ಲಿ ಕ್ರೀಡೆಗೆ ನೀಡುವ ಗೌರವದ ಸಂಕೇತವಾಗಿದೆ.(ಮೊದಲ ಪುಟದಿಂದ) ರಾಜ್ಯ ಸರ್ಕಾರ ಕೊಡಗಿನಲ್ಲಿ ಕ್ರೀಡೆಯ ಬೆಳವಣಿಗೆಗೆ ಬೇಕಾದ ಸಹಕಾರವನ್ನು ನೀಡಲು ಸಿದ್ಧವಿದೆ. ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ೮ ಹೋಬಳಿಗಳ ಮೈದಾನವನ್ನು ಅಭಿವೃದ್ಧಿಗೊಳಿಸುವ ಆಶ್ವಾಸನೆಯನ್ನು ನೀಡಿದ್ದೇವೆ. ಅದರಂತೆ ಎರಡು ಹೋಬಳಿಗಳಲ್ಲಿ ಮೈದಾನವನ್ನು ೨೫ ಲಕ್ಷ ಅನುದಾನದಿಂದ ಪುನಶ್ಚೇತನಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಿ ರುತ್ತೇವೆ. ಉಳಿದ ಮೈದಾನಗಳ ಪುನಶ್ಚೇತನ ಕಾರ್ಯವು ಮಳೆಯ ಕಾರಣದಿಂದ ನಿಧಾನವಾಗಿದೆ. ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ಅವಕಾಶಗಳನ್ನು ಕಲ್ಪಿಸುವ ಮೂಲ ಉದ್ದೇಶವನ್ನು ಹೊಂದಿದ್ದೇವೆ. ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹವನ್ನು ನೀಡಬೇಕು. ಕ್ರೀಡೆಯಲ್ಲಿ ಕಲಿಯುವಂತಹ ವಿಷಯ ಬಹಳಷ್ಟು ಇದೆ. ಮಕ್ಕಳು ಸೋಲು ಹಾಗೂ ಗೆಲುವನ್ನು ಸಮಾನ ರೀತಿಯಲ್ಲಿ ತೆಗೆದುಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದರು. ನಂತರ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭ ಕ್ರೀಡೆಯ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ವೀರಾಜಪೇಟೆ ಪ್ರಗತಿ ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣೀರ ಹರೀಶ್, ಗೋಣಿಕೊಪ್ಪಲು ಗ್ರಾಮ ಪಂಚಾಯತಿ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಸ. ಪ. ಪೂ. ಕಾಲೇಜು ಕಾಲೇಜು ಸಿ ಬಿ ಸಿ ಉಪಾಧ್ಯಕ್ಷ ಮೂಕಳೇರ ಕುಶಾಲಪ್ಪ, ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ, ವೀರಾಜಪೇಟೆ ಪ್ರಗತಿ ಶಾಲೆ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆ ಅಧ್ಯಕ್ಷ ಝರುಗಣಪತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ ಬಿ ಆರ್, ದೈಹಿಕ ಶಿಕ್ಷಣ ಪರಿವೀಕ್ಷಕಿ ಕವಿತಾ ತಮ್ಮಯ್ಯ, ಜಿಲ್ಲಾ ಶಾಲಾ ಶಿಕ್ಷಣ ಉಪ ನಿರ್ದೇಶಕ ರಂಗಧಾಮಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳು, ದೈಹಿಕ ಶಿಕ್ಷಕರು ಇನ್ನಿತರರು ಇದ್ದರು. ತೀರ್ಪುಗಾರರಾಗಿ ಚೇಂದಿರ ಡ್ಯಾನಿ ಈರಪ್ಪ, ಚಕ್ಕೇರ ಆದರ್ಶ್, ಬಲ್ಲಚಂಡ ನಾಣಯ್ಯ, ಮೈಂದಪAಡ ದೇವಯ್ಯ, ಮಾಚಂಗಡ ಸೋಮಣ್ಣ, ಅರುಣ, ಕರವಟ್ಟಿರ ಬೋಪಣ್ಣ, ಮಣವಟ್ಟಿರ ಅಯ್ಯಪ್ಪ, ಪೂರ್ಣೇಶ್, ರತೀಶ್ ಕಾರ್ಯನಿರ್ವಹಿಸಿದರು.

ತಾಂತ್ರಿಕ ವಿಭಾಗದಲ್ಲಿ ಮೂಕಳೇರ ಮೀರ ಅಶೋಕ್, ಬೇಪಾಡಿಯಂಡ ಮೋನಿಕಾ, ಬಡ್ಡಿರ ಈಶ್ವರಿ, ಮಚ್ಚಾರಂಡ ಬೋಪಣ್ಣ, ಚೇಂದ್ರಿಮಾಡ ಘಾನ್ ಗಣಪತಿ, ವಿನೋದ್, ಗಣೇಶ್ ಕಾರ್ಯನಿರ್ವಹಿಸಿದರು.

ಚಿತ್ರ ವರದಿ - ಚನ್ನನಾಯಕ