ಮಡಿಕೇರಿ, ಅ. ೩೦: ಈ ಹಿಂದೆ ಕೊಡಗರು ಎಂದಿದ್ದ ದಾಖಲೆಯನ್ನು ಕೆಲ ಸಮಯದ ಹಿಂದೆ ಸರಕಾರದ ಹೊಸ ಆದೇಶದನ್ವಯ ಕೊಡವ ಎಂದು ನಮೂದಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಡವ ಜಾತಿಯ ಜಾತಿ ದೃಢೀಕರಣ ಪ್ರಮಾಣ ಪತ್ರದಲ್ಲಿ ಕೊಡವ ಎಂದು ಬದಲಾವಣೆಯಾಗಿದ್ದರೂ ಶಾಲಾ ದಾಖಲಾತಿ ವಿಚಾರದಲ್ಲಿ ತೊಂದರೆ ಇದ್ದು ಇದನ್ನು ಸರಿಪಡಿಸುವಂತೆ ಜಿಲ್ಲಾ ಅನುದಾನರಹಿತ ಶಾಲೆಗಳ ಒಕ್ಕೂಟದ ಮೂಲಕ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ.

ರಾಜ್ಯದ ವಿದ್ಯಾರ್ಥಿಗಳ ಸಾಧನೆಯ ಟ್ರಾö್ಯಕಿಂಗ್ ಸಿಸ್ಟಮ್ (Sಣuಜeಟಿಣ ಚಿಛಿhivemeಟಿಣ ಣಡಿಚಿಞiಟಿg sಥಿsಣem - SಂಖಿS)

ಶಾಲಾ ದಾಖಲಾತಿ : ಕೊಡವ ದಾಖಲಾತಿ ಸರಿಪಡಿಸಲು ಮನವಿ

(ಮೊದಲ ಪುಟದಿಂದ) ತಂತ್ರಾAಶದಲ್ಲಿ ಈಗಲೂ ಕೊಡಗರು (೭೭೮) ಅಂಡರ್ ಒಬಿಸಿ ೩ಎ ಇದುವರೆಗೂ ಬದಲಾಗಿಲ್ಲ. ವಿದ್ಯಾರ್ಥಿಗಳ ವರ್ಗಾವಣೆ ಪತ್ರದಲ್ಲಿ ಇದೇ ರೀತಿಯಲ್ಲಿ ನಮೂದಾಗುವುದರಿಂದ ಹಾಗೂ ಇತರೆ ದಾಖಲೆಗಳಿಗೆ ಅವಶ್ಯಕತೆ ಇರುವುದರಿಂದ ಇದನ್ನು ತ್ವರಿತವಾಗಿ ಸರಿಪಡಿಸಿಕೊಡಬೇಕಾಗಿದೆ ಎಂದು ಶಾಸಕರಲ್ಲಿ ವಿನಂತಿಸಲಾಗಿದೆ. ಈ ಕುರಿತು ಪತ್ರ ಮುಖೇನ ಶಾಸಕರಿಗೆ ಮನವಿ ಮಾಡಿರುವುದಾಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅವರು ತಿಳಿಸಿದ್ದಾರೆ.