ಪಾಲಿಬೆಟ್ಟ, ಅ. ೩೦: ಕೂಡಿಗೆ, ಮದಲಾಪುರ, ಬ್ಯಾಡಗೂಟ್ಟ ಹಾಡಿಯಲ್ಲಿ ಆಶ್ರಯ ಹಸ್ತ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಶ್ರಯದಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು.
ಏಳು ಮಂದಿ ಗರ್ಭಿಣಿಯರಿಗೆ ಸೀರೆ, ಬಳೆ, ಅರಶಿನ-ಕುಂಕುಮ, ತಾಂಬೂಲ ನೀಡುವುದರ ಮೂಲಕ ಸೀಮಂತ ಶಾಸ್ತç ನೆರವೇರಿಸಲಾಯಿತು. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಸ್ನೇಹ ಕ್ಲಿನಿಕ್‌ನ ಆಪ್ತ ಸಮಾಲೋಚಕಿ ಶ್ರೀಲತಾ ಮಾತನಾಡಿ, ಸೀಮಂತ ಮಾಡುವ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ, ಅಂಗನವಾಡಿ ಕಾರ್ಯಕರ್ತೆ ಶಾಲಿನಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಯೋಜನಾಧಿಕಾರಿ ಗುಣಶೇಖರ್, ಮೇಲ್ವಿಚಾರಕಿ ವೈಶಾಲಿ ಇದ್ದರು.