ಮಡಿಕೇರಿ, ಅ. ೩೧: ವೀರಾಜಪೇಟೆಯ ಹೆಗ್ಗಳ ಸ್ನೇಹ ನಿಲಯ ಆಶ್ರಮದಲ್ಲಿ ರಸಮಂಜರಿ ಕಾರ್ಯಕ್ರಮ ಹಾಗೂ ನೃತ್ಯ ಕಾರ್ಯಕ್ರಮದ ಮೂಲಕ ಆಶ್ರಮವಾಸಿಗಳಿಗೆ ಮನರಂಜನೆ ನೀಡಿತು. ಭೋಜನವನ್ನು ಒದಗಿಸಿತು.
ಇದೇ ಸಂದರ್ಭ ಸ್ಥಳೀಯ ವಿದ್ಯಾರ್ಥಿನಿ ಬಿಂದು ಬೋಪಯ್ಯ ಆಶ್ರಮವಾಸಿ ಹಿರಿಯರೊಂದಿಗೆ ಜನ್ಮ ದಿನವನ್ನು ಆಚರಿಸಿ ಕೇಕ್ ಮತ್ತು ಸಿಹಿ ಹಂಚಿದರು.
ನೊಂದವರ ಬಾಳಿನ ಆಶಾಕಿರಣ ಗೆಳೆಯರ ಬಳಗ ಹಾಗೂ ಫೈವ್ ಸ್ಟಾರ್ ಸಿಂಗರ್ಸ್ನÀ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಮೊಹಮ್ಮದ್ ಅಲಿ, ಕಾರ್ಯದರ್ಶಿ ಎಂ.ಎ. ಅಬ್ದುಲ್ ರಜಾಕ್, ಪ್ರಮುಖರಾದ ಗಿಲ್ಬರ್ಟ್ ಕತ್ತಲೆ ಕಾಡು, ಜಯಂತ್, ಅಬ್ದುಲ್ ಲತೀಫ್, ದೀಕ್ಷಿತ್, ಅಬ್ದುಲ್ ರಜಾಕ್, ಹ್ಯಾರಿಸ್ ಹಾಗೂ ಫೈವ್ ಸ್ಟಾರ್ ಸಿಂಗರ್ಸ್ನÀ ಗಾಯಕರಾದ ಭಾಷಾ, ಶಿವಣ್ಣ, ಹಬೀಬ್, ಗೋಣಿಕೊಪ್ಪದ ಐಕ್ಯಂ ಯುವಸೇನೆ ಅಧ್ಯಕ್ಷ ವಿಘ್ನೇಶ್ ಮತ್ತಿತರರು ಪಾಲ್ಗೊಂಡಿದ್ದರು.