ವೀರಾಜಪೇಟೆ, ಅ. ೩೧: ವೀರಾಜಪೇಟೆ ಕರ್ನಾಟಕ ಸಂಘದಿAದ ನವೆಂಬರ್ ೫ ರಂದು ೬೯ನೇ ಕನ್ನಡ ರಾಜ್ಯೋತ್ಸವವನ್ನು ವೀರಾಜಪೇಟೆಯ ಮಹಿಳಾ ಸಮಾಜದಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತರು, ಪೂರ್ವಾಹ್ನ ೧೦ ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ ಉದ್ಘಾಟಿಸಲಿದ್ದು, ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಮಾಳೇಟಿರ ಬೆಲ್ಲು ಬೋಪಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯೆ ಮಂಡೇಪAಡ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ.
ಉಪಾಧ್ಯಕ್ಷ ಚೇನಂಡ ಗಿರೀಶ್ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಳೇಟಿರ ದಿಶಾ ಪೊನ್ನಮ್ಮ (ಕ್ರೀಡಾ) ಕಟ್ಟೆರ ಲೋಕೇಶ್ (ಸೇನೆ), ಗೀತಾಂಜಲಿ (ಶಿಕ್ಷಣ), ಅಯ್ಯನೆರವಂಡ ಪ್ರೀತಂ ಪೂವಣ್ಣ (ಸಾಹಿತ್ಯ) ಅವರುಗಳನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಖಜಾಂಚಿ ಕೋಟೇರ ಗಣೇಶ್ ಮಾತನಾಡಿ, ರಾಜ್ಯೋತ್ಸವದ ಅಂಗವಾಗಿ ಹಲವು ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಹಾಡಿಗೆ ನೃತ್ಯ (ಒಂದು ಶಾಲೆಯಿಂದ ೯ ವಿದ್ಯಾರ್ಥಿಗಳ ಒಂದು ತಂಡಕ್ಕೆ ಅವಕಾಶ), ಕಾಲೇಜು ವಿಭಾಗದಲ್ಲಿ ನಾಡಗೀತೆಗಳ ಸಮೂಹ ನೃತ್ಯ (ಒಂದು ಕಾಲೇಜಿನಿಂದ ೯ ವಿದ್ಯಾರ್ಥಿಗಳ ಒಂದು ತಂಡಕ್ಕೆ ಅವಕಾಶ), ಸಾರ್ವಜನಿಕರಿಗೆ ಜಾನಪದ ಗೀತೆ, ಚಲನಚಿತ್ರಗೀತೆ, ಕೊಡವ ಹಾಡುಗಳನ್ನು ಹಾಡಬಹುದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಮುಂಡ್ಯೋಳAಡ ಕುಸುಮ ಸೋಮಣ್ಣ, ಮಾಜಿ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ, ನಿರ್ದೇಶಕರುಗಳಾದ ಬಾಚಿರ ಬಿದ್ದಪ್ಪ, ಬೊಳ್ಯಪಂಡ ಸುರೇಶ್ ಉಪಸ್ಥಿತರಿದ್ದರು.