ಕೂಡಿಗೆ, ಅ. ೩೧: ನಂಜರಾಯಪಟ್ಟಣ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ೧೮ನೇ ವಾರ್ಷಿಕೋತ್ಸವ ತಾ. ೭ ಮತ್ತು ೮ ರಂದು ನಡೆಯಲಿದೆ.

ವಾರ್ಷಿಕೋತ್ಸವ ಅಂಗವಾಗಿ ತಾ. ೭ ರಂದು ದುರ್ಗಾಪೂಜೆ, ಪುಣ್ಯಾಹಶುದ್ಧಿ, ತಾ. ೮ ರಂದು ಗಣಪತಿ ಹೋಮ, ಕಳಸ ಪೂಜೆ, ೧೦ ಗಂಟೆಗೆ ಕಲಶಾಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು,

ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.