*ಗೋಣಿಕೊಪ್ಪ, ಅ. ೩೧: ಮಾಯಮುಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಅಂಗವಾಗಿ ನವೆಂಬರ್ ೧೫ ರಂದು ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಆಯೋಜಿಸಲಾಗಿದೆ.

ಪುರುಷರಿಗೆ ಪೊನ್ನಂಪೇಟೆ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ, ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲಾ ಮಟ್ಟದ ಹಗ್ಗಜಗ್ಗಾಟ, ಮಹಿಳೆಯರಿಗೆ ಜಿಲ್ಲಾಮಟ್ಟದ ಬಾಂಬ್ ಇನ್ ದ ಸಿಟಿ ಸ್ಪರ್ಧೆ, ಸಾರ್ವಜನಿಕ ಪುರುಷ, ವಿದ್ಯಾರ್ಥಿಗಳಿಗೆ ಸ್ಲೋ ಸೈಕಲ್ ರೇಸ್ ಆಯೋಜಿಸಲಾಗಿದೆ.

ನವೆಂಬರ್ ೧೭ ರಂದು ಪುರುಷರ ವಾಲಿಬಾಲ್, ಪುರುಷ ಮತ್ತು ಮಹಿಳೆಯರ ಹಗ್ಗಜಗ್ಗಾಟ ಫೈನಲ್ ನಡೆಯಲಿದೆ. ಆಕರ್ಷಕ ನಗದು ಮತ್ತು ಪಾರಿತೋಷಕ ನೀಡಲಾಗುವುದು. ನವೆಂಬರ್ ೧೦ ನೋಂದಣಿಗೆ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸಣ್ಣುವಂಡ ವಿನಯ್ ಅಯ್ಯಪ್ಪ ೯೪೪೯೯೦೭೯೭೫, ಆಪಟ್ಟೀರ ವೀಕ್ಷಿತ್ ೮೧೯೭೦೬೪೪೩೪ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಶತಮಾನೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.