ನಾಪೋಕ್ಲು, ಅ. ೩೧: ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ ಅಂತರ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ಬೇತು, ಯವಕಪಾಡಿ, ಬಲ್ಲಮಾವಟಿ (ವೈಟ್) ಮತ್ತು ಮರಂದೋಡ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.
ಮರಂದೋಡ ತಂಡ ಕುಂಜಿಲ ತಂಡದ ವಿರುದ್ಧ ೩-೧೨ ಅಂತರದಿAದ ಜಯಗಳಿಸಿತು. ಬೇತು ತಂಡ ೩-೦ ಅಂತರದಿAದ ಪುಲಿಕೋಟ್ ವಿರುದ್ಧ ಜಯಗಳಿಸಿತು.
ಬಲ್ಲಮಾವಟಿ (ವೈಟ್) ಮತ್ತು ನಾಲಾಡಿ ತಂಡಗಳ ನಡುವಿನ ಮೂರನೇ ಪಂದ್ಯ ನಡೆಯಿತು. ಎರಡು ತಂಡಗಳು ಸಮಬಲ ಸಾಧಿಸಿದವು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ನಾಲಡಿ ತಂಡ ನಾಲ್ಕು ಗೋಲು ಗಳಿಸಿತು. ಬಲ್ಲಮಾವಟಿ ತಂಡ ೫ ಗೋಲು ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.ಯವಕಪಾಡಿ ತಂಡವು ಪೇರೂರು ಬಿ ತಂಡದ ವಿರುದ್ಧ ೪-೦ ಅಂತರದಿAದ ಜಯ ಸಾಧಿಸಿತು.
ಪಂದ್ಯ ಮುಂದೂಡಿಕೆ
ಅಪರಾಹ್ನ ಸುರಿದ ಮಳೆಯಿಂದಾಗಿ ಪ್ರೌಢಶಾಲಾ ವಿಭಾಗದ ಹಾಕಿ ಪಂದ್ಯಾಟ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳು ಮುಂದೂಡಲ್ಪಟ್ಟವು. ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆ ಹಾಗೂ ಕಕ್ಕಬ್ಬೆ ಪ್ರೌಢಶಾಲೆಗಳ ನಡುವೆ ಆಯೋಜಿಸಲಾಗಿದ್ದ ಹಾಕಿ ಪಂದ್ಯಾಟವನ್ನು ತಾ.೧ ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ಆಯೋಜಿಸಲು ಹಾಕಿ ಸಮಿತಿ ನಿರ್ಧರಿಸಿತು.