ಚೆಯ್ಯಂಡಾಣೆ, ನ. ೪: ಚೆಯ್ಯಂಡಾಣೆ ಸಮೀಪದ ಎಡಪಾಲದ ಪೋಯಪಳ್ಳಿ ಮುಸ್ಲಿಂ ಜಮಾಅತ್‌ನ ಅಧೀನದಲ್ಲಿ ಕಳೆದ ೨೫ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತರ್ಬಿಯತು ತ್ತುಲಬಾ ದರ್ಸ್ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ೩ ದಿನಗಳ ಕಾಲ ಎಡಪಾಲದ ಶೈಖುನಾ ಮೂರ್ಯಾಡ್ ಉಸ್ತಾದ್ ನಗರದಲ್ಲಿ ಯಶಸ್ವಿಯಾಗಿ ಜರುಗಿತು.
ಶುಕ್ರವಾರ ಜುಮುಅ ನಮಾಜ್ ಬಳಿಕ ಕಾರ್ಯಕ್ರಮವನ್ನು ಪೋಯಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎ. ಬಷೀರ್ ಹಾಜಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಮಸೀದಿಯಿಂದ ಹೊರಟ ಬೃಹತ್ ಜಾಥಾ ದಫ್ ಪ್ರದರ್ಶನ, ವಿದ್ಯಾರ್ಥಿಗಳ ಸ್ಕೌಟ್ ನೊಂದಿಗೆ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಅಲ್ಲಿ ಮುದರಿಸ್ ಶೈಖುನಾ ನಿಝಾರ್ ಫೈಝಿ ಝಿಯಾರತ್ ಗೆ ನೇತೃತ್ವ ನೀಡಿದರು, ಶೈಖುನಾ ನಾಲಂಗೇರಿ ಮಜೀದ್ ಮುಸ್ಲಿಯಾರ್ ಮೂರ್ಯಾಡ್ ಉಸ್ತಾದ್ ಮೌಲಿದ್ ಪಾರಾಯಣಕ್ಕೆ ನೇತೃತ್ವ ವಹಿಸಿದ್ದರು.
ರಾತ್ರಿ ಪೋಯಪಳ್ಳಿ ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮ್ಮೇಳನವನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ
(ಮೊದಲ ಪುಟದಿಂದ) ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ಉದ್ಘಾಟಿಸಿ ಮಾತನಾಡಿದರು. ಪ್ರಖ್ಯಾತ ವಾಗ್ಮಿ ರಫೀಕ್ ಸಅದಿ ದೇಲಂಬಾಡಿ ಮುಖ್ಯ ಪ್ರಭಾಷಣ ಮಾಡಿದರು. ಶನಿವಾರ ಸಿಐಡಿಯ ಡಿಟೆಕ್ಟಿವ್ ಇನ್ಸ್ಪೆಕ್ಟರ್ ರಫೀಕ್ ಕೆ.ಎ. ಅಧ್ಯಕ್ಷತೆಯಲ್ಲಿ ನಡೆದ ಮಹಲ್ ಸಂಗಮ ಕಾರ್ಯಕ್ರಮವನ್ನು ಪೆರುಂಬಾಡಿ ಸಂಶುಲ್ ಉಲಮಾ ಎಜುಕೇಷನ್ ಅಕಾಡೆಮಿ ಅಧ್ಯಕ್ಷ ಸಿಪಿಎಂ ಬಷೀರ್ ಹಾಜಿ ಉದ್ಘಾಟಿಸಿದರು. ಮಧ್ಯಾಹ್ನ ನಡೆದ ಯೂತ್ ಮೀಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಯಾಜ್ ಕೆ.ಎ. ವಹಿಸಿದ್ದರು. ಉಪ್ಪಿನಂಗಡಿ ಮುದರಿಸ್ ಅಲ್ ಹಾಜ್ ಅಬ್ದುಲ್ ಸಲಾಂ ಫೈಝಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಮಾತನಾಡಿದರು.
ಸಂಜೆ ಸಾಂಸ್ಕೃತಿಕ ಸಮಾವೇಶ ಪೋಯಪಳ್ಳಿ ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶೈಖುನಾ ನಿಝಾರ್ ಫೈಝಿ ಉದ್ಘಾಟಿಸಿ ಮಾತನಾಡಿದರು.
ರಾತ್ರಿ ಪೋಯಪಳ್ಳಿ ಜಮಾಅತ್ ಉಪಾಧ್ಯಕ್ಷ ನಿವೃತ್ತ ಸಿಆರ್ ಪಿಎಫ್ ಉಮ್ಮರ್ ಅಧ್ಯಕ್ಷತೆಯಲ್ಲಿ ನಡೆದ ಮತ ಪ್ರವಚನ ಕಾರ್ಯಕ್ರಮವನ್ನು ಬೆಂಗಳೂರು ಆರ್ ಸಿಪುರಂ ಜುಮಾ ಮಸೀದಿಯ ಖತೀಬ್ ಹುಸೈನ್ ಫೈಝಿ ಉದ್ಘಾಟಿಸಿದರು. ಮುಖ್ಯ ಭಾಷಣಗಾರರಾಗಿ ವಾಗ್ಮಿ ಅನ್ವರ್ ಮನ್ನಾನಿ ತೋಡುಪುಝ ಆಗಮಿಸಿ ಮಾತನಾಡಿದರು. ಭಾನುವಾರ ಬೆಳಿಗ್ಗೆ ಆತ್ಮೀಯ ಮಜ್ಲಿಸ್‌ಗೆ ಇಸ್ಮಾಯಿಲ್ ಬಾಖವಿ ಮಾಲೂರು ನೇತೃತ್ವ ನೀಡಿದರು. ನಂತರ ಪೂರ್ವ ವಿದ್ಯಾರ್ಥಿ ಸಂಗಮ, ಪೋಷಕರ ಸಭೆ, ಮುತಲೀಮ್, ವಿದ್ಯಾರ್ಥಿ ಸಂಗಮ ನಡೆಯಿತು.
ಸಮಾರೋಪ ಮಹಾ ಸಮ್ಮೇಳನ
ಸಂಜೆ ನಡೆದ ಸಮಾರೋಪ ಮಹಾ ಸಮ್ಮೇಳನದ ಅಧ್ಯಕ್ಷತೆಯನ್ನು ಮುದರಿಸ್ ಶೈಖುನಾ ನಿಝಾರ್ ಫೈಝಿ ವಹಿಸಿ ಮಾತನಾಡಿ ೨೫ ವರ್ಷಗಳ ಸುದೀರ್ಘ ಸೇವೆ ಮರೆಯಲಾಗದ ಸ್ವಪ್ನವಾಗಿದೆ, ಎಡಪಾಲ ನಿವಾಸಿಗಳ ಸ್ನೇಹ ಬಾಂಧÀವ್ಯ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದರು. ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯತುಲ್ ಉಲಮಾ ಕೋಶಾಧಿಕಾರಿ ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್ ಉದ್ಘಾಟಿಸಿ ಮಾತನಾಡಿ ದರ್ಸ್ ವಿದ್ಯಾಭ್ಯಾಸ ಮಾಡಿ ಅದರಿಂದ ದೊರೆಯುವ ಪುಣ್ಯ ಕಾರ್ಯದ ಬಗ್ಗೆ ಹೇಳಿದರು. ೨೫ ವರ್ಷ ಪಳ್ಳಿ ದರ್ಸ್ ನಡೆಸಿದ ಇಲ್ಲಿನ ಮುದರಿಸ್ ಮತ್ತೊಬ್ಬರಿಗೆ ಮಾರ್ಗದರ್ಶಕರಾಗಿದ್ದಾರೆ. ಇದೆ ರೀತಿ ಮುನ್ನೆಡೆಯಲಿ ಎಂದರು. ಮುಖ್ಯ ಭಾಷಣವನ್ನು ಮೂರ್ಯಾಡ್ ಉಸ್ತಾದರ ಪುತ್ರ ಸ್ವಾಲಿಹ್ ಫೈಝಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಸಯ್ಯದ್ ಒಎಂಎಸ್ ತಂಙಳ್, ಅಶ್ರಫ್ ಅಹ್ಸನಿ, ಅಬ್ದುಲ್ ರಹ್ಮನ್ ಮುಸ್ಲಿಯಾರ್ ಆಗಮಿಸಿದ್ದರು. ಸಮಸ್ತ ಕೊಡಗು ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಫೈಝಿ, ಕುಂಜಿಲ ಮುದರಿಸ್ ನಿಝಾರ್ ಫೈಝಿ ಕಕ್ಕಡಿಪುರಂ, ನೆಲ್ಯಹುದಿಕೇರಿ ಖತೀಬ್ ರೌಫ್ ಹುದವಿ, ಮರ್ಕಝಲ್ ಹಿದಾಯ ಚೇರ್ಮೆನ್ ಇಸ್ಮಾಯಿಲ್ ಸಖಾಫಿ, ಎಸ್ ಕೆಐಎಂವಿಬಿ ಕೇಂದ್ರ ಸಮಿತಿಯ ಉಮ್ಮರ್ ಫೈಝಿ, ಪೋಯಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಷೀರ್ ಹಾಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಇದೆ ಸಂದರ್ಭ ೨೫ ವರ್ಷಗಳಿಂದ ದರ್ಸ್ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಶೈಖುನಾ ನಿಝಾರ್ ಫೈಝಿಯವರನ್ನು ಪೋಯಪಳ್ಳಿ ಮುಸ್ಲಿಂ ಜಮಾಅತ್, ದರ್ಸ್ನ ಹಳೆ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಜನೆ ಗೈಯುತ್ತಿರುವ ವಿದ್ಯಾರ್ಥಿಗಳು,ಎನ್ ಎಚ್ ವೈಎ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ದಿಕ್ರ್ ಹಲ್ಕಾ ಮಜ್ಲಿಸ್ ನಾ ಉದ್ಬೋದನಾ ಪ್ರಭಾಷಣವನ್ನು ಮೂರ್ಯಾಡ್ ಮುದರಿಸ್ ಶೈಖುನಾ ಪೋಯನಾಡ್ ಫೈಝಿ ನಡೆಸಿದರೆ, ದಿಕ್ರ್ ಹಲ್ಕಾ ಹಾಗೂ ದುಆಕ್ಕೆ ಶೈಖುನಾ ಉಮ್ಮರ್ ಫೈಝಿ ಉಸ್ತಾದ್ ಕೀಶೇರಿ ನೇತೃತ್ವ ನೀಡಿದರು.
ಈ ಸಂದರ್ಭ ಕಿಕ್ಕರೆ ಜಮಾಅತ್ ಅಧ್ಯಕ್ಷ ಬಷೀರ್, ಕಡಂಗ ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್, ಮೊಯ್ಯದ್ದಿನ್ ಮಸೀದಿಯ ಅಧ್ಯಕ್ಷ ಕುಂಞಅಬ್ದುಲ್ಲ, ಕುತುಬಿಯತ್ ಅಧ್ಯಕ್ಷ ಹಂಝ, ಪೋಯಪಳ್ಳಿ ಜಮಾಅತ್ ಉಪಾಧ್ಯಕ್ಷ ಉಮ್ಮರ್ (ಸಿಆರ್ ಪಿಎಫ್), ಕಾರ್ಯದರ್ಶಿ ಶರೀಫ್ ಝೈನಿ, ಕೋಶಾಧಿಕಾರಿ ಮೊಹಮ್ಮದ್, ಸುಬೈರ್ ಮತ್ತಿತರರು ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಶೈಖುನಾ ಎಂ.ಎA.ಅಬ್ದುಲ್ಲ ಫೈಝಿ ಪ್ರಾರ್ಥಿಸಿ,ಇಬ್ರಾಹಿಂ ಬಾದುಷ ನಿರೂಪಿಸಿ, ಸ್ವಾಗತ ಸಮಿತಿಯ ಕನ್ವಿನರ್ ಮುಹಮ್ಮದ್ ರಫೀಕ್ ಫೈಝಿ ಸ್ವಾಗತಿಸಿದರೆ, ಹಾರಿಸ್ ಬಾಖವಿ ವಂದಿಸಿದರು. -ಅಶ್ರಫ್