ಮಡಿಕೇರಿ, ನ. ೪: ಮರಂದೋಡ ಗ್ರಾಮದಲ್ಲಿ ೪೧ನೇ ವರ್ಷದ ವಾರ್ಷಿಕ ಕ್ರೀಡೋತ್ಸವ ಇತ್ತೀಚೆಗೆ ನಡೆಯಿತು. ಕ್ರೀಡಾ ಪ್ರಮುಖರಾದ ಚೋಯಮಾಡಂಡ ಗಣಪತಿ ಹಾಗೂ ಮಾಜಿ ಸೈನಿಕರಾದ ಸಿ. ಸುರಿಮುತ್ತಪ್ಪ ಉದ್ಘಾಟಿಸಿದರು.
೧೨ ಬೋರ್ ಶೂಟಿಂಗ್ ಹಾಗೂ .೨೨ ಶೂಟಿಂಗ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಕಪ್ಪೆ ಜಿಗಿತ ಸ್ಪರ್ಧೆ, ಪ್ರೌಢಶಾಲಾ ಮಕ್ಕಳಿಗೆ ೧೦೦ ಮೀಟರ್, ೧,೫೦೦ ಮೀಟರ್ ಓಟ, ಭಾರದ ಕಲ್ಲು ಎಸೆತ, ಮಹಿಳೆಯರಿಗೆ ಸೂಜಿಗೆ ನೂಲು ಹಾಕುವ ಸ್ಪರ್ಧೆ, ಮೇಣದ ಬತ್ತಿ ಓಟ,, ಹಗ್ಗಜಗ್ಗಾಟ, ಗೋಣಿಚೀಲ ಗುದ್ದಾಟ, ಗೋಣಿಚೀಲ ಓಟ, ೬೦ ವರ್ಷ ಮೇಲ್ಟಟ್ಟವರಿಗೆ ವೇಗದ ನಡಿಗೆ, ಅಡಿಕೆ ಹಾಳೆಯಲ್ಲಿ ದಂಪತಿಗಳು ಎಳೆಯುವ ಸ್ಪರ್ಧೆ ನಡೆಯಿತು. ವೀಕ್ಷಕ ವಿವರಣೆಯನ್ನು ಚಂಡಿರ ರ್ಯಾಲಿ ಗಣಪತಿ ನೀಡಿದರು.
ಬಾರಿಕೆ ಜೀವಿತಾ ಅವರು .೨೨ನ ಶೂಟಿಂಗ್ನಲ್ಲಿ ಪ್ರಥಮ ಸ್ಥಾನ ಪಡೆದು ಟ್ರೋಫಿ, ನಗದು ತನ್ನದಾಗಿಸಿಕೊಂಡರೆ, ದ್ವಿತೀಯ ಹಾಗೂ ೧೨ ಃoಡಿe ನ ಶೂಟಿಂಗ್ನಲ್ಲಿ ಪ್ರಥಮ ಸ್ಥಾನವನ್ನು ಮುಕ್ಕಾಟಿರ ಅಜಿತ್ ಅವರು ತಮ್ಮದಾಗಿಸಿಕೊಂಡರು. ೧೨ ಬೋರ್ ನಲ್ಲಿ ದ್ವಿತೀಯ ಸ್ಥಾನವನ್ನು ಮಾರ್ಚಂಡ ಮಂದಣ್ಣ ಅವರು ಪಡೆದುಕೊಂಡರು.
ಸಭಾ ಕಾರ್ಯಕ್ರಮ
ಕ್ರೀಡಾ ಸಮಿತಿಯ ಅಧ್ಯಕ್ಷ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅತಿಥಿಗಳಾಗಿ ವೇದಿಕೆಯಲ್ಲಿ ಅಂಚೆ ಇಲಾಖೆಯ ನಿವೃತ್ತ ನೌಕರರಾದ ಬಾರಿಕೆ ಜನಾರ್ದನ್, ಹೆಚ್ಎಎಲ್ನ ನಿವೃತ್ತ ಉದ್ಯೋಗಿ ಅನ್ನಾಡಿಯಂಡ ಪ್ರದೀಪ್ ಕುಮಾರ್, ನಿವೃತ್ತ ಸಿಆರ್ಪಿಎಫ್ನ ಉದ್ಯೋಗಿ ಚೋಯಮಾಡಂಡ ಪವಿತ್ರ, ಮರಂದೋಡ ಪ್ರಾಥಮಿಕ ಶಾಲೆಗೆ ಎರಡು ಎಕರೆ ಜಾಗವನ್ನು ದಾನವಾಗಿ ನೀಡಿದ ಚಂಡಿರ ಕುಟುಂಬದ ಪರವಾಗಿ ಜಗದೀಶ್ ಹಾಗೂ ಕಕ್ಕಬ್ಬೆ ವಿಎಸ್ಎಸ್ನ ನಿರ್ದೇಶಕ ನಿಡುಮಂಡ ಹರೀಶ್ ಪೂವಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಎಂಎಸ್ ಶಾಲೆ ವಿದ್ಯಾರ್ಥಿನಿ ಚಂಡಿರ ಪದವಿ ಪೊನ್ನಮ್ಮ ಪ್ರಾರ್ಥಿಸಿದರು. ಹಿಂದಿನ ಸಾಲಿನ ವರದಿಯನ್ನು ಕಾರ್ಯದರ್ಶಿ ಮುಕ್ಕಾಟಿರ ಅಜಿತ್ ಸಭೆಗೆ ಮಂಡಿಸಿದರು. ಕ್ರೀಡಾ ಸಮಿತಿಯ ಚಂಡಿರ ರ್ಯಾಲಿ ಗಣಪತಿ ಸ್ವಾಗತಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಹಾಡುಗಳು, ನೃತ್ಯಗಳು ನೆರೆದಿದ್ದವರಿಗೆ ಮನರಂಜನೆ ನೀಡಿತು.