ಸುಂಟಿಕೊಪ್ಪ, ನ.೪ : ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ದರ್ಬಾರಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ, ಇತರ ವಾಹನಗಳ ಸವಾರರಿಗೆ ಪ್ರಾಣಕ್ಕೆ ಕಂಟಕ ಪ್ರಾಯವಾಗುತ್ತಿವೆ. ರಾಜ್ಯ ಹೆದ್ದಾರಿಗೆ ಸಂಬAಧಿಸಿದ ಇಲಾಖೆ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುವ ಮೂಲಕ ಅನಾಹುತವನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ವಾಹನ ಚಾಲಕರು ಒತ್ತಾಯಿಸಿದ್ದಾರೆ.

ಸುಂಟಿಕೊಪ್ಪದಿAದ ಸೋಮವಾರಪೇಟೆ ಮೂಲಕ ಹಿರಿಸಾವೆ ಸಂಪರ್ಕ ರಾಜ್ಯ ಹೆದ್ದಾರಿಯು ಇದಾಗಿದ್ದು, ಈ ರಸ್ತೆಯಲ್ಲಿ ನಿತ್ಯವು ನೂರಾರು ವಾಹನ ಹಾಗೂ ದ್ವಿಚಕ್ರ ವಾಹನ, ಭಾರಿ ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತಿರುತ್ತದೆ. ಸುಂಟಿಕೊಪ್ಪದಿAದ ಮಾದಾಪುರದವರೆಗೂ ಭಾರಿ ಗಾತ್ರದ ಹೊಂಡಗಳಾಗಿವೆ. ಕೆಲವು ವರ್ಷಗಳ ಹಿಂದೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳಾಗಿದ್ದು, ದ್ವಿಚಕ್ರ ವಾಹಗಳಲ್ಲಿ ಸಂಚರಿಸುವಾಗ ಹಲವು ಮಂದಿ ಸವಾರರು ಗುಂಡಿಯ ಆರಿವು ಇಲ್ಲದ ಕಾರಣ ಗುಂಡಿಗಳಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮಾದಾಪುರ, ಸುಂಟಿಕೊಪ್ಪ, ಕೊಡಗರಹಳ್ಳಿ, ಕುಶಾಲನಗರಕ್ಕೆ ಈ ಭಾಗದಿಂದ ನಿತ್ಯ ನೂರಾರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಶಾಲಾ-ಕಾಲೇಜುಗಳಿಗೆ ಹಾಗೂ ಗ್ರಾಮಸ್ಥರು ಉದ್ಯೋಗ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳುವ ಮಂದಿ ಈ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.ಹಲವು ಪ್ರವಾಸಿತಾಣಗಳಿದ್ದು ಶನಿವಾರ, ಭಾನುವಾರಗಳಲ್ಲಿ ನಿತ್ಯ ನೂರಾರು ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳಲ್ಲಿ ಈ ಭಾಗದಿಂದಲೇ ಸಂಚರಿಸುತ್ತವೆ. ಇಲಾಖೆಯವರು ಸಂಬAಧಿಸಿದ ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಲೆAದು ವಾಹನ ಸವಾರರು ಒತ್ತಾಯಿಸಿದ್ದಾರೆ.

ಈ ಭಾಗದಲ್ಲಿ ಅತೀ ಹೆಚ್ಚು ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರು ನೆಲೆಸಿದ್ದು, ಈ ಭಾಗದಲ್ಲಿ ನಿಗದಿತ ಸಮಯದಲ್ಲಿ ನಿತ್ಯ ೬ ಖಾಸಗಿ ಬಸ್ ಸಂಚಾರ ಹೊರತುಪಡಿಸಿದರೆ ಮತ್ತೆ ಇನ್ನಿತರ ಸಮಯದಲ್ಲಿ ಬಾಡಿಗೆಗೆ ವಾಹನಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದ್ದು, ಬಾಡಿಗೆ ವಾಹನದವರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಂಬAಧಿಸಿದ ಇಲಾಖೆ, ಜಿಲ್ಲಾಡಳಿತ ಹಾಗೂ ಶಾಸಕರು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು. ವಾಹನ ಚಾಲಕರನ್ನು ಸಂಕಷ್ಟದಿAದ ಪಾರುಗೊಳಿಸುವಂತೆ ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ನೋವನ್ನು ತೊಡಿಕೊಂಡಿದ್ದಾರೆ.

ಕೂಡಲೇ ಸಂಬAಧಿಸಿದ ಇಲಾಖೆಯವರು ಕನಿಷ್ಟ ಹದಗೆಟ್ಟ, ಗುಂಡಿ ಬಿದ್ದಿರುವ ರಸ್ತೆಯ ಗುಂಡಿಗಳನ್ನು ಮುಚ್ಚುವ ಹಾಗೂ ಮುಂದಾಗುವ ಅನಾಹುತಗಳನ್ನು ತಪ್ಪಿಸುವ ಕ್ರಮಕ್ಕೆ ಮುಂದಾಗಲೆAದು ಆಟೋರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ ಶರೀಫ್ ಆಗ್ರಹಿಸಿದ್ದಾರೆ.